ಪ್ರಾಧಿಕಾರ ಅಧ್ಯಕ್ಷ ಹುದ್ದೆ ದಲಿತರಿಗೆ: ಭರವಸೆ
ಬೇಲೂರು: ಬೇಲೂರು, ಹಳೇಬೀಡು ಪ್ರಾಧಿಕಾರ ಅಧ್ಯಕ್ಷರಾಗಿ ಹಿರಿಯ ದಲಿತ ಮುಖಂಡ ದೊರೆಯಪ್ಪನವರಿಗೆ ನೀಡಲು ಉಸ್ತುವಾರಿ ಸಚಿವರ ಜತೆ ಚರ್ಚಿಸುವುದಾಗಿ ಶಾಸಕ ವೈ.ಎನ್.ರುದ್ರೇಶಗೌಡ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಶನಿವಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಹಿತಾ ರಕ್ಷಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಬೇಲೂರು ತಾಲೂಕಿನಲ್ಲಿ ಸುಮಾರು 65 ಸಾವಿರ ದಲಿತರಿದ್ದು, ಅವರಿಗೆ ಸಾಮಾಜಿಕ ನ್ಯಾಯ ದೊರಕಿಸಲು ತಾವು ಬದ್ದ ಎಂದರು. ಬೇಲೂರು ತಾಲೂಕು ಪಂಚಾಯಿತಿಯಲ್ಲಿನ ಮೂರನೇ ಹಂತದ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜನಾಂಗಕ್ಕೆ ಬಂದ ವೇಳೆ, ಕೆಲವರು ಬಿಸಿಎಂಎ ಮಾಡಿಸಿಕೊಂಡು ಬಂದಿದ್ದಾರೆ. ಅದರೆ ನಾವುಗಳು ಯಾಥಾ ಸ್ಥಿತಿ ಕಾಪಾಡಲು ನ್ಯಾಯಾಂಗದ ಮೋರೆ ಹೋಗಲು ಸಿದ್ದ ಎಂದ ಅವರು, ತಾಲೂಕಿನ ಕೆಲ ಭಾಗದಲ್ಲಿ ಗಂಗಾಕಲ್ಯಾಣ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ತನಿಖೆ ನಡೆಸಲಾಗುವುದು ಎಂದರು. ತಾಲೂಕು ಪಂಚಾಯಿತಿ ಅಧ್ಯಕ್ಷ ಪರ್ವತಯ್ಯ ಮಾತನಾಡಿ, ತಾಲೂಕಿನಲ್ಲಿ ಪರಿಶಿಷ್ಟರ ಸಭೆಯನ್ನು ತ್ರೈಮಾಸಿಕ ಸಭೆ ಮಾಡಬೇಕು, ಪರಿಶಿಷ್ಟರಿಗೆ ಮೀಸಲಾದ ಮರಳು ಅಂಕೆಯನ್ನು ತಾಲೂಕಿನ ದಲಿತರಿಗೆ ನೀಡಬೇಕು, ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ದಲಿತರಿಗೆ ನೀಡಬೇಕು ಎಂದರು. ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ.ಆರ್.ವೆಂಕಟೇಶ ಮಾತನಾಡಿ ತಾಲೂಕಿನ ಬಹುತೇಕ ಗ್ರಾಮದಲ್ಲಿ ದಲಿತ ವರ್ಗದ ಸ್ಮಶಾಣಗಳು ಒತ್ತುವರಿ ಮಾಡಿದ್ದಾರೆ, ಈ ಬಗ್ಗೆ ತಾಲೂಕು ತಹಸೀಲ್ದಾರ್ ಕ್ರಮ ಕೈಗೊಳ್ಳಬೇಕು ಎಂದರು. ಸಭೆಯಲ್ಲಿ ತಹಸೀಲ್ದಾರ್ ಜಗದೀಶ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಜಿ.ಟಿ. ಇಂದಿರಾ ಧರ್ಮಪ್ಪ, ಕರವೇ ಚಂದ್ರಶೇಖರ್ ಮಾತನಾಡಿದರು.ದಲಿತ ಮುಖಂಡ ದೊರೆಯಪ್ಪ, ಸಿದ್ದಯ್ಯ, ಹುಲಿಕೆರೆ ಕುಮಾರ್, ತಾಪಂ ಸದಸ್ಯರಾದ ಶೇಖರಯ್ಯ ಇದ್ದರು.
ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ
ಮೈಸೂರು: ಮೈಸೂರು ವಿವಿಯ 2014-15ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಕೋರ್ಸುಗಳ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಜು.9 ರವರೆಗೆ ವಿಸ್ತರಿಸಲಾಗಿದ್ದು, ಪ್ರವೇಶಾತಿ ಪರೀಕ್ಷೆಯು ಜು.14 ರಿಂದ 18ರ ಬದಲಿಗೆ ಜು.16 ರಿಂದ 20 ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಡಿಡಿಠ///ಢಿಢಿಢಿ.್ಡಟ್ಝಿ-ಟಣಡ್ಟ್ಠಜ.ಛ್ಛ.್ಝಟಿ ಆನ್ಲೈನ್ನಲ್ಲಿ ಸಂಪರ್ಕಿಸುವುದು.
ಕಾರ್ಯಾಗಾರ ನಾಳೆ
ಮೈಸೂರು: ಜಿಲ್ಲೆಯ ಬುಡಕಟ್ಟು ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಗೊಳಿಸುವ ಸಂಬಂಧ ಅನುಷ್ಠಾನಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಜು.9ರ ಬೆಳಗ್ಗೆ 10.30ಕ್ಕೆ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ತಿಳಿಸಿದ್ದಾರೆ.
ತಾತ್ಕಾಲಿಕ ಫಲಿತಾಂಶ ಪ್ರಕಟ
ಮೈಸೂರು: ಜಿಲ್ಲೆಯ ಡಿಎಂಜಿ ಹಳ್ಳಿಯ ಜವಾಹರ ನವೋದಯ ವಿದ್ಯಾಲಯವು 2014-15ನೇ ಸಾಲಿನ 6ನೇ ತರಗತಿಯ ಪ್ರವೇಶಕ್ಕಾಗಿ ಫೆ.8 ರಂದು ನಡೆಸಿದ್ದ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪಟ್ಟಿ ಪ್ರಕಟಗೊಂಡಿದೆ. ಹೆಚ್ಚಿನ ಮಾಹಿತಿಗೆ ಡಿ.ಎಂ.ಜಿ. ಹಳ್ಳಿಯ ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರನ್ನು ದೂ. 0821- 2905068 ಸಂಪರ್ಕಿಸಬಹುದು.
ಗುಂಗ್ರಾಲ್ ಛತ್ರ ಶಾಲೆ ದತ್ತು
ಮೈಸೂರು: ನಗರದ ಸರಸ್ವತಿಪುರಂನ ಸ್ಕೈಟಾಪ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಶಾಸ್ತ್ರಿ ಫೌಂಡೇಷನ್ ಆಶ್ರಯದಲ್ಲಿ ನಡೆದ ತಾಲೂಕಿನ ಗುಂಗ್ರಾಲ್ ಛತ್ರ ಸರ್ಕಾರಿ ಪ್ರೌಢಶಾಲೆಯ ದತ್ತು ಸ್ವೀಕಾರ ಸಮಾರಂಭವನ್ನು ಶಾಸಕ ಜಿ.ಟಿ. ದೇವೇಗೌಡ ಉದ್ಘಾಟಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

