ಸರ್ಕಾರಗಳು ರಾಜ್ಯದ ನದಿಗಳ ಜೋಡಣೆಗೆ ಮುಂದಾಗಲಿ
ನುಗ್ಗೇಹಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕರ್ನಾಟಕ ರಾಜ್ಯದ ನದಿಗಳ ಜೋಡಣೆಗೆ ಮುಂದಾಗಬೇಕೆಂದು ತಿಪಟೂರು ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿಗೆ ಸಮೀಪದ ಬಜಗೂರಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭೃದ್ಧಿ ಯೋಜನೆಯ ಕೃಷಿ ಉತ್ಸವ ಸಮಾರಂಭದ ಸನ್ನಿಧ್ಯವಹಿಸಿ ಆರ್ಶಿವಚನ ನೀಡಿದರು. ರೈತರು 800-1000 ಅಡಿ ಇಂದ ಪಂಪ್ಸೆಟ್ನಿಂದ ನೀರು ಎತ್ತಿ ತೆಂಗು ಬೆಳೆ ಬೆಳೆದರು. ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ರೈತರ ಮಕ್ಕಳು ಪಟ್ಟಣಕ್ಕೆ ಹೊಲಸೆ ಹೋಗಿ 4000- 5000 ಸಂಬಳಕ್ಕೆ ದುಡಿಯುವಂತ ಸ್ಥಿತಿ ಬಂದಿದೆ. ಸರ್ಕಾರಗಳು ನೀರಾವರಿ ಯೋಜನೆಗಳನ್ನು ಬಳಕೆ ಮಾಡಿ ಕೊಟ್ಟರೆ ರೈತ ಸ್ವಾವಲಂಬಿಯಾಗಿ ಬದುಕಬಹುದು ಎಂದು ತಿಳಿಸಿದರು.
ಮಾಜಿ ಶಾಸಕ ನಾಗೇಶ ಮಾತಾನಾಡಿ, ಗುಜಾರಾತ್ ಮದ್ಯ ಪ್ರದೇಶದ ಮುಖ್ಯಮಂತ್ರಿಗಳು ರೈತರಿಗೆ ನೀರಾವರಿ ಯೋಜನೆ ಕಲ್ಪಿಸಿರುವುದರಿಂದ ಆ ರಾಜ್ಯಗಳು ಅಭಿವೃದ್ಧಿ ಹೊಂದಿ ಶೇ.35ರಷ್ಟು ಆಹಾರ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದಾರೆ ಎಂದರು.
ಸಮರಂಭದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಮೈಸೂರು ಪ್ರಾದೇಶಿಕ ನಿರ್ದೇಶಕರು ಶ್ರೀಹರಿ, ಜಿಲ್ಲಾ ನಿರ್ದೇಶಕರು ಗಂಗಾಧರ ರೈ, ಶಿವಕುಮಾರ ಸ್ವಾಮಿ, ಯೋಜನಾಧಿಕಾರಿ ಶ್ರೀನಿವಾಸ್, ಮೇಲ್ವಿಚಾರಕ ಶಶಿಕಿರಣ್, ಮೇಲ್ವಿಚಾರಕ ಶಿವಣ್ಣ, ನಂದಿತ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

