ಹಾಸನ

ಹಿಂದೂ ಸಂಘಟನೆಗಳು ಎಲ್ಲ ಹಿಂದೂಗಳ ಸ್ವತ್ತು: ಶ್ರೀ

Published On :

ಹಾಸನ: ವಿಶ್ವಹಿಂದುಪರಿಷತ್, ಆರ್ಎಸ್ಎಸ್ ಹಾಗೂ ಭಜರಂಗದಳ ಕೆಲವರ ಸ್ವತ್ತಲ್ಲ. ಅದು ಎಲ್ಲ ಹಿಂದುಗಳ ಸ್ವತ್ತಾಗಿದೆ ಎಂದು ಶ್ರೀ ಜವೇನಹಳ್ಳಿ ಮಠದ ಪೀಠಾಧಿಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ ಹೇಳಿದ್ದಾರೆ.
ನಗರದ ಶ್ರೀಸೀತಾ ರಾಮಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಶನಿವಾರ ನಡೆದ ವಿಶ್ವಹಿಂದು ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತೀಯ ಬೈಠಕ್ನಲ್ಲಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳಿಗೆ ಕೇವಲ ಬ್ರಾಹ್ಮಣರು ಮಾತ್ರ ಬರಬೇಕೆಂಬ ನಿಯಮಗಳಿಲ್ಲ. ಹಿಂದುಗಳೆಲ್ಲಾ ಸೇರಿ ಸಂಘಟನೆ ಮಾಡಬೇಕು. ಸಂಘಟನಾತ್ಮಕವಾಗಿ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.
ಮತಾಂತರ ಸಮಸ್ಯೆ: ಈಗಾಗಲೇ ನಾನಾ ಭಾಗಗಳಲ್ಲಿ ಮತಾಂತರ ಎಂಬುದು ನಿರಂತರವಾಗಿ ನಡೆಸಲಾಗುತ್ತಿದೆ. ಇಂತಹ ವಿಚಾರದ ಬಗ್ಗೆ ಎಚ್ಚರವಹಿಸಬೇಕಾಗಿದೆ. ನಾವು ನಮ್ಮವರು ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಜಾತಿ ಸಂಘರ್ಷ ಕಡಿಮೆ ಮಾಡಿ ಎಲ್ಲಾ ಸಮಾಜವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವೇದಭಾರತೀಯಿಂದ ಅಗ್ನಿ ಹೋಮ ನಡೆಸಲಾಯಿತು. ನಾನಾ ಭಾಗಗಳಿಂದ ಶಿಬಿರಕ್ಕೆ ಹಿಂದುಗಳು ಆಗಮಿಸಿದ್ದರು.
 ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಆಂಧ್ರ ವಿಶ್ವಹಿಂದು ಪರಿಷತ್ ಕಾರ್ಯದರ್ಶಿ ಗೋಪಾಲಾಜಿ, ಪ್ರಾಂತ ಕರ್ನಾಟಕ ಗೌರವಧ್ಯಕ್ಷ ಎಂ.ಬಿ.ಪುರಾಣಿಕ್, ರಾಜ್ಯ ಕಾರ್ಯದರ್ಶಿ ಶೆಣೈ, ಉಪಾಧ್ಯಕ್ಷ ಶಂಕರಪ್ಪ, ಸೀತಾರಾಮಾಂಜನೇಯ ದೇವಸ್ಥಾನ ಸಮಿತಿ ಕಾರ್ಯದರ್ಶಿ ಮೈತ್ರಿ ಶೇಷಗಿರಿ, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀನಿವಾಸಗೌಡ, ಕಾರ್ಯದರ್ಶಿ  ಕಟ್ಟಾಯ ಶಿವಕುಮಾರ್, ಭಜರಂಗದಳದ ಜಿಲ್ಲಾ ಸಂಚಾಲಕ ವಿಜಯಕುಮಾರ್, ಸಹ-ಸಂಚಾಲಕ ಪಾರ್ಥಸಾರಥಿ, ಗುರುರಾಜ್, ಕಾರ್ಯದರ್ಶಿ ಎಚ್.ಎನ್.ಮಂಜುನಾಥ್, ಶಿವಣ್ಣ ಅರಹಳ್ಳಿ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.