ಪರಿಸರ ರಕ್ಷಣೆ ಎಲ್ಲರ ಹೊಣೆ: ನ್ಯಾ.ಶೀನಪ್ಪ
ಅರಕಲಗೂಡು: ಪರಿಸರವನ್ನು ಸಂರಕ್ಷಣೆ ಮಾಡಿಕೊಳ್ಳವುದು ನಮ್ಮೆಲ್ಲರ ಕರ್ತವ್ಯ ಎಂದು ಅರಿತು ಸಾಗುವ ಅವಶ್ಯಕತೆ ಇದೆ ಎಂದು ಇಲ್ಲಿನ ನ್ಯಾಯಾಲಯದ ನ್ಯಾಯಾಧೀಶ ಶೀನಪ್ಪ ತಿಳಿಸಿದ್ದಾರೆ. ವನಮಹೋತ್ಸವದ ಅಂಗವಾಗಿ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದ ಅವರು ಉತ್ತಮ ಪರಿಸರವನ್ನು ಕಾಯ್ದುಕೊಂಡರೆ ನಮ್ಮೆಲ್ಲರ ಬದುಕು ಹಸನಾಗುತ್ತದೆ.ಪ್ರತಿಯೊಬ್ಬರೂ ಉತ್ತಮ ಪರಿಸರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕೆಂದರು. ನ್ಯಾ. ಗಿರೀಶ್, ನ್ಯಾ. ಕೂರ್ಣಿಕಾಂತ್ ಢಾಕು, ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ ಇತರರು ಇದ್ದರು.
ಮಳೆಗಾಗಿ ವರುಣ ಜಪ
ಚನ್ನರಾಯಪಟ್ಟಣ: ರಾಜ್ಯದಲ್ಲಿ ಮಳೆ ಕ್ಷೀಣಿಸುತ್ತಿದ್ದು, ಉತ್ತಮ ಮಳೆಗಾಗಿ ವರುಣ ಜಪ ನಡೆಸಿದ ಪಟ್ಟಣದ ಹೊರಭಾಗದಲ್ಲಿರುವ ಗದ್ದೆ ರಾಮೇಶ್ವರ ದೇವಾಲಯದಲ್ಲಿ ಸೋಮವಾರ ಪರ್ಜನ್ಯ ಜಪ ನಡೆಯಿತು.
ಪಟ್ಟಣದ ಬ್ರಾಹ್ಮಣ ಯುವವೇದಿಕೆ, ಬ್ರಾಹ್ಮಣ ಮಹಾಸಭಾ,ಋತ್ವಿಕ್ ಸಭಾ, ಬ್ರಾಹ್ಮಣ ಯುವ ವೇದಿಕೆ ಹಾಗೂ ಬ್ರಾಹ್ಮಣ ಮಹಿಳಾ ವೇದಿಕೆ ಸದಸ್ಯರುಗಳು ಪಟ್ಟಣದ ಹೊರ ಭಾಗದಲ್ಲಿರುವ ಗದ್ದೆ ರಾಮೇಶ್ವರ ದೇವಾಲಯದಲ್ಲಿ ವಿವಿಧ ಪೂಜೆ ಹಾಗೂ ಅಭಿಷೇಕ ನಡೆಸಿದರು. ಸೋಮವಾರ ಪ್ರಾತಕಾಲದಿಂದ ರಾಮೇಶ್ವರನಿಗೆ ರುದ್ರಾಭೀಷೇಕ, ಪಂಚಾಮೃತಾಭಿಷೇಕ, ಶತಾವರ ರುದ್ರಾಭಿಷೇಕದ ನಂತರ ಗರ್ಭಗುಡಿಯಲ್ಲಿನ ರಾಮೇಶ್ವರ ಲಿಂಗದೆತ್ತರಕ್ಕೆ ಜಲವನ್ನು ತುಂಬಿಸಿ ಪೂಜೆ ಸಲ್ಲಿಸಿದರು. 25ಕ್ಕೂ ಹೆಚ್ಚು ಋತ್ವಿಕರು ವಿವಿದ ಮಂತ್ರಪಠನೆಗಳನ್ನು ಸಲ್ಲಿಸಿ ವರುಣದೇವ ಬರಗಾಲವನ್ನು ನೀಗಿಸುವಂತೆ ಶಿವನಲ್ಲಿ ಪ್ರಾರ್ಥಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

