ಜಿಲ್ಲೆಯ ರೇಲ್ವೆ ಯೋಜನೆಗೆ ಮುಕ್ತಿ ದೊರೆಯುವುದೇ?
ದಯಾಶಂಕರ ಮೈಲಿ
ಹಾಸನ: ಹಾಸನ ಜಿಲ್ಲೆಯು ರೇಲ್ವೆ ಯೋಜನೆಗಳ ಅಭಿವೃದ್ಧಿಯಲ್ಲಿ ತುಂಬಾ ಹಿಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದರಿಂದ ಜಿಲ್ಲೆಯಲ್ಲಿ ಕೈಗಾರಿಕೆ, ಕೃಷಿ ಮತ್ತು ಪ್ರವಾಸೋದ್ಯಮ ಹಿನ್ನಡೆ ಅನುಭವಿಸಲು ಕಾರಣವಾಗಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಈಗ ರೇಲ್ವೆ ಸಚಿವರಾಗಿರುವ ಕರ್ನಾಟಕದವರೇ ಆದ ಸದಾನಂದಗೌಡರು, ತಮ್ಮ ಬಜೆಟ್ನಲ್ಲಿ ಜಿಲ್ಲೆಯಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಕಾರ್ಯಗತ ಮಾಡಬೇಕು. ಆ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಒತ್ತು ನೀಡಬೇಕು ಎಂಬ ಆಶಾಭಾವನೆಯನ್ನು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟ ಅಧ್ಯಕ್ಷ ಚಂದ್ರಶೇಖರ್, ಗೌರವ ಕಾರ್ಯದರ್ಶಿ ಟಿ.ಪಿ. ರಂಗನಾಥ ಗುಪ್ತ ವ್ಯಕ್ತಪಡಿಸಿದ್ದಾರೆ.
ಯಾವ್ಯಾವ ಯೋಜನೆಗಳು
ಹಾಸನ- ಬೆಂಗಳೂರು ನಡುವೆ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಹೆಚ್ಚಿನ ಅನುದಾನವನ್ನು ನೀಡಿ, ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇದರಂದಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಇಂಬು ದೊರೆತಂತಾಗುತ್ತದೆ.
ಬೆಂಗಳೂರು-ಹಾಸನ-ಮಂಗಳೂರು ರೈಲು ಸಂಪರ್ಕ ಸರಿಯಾಗಿ ಇರದ ಕಾರಣ, ಹಲವು ಕೈಗಾರಿಕಾ ಉದ್ಯಮಗಳು ವಾಪಸ್ ಹೋಗಿವೆ. ಆದ್ದರಿಂದ ಈ ಸಂಪರ್ಕ ವ್ಯವಸ್ಥೆಯನ್ನು ಸರಿಪಡಿಸಬೇಕು.
ಹಾಸನ ನಗರದಲ್ಲಿ ಹೊಸ ಬಸ್ಸು ನಿಲ್ದಾಣಕ್ಕೆ ಆದಷ್ಟು ತ್ವರಿತಗತಿಯಲ್ಲಿ ಮೇಲು ಸೇತುವೆಯ ನಿರ್ಮಾಣವಾಗಬೇಕು.
ಹಾಲಿ ಯಶವಂತಪುರ-ಹಾಸನ-ಕಾರವಾರ ರೈಲನ್ನು ವಾರದಲ್ಲಿ 3 ದಿನ ಮಾತ್ರ ಹಗಲಿನಲ್ಲಿ ಓಡಿಸುತ್ತಿದ್ದು ಅದನ್ನು ಪ್ರತಿ ದಿನ ಚಲಿಸುವಂತೆ ಮಾಡಿದಲ್ಲಿ ಇದರಿಂದ ಆದಾಯವು ಮೂರುಪಟ್ಟು ಹೆಚ್ಚಾಗಲಿದೆ.
ಹೊಳೆನರಸೀಪುರ ರೈಲು ನಿಲ್ದಾಣದಲ್ಲಿ ಹೆಚ್ಚು ಪ್ಲಾಟ್ಫಾರಂ ನಿರ್ಮಿಸಬೇಕು ಹಾಗೂ ಅರಸೀಕೆರೆ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ಇನ್ನೂ ಎರಡು ಪ್ಲಾಟ್ಫಾರಂನ್ನು ನಿರ್ಮಿಸುವ ಅಗತ್ಯವಿದೆ.
ಚಿಕ್ಕಮಗಳೂರಿನಿಂದ - ಬೇಲೂರು-ಸಕಲೇಶಪುರಕ್ಕೆ ರೈಲು ಮಾರ್ಗ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಹಾಗೂ ದುದ್ದ-ತಿಪಟೂರು ಮಾರ್ಗಕ್ಕೆ ಹೆಚ್ಚಿನ ಅನುದಾನ ನೀಡಬೇಕಾಗಿದೆ.
ಹೊಳೆನರಸೀಪುರ-ಅರಕಲಗೂಡು-ಕೊಣನೂರು ಮುಖಾಂತರ ಮಡಿಕೇರಿಗೆ ರೇಲ್ವೆ ಯೋಜನೆಗೆ ಕಾಯಕಲ್ಪ, ಮಂಗಳೂರು-ಹಾಸನ, ಬೆಂಗಳೂರು ರೇಲ್ವೆ ಕಾರಿಡಾರ್ಗೆ ಒತ್ತು ನೀಡುವುದು.
ಅರಸೀಕೆರೆ ತುಮಕೂರು ನಡುವೆ ಜೋಡಿ ಮಾರ್ಗ, ಬೀರೂರು ಮತ್ತು ಅರಸೀಕರೆ ನಡುವೆ ಜೋಡಿ ಮಾರ್ಗ ನಿರ್ಮಾಣ, ಹೊಸದಾಗಿ ಹಾಸನ- ಮೈಸೂರು ನಡುವೆ ಎರಡು ಪ್ಯಾಸೆಂಜರ್ ರೈಲು ಹೆಚ್ಚುವರಿ ಸಂಚಾರಕ್ಕೆ ಬಿಡಬೇಕು.
ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಮಂಜೂರಾಗಿದ್ದ ಬೆಂಗಳೂರು- ನೆಲಮಂಗಲ- ಶ್ರವಣಬೆಳಗೊಳ- ಹಾಸನ ನಡುವಿನ 166 ಕಿ.ಮೀ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ರೈಲುಗಳು ಸಂಚರಿಸುವಂತಾದರೆ ಹಾಸನ- ಬೆಂಗಳೂರು ನಡುವೆ ಬಸ್ಸು ಮಾರ್ಗಕ್ಕಿಂತ 20 ಕಿ.ಮೀ ಸಂಚಾರ ಅವಧಿ ಕಡಮೆಯಾಗುತ್ತದೆ.
ಹಾಸನ- ಮಂಗಳೂರು ರೈಲು ಮಾರ್ಗ
ಹಾಸನ- ಮಂಗಳೂರು ನಡುವೆ ಹೆಚ್ಚು ರೈಲುಗಳು ಸಂಚರಿಸುವಂತಾದರೆ ರೈತರು ತಾವು ಬೆಳೆದ ತರಕಾರಿ ಮತ್ತಿತರ ಬೆಳೆಗಳನ್ನು ಮಂಗಳೂರಿಗೆ ಕಡಮೆ ದರದಲ್ಲಿ ಸಾಗಾಣಿಕೆ ಮಾಡಲು ಅನುಕೂಲವಾಗುತ್ತಿತ್ತು. ಜಿಲ್ಲೆಯ ಕೈಗಾರಿಕೋದ್ಯಮಿಗಳು ಕೂಡ ತಾವು ತಯಾರಿಸಿದ ವಸ್ತುಗಳನ್ನು ಮಂಗಳೂರಿನ ಬಂದರಿಗೆ ಸಾಗಿಸಲು ಮತ್ತು ಬೇರೆ ರಾಜ್ಯ ಮತ್ತು ದೇಶಗಳಿಂದ ಆಮದು ಮಾಡಿಕೊಂಡ ವಸ್ತುಗಳನ್ನು ಕಡಮೆ ಬೆಲೆ ಸಾಗಿಸಿಕೊಳ್ಳಲು ಸಹಾಯಕವಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

