ಹಾಸನ

ಸೋಮವಾರಪೇಟೆಗೆ 4 ಗ್ರಾಪಂಗಳನ್ನು ಸೇರಿಸಿ

Published On :

ಹೋರಾಟ ಸಮಿತಿ ಸದಸ್ಯ ರಾಜೇಗೌಡ ಒತ್ತಾಯ


ಹಾಸನ; ಸಕಲೇಶಪುರ ತಾಲೂಕಿನ ಹೊಸೂರು, ಚಂಗಡಿಹಳ್ಳಿ, ಉಚ್ಚಂಗಿ, ವನಗೂರು ಗ್ರಾಮ ಪಂಚಾಯ್ತಿಯಗಳನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿಗೆ ಸೇರಿಸುವಂತೆ ಹೊಸೂರು, ಚಂಗಡಿಹಳ್ಳಿ, ಉಚ್ಚಂಗಿ, ವನಗೂರು ಗ್ರಾಮ ಪಂಚಾಯ್ತಿ ಹಾಗೂ ಹೋರಾಟ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.
ಸಮಿತಿ ಸದಸ್ಯ ರಾಜೇಗೌಡ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಸಕಲೇಶಪುರ ತಾಲೂಕಿನ 4 ಗ್ರಾಮ ಪಂಚಾಯ್ತಿಗಳಾದ ಹೊಸೂರು, ಚಂಗಡಿಹಳ್ಳಿ, ಉಚ್ಚಂಗಿ, ವನಗೂರಿನ ಸುಮಾರು 50ಕ್ಕೂ ಹೆಚ್ಚು ಗ್ರಾಮಗಳು ಕೊಡಗಿನ ಸೋಮವಾರಪೇಟೆ ತಾಲೂಕಿಗೆ ಹೊಂದಿಕೊಂಡಿದೆ. ಕೇವಲ 15 ಕಿಮೀ ಅಂತರದಲ್ಲಿವೆ. ಸದರಿ ತಾಲೂಕಿನ ಹೋಬಳಿ ಕೇಂದ್ರವಾದ ಶನಿವಾರ ಸಂತೆ 2ರಿಂದ 3ಕಿಮೀ ಅಂತರದಲ್ಲಿ ಇದೆ. ಆದರೆ ನಮ್ಮ ತಾಲೂಕು ಕೇಂದ್ರ ಸಕಲೇಶಪುರ 45 ಕಿಮೀ ಇದ್ದು, ಜಿಲ್ಲಾ ಕೇಂದ್ರವಾದ ಹಾಸನ 70ರಿಂದ 80 ಕಿಮೀ ದೂರದಲ್ಲಿದೆ ಎಂದರು.
ನಿಕಟ ಸಂಪರ್ಕ: ಈ ಭಾಗದ ಜನರ ಸಂಸ್ಕೃತಿ, ಧಾರ್ಮಿಕ ಆಚರಣೆ, ಉಡುಪು, ಆಹಾರ, ಆಚರಣೆಗಳೆಲ್ಲವು ಸೋಮವಾರಪೇಟೆ ತಾಲೂಕಿನ ಜನತೆ ತರಹವೇ ಇದೆ. ಅಲ್ಲದೆ ಆ ಭಾಗದಲ್ಲಿ ಶೇ.90ರಷ್ಟು ಜನತೆ ಸೋಮವಾರಪೇಟೆಯ ನಾನಾ ಭಾಗದಲ್ಲಿ ಬಾಂಧವ್ಯ ಹೊಂದಿ ನಿಕಟ ಸಂಪರ್ಕ ಸಂಬಂಧವನ್ನು ಹೊಂದಿದ್ದಾರೆ. ಈ ಭಾಗದ ಜನತೆಯ ಮಕ್ಕಳ ಶೈಕ್ಷಣಿಕ ಸಂಬಂಧ ಕೇಂದ್ರಗಳು ಸೋಮವಾರಪೇಟೆ ತಾಲೂಕಾಗಿದೆ.
ಸಾರಿಗೆ ವ್ಯವಸ್ಥೆ ತಾಲೂಕು ಮತ್ತು ಜಿಲ್ಲಾ ಕೇಂದ್ರಕ್ಕೆ 2ಅಥವಾ 3 ಬಸ್ಗಳಿದ್ದು, ಸಂಚಾರ ವ್ಯವಸ್ಥೆ ಅವ್ಯವಸ್ಥೆಯಾಗಿರುತ್ತದೆ. ಕಾರಣ ಇಲ್ಲಿಯ ರಸ್ತೆಗಳು ಡಾಂಬರು ಕಂಡು ಅನೇಕ ವರ್ಷಗಳೇ ಕಳೆದಿವೆ. ಇನ್ನು ಕಂದಾಯ ಅಥವಾ ಇನ್ನಾವುದೇ ಇಲಾಖೆಯಲ್ಲಿ ರೈತಾಪಿ ಜನ 45 ರಿಂದ 80 ಕಿಮೀ ಪ್ರಯಾಣಿಸಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಪೂರ್ಣಗತಿಯಲ್ಲಿ ಪಡೆಯಲು ಆಗುತ್ತಿಲ್ಲ ಎಂದು ಆರೋಪಿಸಿದರು.
ಒತ್ತಾಯ: ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈ ಭಾಗದ ಗ್ರಾಮ ಪಂಚಾಯ್ತಿಗಳನ್ನು ಕೊಡಗಿನ ಸೋಮವಾರಪೇಟೆಗೆ ತಾಲೂಕಿಗೆ ಸೇರಿಸಲು, ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ 50 ಗ್ರಾಮಗಳ ಅಭ್ಯುದಯಕ್ಕಾಗಿ ಹಸ್ತಾಂತರಿಸಲು ಅಭ್ಯಂತರವಿಲ್ಲ ಎಂದು ಲಿಖಿತ ಭರವಸೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಸ್.ಎಸ್. ಬಸಪ್ಪ, ಪರಮೇಶ್, ಲಕ್ಷ್ಮಣ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.