ಹಾಸನ

14ರಂದು ಆಲೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Published On :

ಕನ್ನಡಪ್ರಭ ವಾರ್ತೆ    ಆಲೂರು    ಜು. 1
ಐದನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ತಾಲೂಕಿನ ಕೆ. ಹೊಸಕೋಟೆ ಹೋಬಳಿ ಹರಿಹಳ್ಳಿ ಶ್ರೀ ಕೆಂಚಾಂಬ ಸಮುದಾಯ ಭವನದಲ್ಲಿ ಭರದ ಸಿದ್ಧತೆ ನಡೆದಿದೆ. ಜು. 14ರಂದು ನಡೆವ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನ ಹಿರಿಯ ಸಾಹಿತಿ ಹರಿಹಳ್ಳಿ ರಾಜಾರಾವ್ ಹೆಸರಿನಲ್ಲಿ ವೇದಿಕೆ ನಿರ್ಮಾಣವಾಗುತ್ತಿದೆ.
ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳು ಸಾರ್ವಜನಿಕರು, ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡು ಅಕ್ಷರ ತೇರು ಎಳೆಯಬೇಕೆಂದು ಪರಿಷತ್ ಗೌರವಾಧ್ಯಕ್ಷ ಎ.ಎಚ್. ರಮೇಶ್ ಮನವಿ ಮಾಡಿದ್ದಾರೆ. ಈ ಸಂಬಂಧವಾಗಿ 5ನೇ ಸಾಹಿತ್ಯ ಸಮ್ಮೇಳದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ವಳಗರಳ್ಳಿ ವಿಶ್ವನಾಥ ಅವರನ್ನು ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು, ವಳಹರಳ್ಳಿ ಗ್ರಾಮದ ಅವರ ಮನೆಗೆ ತೆರಳಿ ಆತ್ಮೀಯವಾಗಿ ಆಹ್ವಾನಿಸಿದರು.
ಉನ್ನತ ವ್ಯಾಸಂಗ: ಈ ವೇಳೆ ಮಾತನಾಡಿದ ಹಿರಿಯ ಚೇತನ ಕೆ.ವೈ. ಲಕ್ಷ್ಮೇಗೌಡ, ಬಾಲ್ಯದಲ್ಲಿ ವಿಶ್ವನಾಥ್ ನನ್ನ ಅತ್ಯಂತ ನೆಚ್ಚಿನ ಶಿಷ್ಯರಾಗಿದ್ದರು. ಬಡತನದಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಯಲ್ಲಿದ್ದು, ಈಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ಗುರುವಾದ ನನಗೆ ಸಂದ ಗೌರವ ಎಂದರು.
ಸಾಹಿತಿ ಡಾ. ವಿಶ್ವನಾಥ್ ಮಾತನಾಡಿ, ವಳಗರಳ್ಳಿಯಂತಹ ಕುಗ್ರಾಮದಲ್ಲಿ ಕೂಲಿಕಾರರ ಮಗನಾಗಿ ಹುಟ್ಟಿದ ನಾನು, ತಂದೆ, ತಾಯಿ, ಗುರು ಹಿರಿಯರ ಆಶೀರ್ವಾದದಿಂದ ಉನ್ನತ ವ್ಯಾಸಂಗ ಮಾಡಲು ಸಾಧ್ಯವಾಯಿತು. ತಾಲೂಕು ಕಸಾಪ ನನ್ನನ್ನು 5ನೇ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದರು. ಡಾ. ಜಯರಾಜ್, ಎ.ಎಸ್. ಗೋಪಾಲ ಕೃಷ್ಣ, ಟಿ.ಕೆ. ನಾಗರಾಜ್, ಎ.ಟಿ. ಮಲ್ಲೇಶ್, ಬಿ.ಎಸ್. ವೀರಭದ್ರ ಸ್ವಾಮಿ, ಎಚ್.ವಿ. ರಾಘವೇಂದ್ರ, ಕೃಷ್ಣಭಟ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.