ಸಮಯಕ್ಕೆ ಬಾರದ ಚುನಾವಣಾಧಿಕಾರಿಗೆ ತರಾಟೆ
ಚನ್ನರಾಯಪಟ್ಟಣ: ತಾಲೂಕು ಪಂಚಾಯಿತಿಯ ಕೊನೆಯ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆಯ ನಿಗದಿತ ಸಮಯಕ್ಕೆ ಚುನಾವಣಾಧಿಕಾರಿಗಳು ಬಾರದಿದ್ದುದನ್ನು ಖಂಡಿಸಿ ತಾಲೂಕು ಪಂಚಾಯಿತಿ ಸದಸ್ಯರು ದೂರು ನೀಡಿ ಅದಕ್ಕೆ ಹಿಂಬರಹ ನೀಡುವಂತೆ ಆಗ್ರಹಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಮಧ್ಯಾಹ್ನ 12ಕ್ಕೆ ಚುನಾವಣೆ ಸಮಯ ನಿಗದಿಯಾಗಿತ್ತಾದರೂ 12. 55 ಸಮಯವಾದರೂ ಚುನಾವಣಾಧಿಕಾರಿ ಹಾಗೂ ಹಾಸನ ಉಪವಿಭಾಗಾಧಿಕಾರಿ ಶರತ್ ಸಭಾಂಗಣಕ್ಕೆ ಆಗಮಿಸಿದಿರುವುದನ್ನು ಖಂಡಿಸಿ ಚುನಾವಣೆಯನ್ನು ಮುಂದೂಡುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳನ್ನು ಸದಸ್ಯರು ಆಗ್ರಹಿಸಿದರು.
ಲಿಖಿತ ಉತ್ತರಕ್ಕೆ ಪಟ್ಟು: ಮಧ್ಯಾಹ್ನ 12.55ಕ್ಕೆ ಆಗಮಿಸಿದ ಚುನಾವಣಾಧಿಕಾರಿಗೆ ಸಮಜಾಯಿಸಿಯನ್ನು ಲಿಖಿತವಾಗಿ ನೀಡುವಂತೆ 10ಕ್ಕೂ ಹೆಚ್ಚು ಸದಸ್ಯರು ಪಟ್ಟು ಹಿಡಿದರು.
ಕಾಂಗ್ರೆಸ್ ಸದಸ್ಯ ಪಿಕೆ ಮಂಜೇಗೌಡ ಹಾಗೂ ರವಿಕುಮಾರ್, ಚುನಾವಣೆ ಎಂದ ಕೂಡಲೇ ನಿಗದಿತ ವೇಳೆಗಿಂತ ಒಂದು ನಿಮಿಷ ತಡವಾಗಿ ಸದಸ್ಯರು ಆಗಮಿಸಿದರೆ ಅವರನ್ನು ಒಳ ಸೇರಿಸುವುದಿಲ್ಲ. ಅದೇ ರೀತಿ ಚುನಾವಣಾಧಿಕಾರಿಗಳು ಒಂದು ಗಂಟೆ ತಡವಾಗಿ ಆಗಮಿಸಿರುವುದರಿಂದ ಚುನಾವಣೆಯನ್ನು ಮುಂದೂಡಬೇಕೆಂದು ಪಟ್ಟು ಹಿಡಿದರು.
ಸದಸ್ಯರ ತರಾಟೆಗೆ ಉತ್ತರ ನೀಡಲು ತತ್ತರಿಸಿದ ಚುನಾವಣಾಧಿಕಾರಿ ಶರತ್ ಸದಸ್ಯರ ಕ್ಷಮೆಯಾಚಿಸಿದರು. ಬಳಿಕ ಸದಸ್ಯರು ಚುನಾವಣೆ ಪ್ರಕ್ರಿಯೆಗೆ ಅನುವು ನೀಡಿದರು.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ತಾಲೂಕು ಪಂಚಾಯಿತಿಯ ಅಂತಿಮ ಹಾಗೂ ಮೂರನೇ ಅವಧಿಯ ಮೀಸಲಿನಂತೆ ಅಧ್ಯಕ್ಷರಾಗಿ ಜೆಡಿಎಸ್ನ ಮಂಜುಳಾ ರಾಜು ಹಾಗೂ ಉಪಾಧ್ಯಕ್ಷರಾಗಿ ಹೇಮಾವತಿ ಕೃಷ್ಣನಾಯಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಾಸಕ ಸಿ.ಎನ್. ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಶಂಕರ್ ಕುಂಠೆ ಹಾಗೂ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

