ಅರಣ್ಯಾಧಿಕಾರಿಗಳಿಂದ ವನ ಮಹೋತ್ಸವ
ಬೇಲೂರು: ರಾಯಪುರದ ಶ್ರೀ ಶನೇಶ್ವರ ಸ್ವಾಮಿಯ ದೇವಸ್ಥಾನದ ಬಳಿ ವನಮಹೋತ್ಸವ ಮತ್ತು ವಕ್ಷ ಲಕ್ಷ ಕಾರ್ಯಕ್ರಮದ ಅಂಗವಾಗಿ ವಲಯ ಅರಣ್ಯ ಅಧಿಕಾರಿಗಳಿಂದ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅರಣ್ಯ ಪಾಲಕ ನಾಗರಾಜ್ ಮಾತನಾಡಿ, ಯಾರು ಸಸಿ ಬೆಳೆಸುವ ಆಸಕ್ತಿ ಇರುತ್ತದೆ ಅಲ್ಲಿ ಪ್ರತೀ ವರ್ಷ ನಾವು ಅಂತಹವರಿಗೆ ಗಿಡಗಳನ್ನು ಕೊಡುತ್ತೇವೆ. ಆದರೆ ಕೆಲ ರೈತರು ನಾವು ಕೊಟ್ಟ ಗಿಡಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ತೋರುತ್ತಿರುವುದು ಗಮನಕ್ಕೆ ಬಂದಿದೆ. ಸಸಿಗಳನ್ನು ನಿರ್ಲಕ್ಷಿಸದೆ ಮಕ್ಕಳಂತೆ ಕಾಪಾಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ವಲಯ ಅಧಿಕಾರಿಗಳಾದ ಎಸ್. ಎನ್. ರಾಜಪ್ಪ ,ಉಪ ವಲಯ ಅರಣ್ಯಾಧಿಕಾರಿ ಎಮ್.ಆರ್. ಸುಭಾಷ್ಚಂದ್ರ, ಸಿಬ್ಬಂದಿವರ್ಗ, ಗ್ರಾಮ ಪಂಚಾಯ್ತಿ ಸದಸ್ಯರಾದ ವಸಂತಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.
ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹಾಸನ: ಬೆಂಗಳೂರಿನ ನೆಲಮಗಲದ ಡಾಬಸ್ಪೇಟೆಯಲ್ಲಿ ಇರುವ ಟಿ ಡಿ ಪವರ್ ಸಿಸ್ಟಮ್ ಲಿಮಿಟೆಡ್ನವರು ಎ ಸಿ ಜನರೇಟರ್ ಉತ್ಪಾದನೆಯಲ್ಲಿ ಹೆಸರಾಂತ ಕಂಪನಿಯಾಗಿದ್ದು, ಕಂಪನಿಗೆ ಅಗತ್ಯವಾಗಿ ಬೇಕಾಗಿರುವ ಲರ್ನರ್ಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 23 ವಯೋವುತಿಯಲ್ಲಿನ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕಿದೆ. ಜು. 11 ರಂದು ಬೆಳಗ್ಗೆ 11ರಿಂದ ಹಾಸನ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ತರಬೇತಿ ಅವಧಿಯಲ್ಲಿ ಮಾಸಿಕ 5 ತರಬೇತಿ ಭತ್ಯೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಇವರನ್ನು ಖದ್ದಾಗಿ ಅಥವಾ ದೂರವಾಣಿ ಸಂಖ್ಯೆ 08172-268374 ಅನ್ನು ಸಂಪರ್ಕಿಸಲು ಕೋರಲಾಗಿದೆ.
ಜಿಲ್ಲಾ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಹಾಸನ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್ ಷಾ ಆಯ್ಕೆಗೊಂಡ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ ಬಿಜೆಪಿ ಕಾರ್ಯಕರ್ತರು ನಂತರ ಎನ್.ಆರ್. ವೃತ್ತಕ್ಕೆ ತೆರಳಿ ಜೈಕಾರ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಮಿತ್ ಷಾ ಈ ಹಿಂದೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದಲ್ಲಿ ಕಾರ್ಯನಿರ್ವಹಿಸಿದ್ದರು. ಅವರ ಸೇವೆಯನ್ನು ಗುರುತಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಸಂತಸ ಪಟ್ಟರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರೇಣುಕುಮಾರ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಚನ್ನಕೇಶವ, ಪ್ರಧಾನ ಕಾರ್ಯದರ್ಶಿ ನಾಗೇಶ್, ಶೋಬನ್ ಬಾಬು, ಕೃಷ್ಣೇಗೌಡ, ರಾಮಕೃಷ್ಣ, ಪ್ರಸನ್ನ ಕುಮಾರ, ಹರಳಹಳ್ಳಿ ಕುಮಾರ್, ಸಿಂಗಪಟ್ಟಣ ರಾಮಕೃಷ್ಣ ಹಾಗೂ ಇತರರು ಇದ್ದರು.
ಚಿತ್ರಕಲೆ ಸಂಸ್ಕೃತಿಯ ಪ್ರತಿಬಿಂಬ
ಬೇಲೂರು: ಚಿತ್ರಕಲೆ ಕೇವಲ ಕಲೆಯಾಗದೆ ನಮ್ಮ ಸಂಸ್ಕೃತಿಯ ಕೈಗನ್ನಡಿಯಾಗಿದೆ. ಚಿತ್ರ ಕಲೆ ಇಂದು ವಿಶ್ವದ ಗಮನ ಸೆಳೆದ ಪ್ರಮುಖ ವಾಹಿನಿ ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಅನಂತು ತಿಳಿಸಿದರು. ಪಟ್ಟಣದ ಪತ್ರಕರ್ತರ ಭವನದಲ್ಲಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಪತ್ರಕರ್ತರ ಸಂಘದ ಗ್ರಾಮೀಣ ಉಪಾಧ್ಯಕ್ಷ ಬಿ.ಎಂ.ರವೀಶ್, ಪ್ರಧಾನ ಕಾರ್ಯದರ್ಶಿ ಡಿ.ಬಿ.ಮೋಹನ್ ಕುಮಾರ್ ಮಾತನಾಡಿದರು.ಸಂಘದ ಉಪಾಧ್ಯಕ್ಷ ರಾಘವೇಂದ್ರ ಹೊಳ್ಳ ಇದ್ದರು.
ಅತ್ಯಾಚಾರಿಯ ಬಂಧನ
ಅರಕಲಗೂಡು: ಆಟವಾಡುತ್ತಿದ್ದ ನೆರೆಮನೆಯ ಬಾಲಕಿಯೊಬ್ಬಳವುಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಕೊಣನೂರು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿ ಅಂಜನ್ ಕುಮಾರ್(22) ಎಂಬುವನನ್ನು ಈ ಸಂಬಂಧ ಬಂಧಿಸಲಾಗಿದೆ. ತಾಲೂಕಿನ ನಿಲುವಾಗಿಲು ಗ್ರಾಮದ ಆರೋಪಿ ಪಕ್ಕದ ಮನೆಯ ಮಗು 7 ವರ್ಷದ ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ನೆಡೆಸಿ ಪರಾರಿಯಾಗಿದ್ದನು. ಬುಧವಾರ ಕೊಣನೂರು ಹೋಬಳಿಯ ಗ್ರಾಮದ ಬಂಧುವೊಬ್ಬರ ಮನೆಯಲ್ಲಿ ಆರೋಪಿ ಇದ್ದುದನ್ನು ಪತ್ತೆ ಹಚ್ಚಿರುವ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಂಗಳೂರು ರೈಲು: ಪ್ರಯಾಣಿಕರ ಸಂತಸ
ಸಕಲೇಶಪುರ: ಹಗಲು ವೇಳೆ ಮಂಗಳೂರು-ಬೆಂಗಳೂರು ನಡುವೆ ರೈಲು ಸಂಚಾರ ಆರಂಬಿಸುವ ಕುರಿತು ಬಜೆಟ್ನಲ್ಲಿ ಘೋಷಿಸಿರುವುದು ಸಂತಸ ತಂದಿದೆ ಎಂದು ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾರಾಯಣ ಆಳ್ವ ಹೇಳಿದ್ದಾರೆ.
ಬೆಂಗಳೂರಿನಿಂದ ದಕ್ಷಿಣ ಕನ್ನಡ ಹಾಗೂ ಕೆರಳಕ್ಕೆ ತೆರಳುವ ಲಕ್ಷಾಂತರ ಪ್ರಯಾಣಿಕರ ಹಿತ ದೃಷ್ಟಿಯಿಂದ ರೈಲು ಆರಂಭಿಸಿದರೆ ಅನುಕೂಲವಾಗುತ್ತದೆ ಎಂದು ಕಳೆದೊಂದು ದಶಕದಿಂದ ಹೋರಾಟ ನೆಡೆಸಿದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ಅವರು ತಿಳಿಸಿದ್ದಾರೆ. ಇದಕ್ಕಾಗಿ ರೈಲ್ವೆ ಸಚಿವ ಸದಾನಂದಗೌಡರನ್ನು ಅಭಿನಂದಿಸಿದ್ದಾರೆ.
ಉಪನ್ಯಾಸಕ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ
ಹಾಸನ: ಕರ್ನಾಟಕ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆ (ಕೆ-ಎಸ್.ಇ.ಟಿ)ಯನ್ನು, 32 ವಿಷಯಗಳಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಆಯ್ದ 11 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ವಿದ್ಯಾರ್ಹತೆ ಎಂಎ, ಎಂಎಸ್ಸಿ, ಎಂಕಾಂ, ಎಂಬಿಎ, ಕಂಪ್ಯೂಟರ್ ಸೈನ್ಸ್, ಪರಿಸರ ವಿಜ್ಜಾನ, ಎಲೆಕ್ಟ್ರಾನಿಕ್ಸ್, ಎಂಸಿಎ ಮುಂತಾದ 32 ವಿಷಯಗಳಲ್ಲಿ ಶೇ. 55 ಅಂಕ ಗಳಿಸಿ ತೇರ್ಗಡೆ ಹೊಂದಿರಬೇಕು. ಪ.ಜಾ., ಪ.ಪಂಗಡದ ಅಭ್ಯರ್ಥಿಗಳು ಶೇ. 50 ಅಂಕ ಗಳಿಸಿರಬೇಕು. ಅಂತಿಮ ವರ್ಷದ ಸ್ನಾತಕೋತ್ತರ(ಉ) ಪದವಿ ವ್ಯಾಸಂಗ ಮಾಡುತ್ತಿರುವವರೂ ಸಹ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಟಿಟಟಿ ಮೂಲಕ ಸಲ್ಲಿಸುವ ದಿನಾಂಕ ಜುಲೈ 1ರಿಂದ ಜುಲೈ 31ರೊಳಗೆ, ರು. 100 ದಂಡ ಶುಲ್ಕದೊಂದಿಗೆ ದಿನಾಂಕ ಆಗಸ್ಟ್ 01ರಿಂದ ಆ. 14 ಒಳಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಸಲ್ಲಿಸಬೇಕು. ಡಿಡಿಠ///್ಞಡಜಡಿ.್ಡಟ್ಝಿ-ಟಣಡ್ಟ್ಠಜ.ಛ್ಛ.್ಝಟಿ ಅಥವಾ ಲಭ್ಯವಿರುವ ಮೈಸೂರು ವಿಶ್ವವಿದ್ಯಾನಿಲಯದ ವೆಬ್ಸೈಟ್ ್ಡಟ್ಝಿ-ಟಣಡ್ಟ್ಠಜ.ಛ್ಛ.್ಝಟಿನ ಮೂಲಕವೂ ಮೇಲಿನ ವೆಬ್ಸೈಟ್ಗೆ ಹೋಗಬಹುದು.ಹೆಚ್ಚಿನ ಮಾಹಿತಿಗೆ ಮೇಲ್ಕಂಡ ವೆಬ್ಸೈಟ್ ನೋಡಿ ಅಥವಾ ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 0821-2516844, ಮೊ. 9449686641
ವಿದ್ಯುತ್ ವ್ಯತ್ಯಯ ನಾಳೆ
ಹಾಸನ: ಸಾಲಗಾಮೆ-ಚಿಕ್ಕಮಗಳೂರು ಹೈಟೆನ್ಷನ್ ವಿದ್ಯುತ್ ಪ್ರಸರ ಮಾರ್ಗದ ತುರ್ತು ನಿರ್ವಹಣಾ ಕಾಮಗಾರಿಯನ್ನು ಜು.11 ರಂದು ಕೈಗೊಳ್ಳಲಾಗುವುದು. ಆದ್ದರಿಂದ ಹಗರೆ, ಹಳೇಬೀಡು ಮತ್ತು ಗಂಗೂರು ಸುತ್ತಮುತ್ತಲ ಗ್ರಾಮಗಳಿಗೆ ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ಮನವಿ ಮಾಡಿದೆ.
ಮಾಹಿತಿ ಹಕ್ಕು ಕುರಿತು ಜಾಗೃತಿ ಕಾರ್ಯಕ್ರಮ ಇಂದು
ಹಾಸನ: ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ವಾರ್ತಾ ಇಲಾಖೆ, ಶ್ರೀಗಂಧ ಸೇವಾ ಸಂಸ್ಥೆ, ಹಾಸನ, ಶಿಶು ಅಭಿವೃದ್ಧಿ ಯೋಜನೆ, ಗಂಜಿಗೆರೆ ಗ್ರಾಮ ಪಂಚಾಯಿತಿ, ಆಶ್ರಯದಲ್ಲಿ ಜು.10ರಂದು ಆಲೂರು ತಾಲೂಕಿನ ಕ್ಯಾತನಹಳ್ಳಿ ಕಾಲೊನಿ ಸರ್ಕಾರಿ ಶಾಲಾ ಅವರಣದಲ್ಲಿ ಬೆಳಗ್ಗೆ 11ಕ್ಕೆ ಮಾಹಿತಿ ಹಕ್ಕು ಕಾಯಿದೆ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಹಾಸನದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಹೆಚ್.ಸಿ.ಚಿದಾನಂದ್ ಕಾರ್ಯಕ್ರಮ ಉದ್ಘಾಟಿಸುವರು. ಗಂಜಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಹಾಸನ ಜಿಲ್ಲಾ ಶಿಕ್ಷಣಾಧಿಕಾರಿ ಡಿ.ಟಿ.ಪುಟ್ಟರಾಜು ಮುಖ್ಯ ಅತಿಥಿಗಳಾಗಿ ಹಾಗೂ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸುವರು.
ನಿಗಮದಿಂದ ಜಾಹೀರಾತು
ಹಾಸನ: ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಏಪ್ರಿಲ್ 2013ರಿಂದ ಇಲ್ಲಿಯವರೆವಿಗೂ ಜಾಹಿರಾತು ಮತ್ತು ಇತ್ಯಾದಿಗಳಿಗೆ ತಗುಲಿದ ವೆಚ್ಚ 5,55,235 ರು. ಗಳಾಗಿದೆ. ಈ ವೆಚ್ಚವನ್ನು ನಿಗಮದಲ್ಲಿನ ಆಡಳಿತ ವೆಚ್ಚದಲ್ಲಿ ಭರಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವರು ತಿಳಿಸಿದರು. ವಿಧಾನ ಪರಿಷತ್ ಸದಸ್ಯರಾದ ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆಡಳಿತಾತ್ಮಕ ವಿಷಯಗಳಿಗೆ ಮಂಜೂರಾತಿ ಮಾಡುವ ಅಧಿಕಾರಯುಕ್ತ ಅಧಿಕಾರಿಯಾಗಿರುತ್ತಾರೆ. ಮಂಜೂರಾತಿ ನೀಡಿರುವ ಪ್ರಕಟಣೆಗಳಿಗೆ ಕನಿಷ್ಟ ಮತ್ತು ಗರಿಷ್ಟ ಮಿತಿ ಇರುವುದಿಲ್ಲ. ಜಾಹೀರಾತಿನ ಗಾತ್ರಕ್ಕೆ ಅನುಗುಣವಾಗಿ ಪತ್ರಿಕೆ ನಿಗದಿ ಪಡಿಸಿರುವ ಕನಿಷ್ಟ ದರವನ್ನು ಮಂಜೂರು ಮಾಡಲಾಗುವುದು. ಇದರಲ್ಲಿ ಯಾವುದೇ ಲೋಪದೋಷಗಳು ಕಂಡು ಬಂದಿರುವುದಿಲ್ಲವೆಂದು ತಿಳಿಸಿದರು. ನಿಗಮದ ಜನಪರ ಯೋಜನೆಗಳು ಜನಸಾಮಾನ್ಯರಿಗೆ ತಲುಪುವಲ್ಲಿ ಸಹಾಯವಾಗಿದೆ ಎಂದರು. ವನಸುಮಾ ಪತ್ರಿಕೆಗೆ 2013-14ನೇ ಸಾಲಿನಲ್ಲಿ ರು. 25000 ಎರಡು ಬೇರೆ ಬೇರೆ ಜಾಹೀರಾತುಗಳಿಗೆ ಮತ್ತು 2014-15ನೇ ಸಾಲಿನಲ್ಲಿ ರು. 25000 ಬೇರೆ ಜಾಹೀರಾತನ್ನು ನೀಡಲಾಗಿದೆ. ನಿಗಮಲ್ಲಿ ಅನುಷ್ಠಾನ ಮಾಡುತ್ತಿರುವ ಯೋಜನೆಗಳ ಬಗ್ಗೆ ಫಲಾಪೇಕ್ಷಿಗಳಿಗೆ ಅರಿವು ಮೂಡಿಸುವ ಮತ್ತು ತಿಳಿಸುವ ಕಾರ್ಯವು ನಿಗಮದ ಜವಾಬ್ದಾರಿಯಾಗಿರುವುದರಿಂದ ಇಂತಹ ಜಾಹೀರಾತುಗಳನ್ನು ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹಾಸನ: ಬೆಂಗಳೂರಿನ ನೆಲಮಗಲದ ಡಾಬಸ್ಪೇಟೆಯಲ್ಲಿ ಇರುವ ಟಿ ಡಿ ಪವರ್ ಸಿಸ್ಟಮ್ ಲಿಮಿಟೆಡ್ನವರು ಎ ಸಿ ಜನರೇಟರ್ ಉತ್ಪಾದನೆಯಲ್ಲಿ ಹೆಸರಾಂತ ಕಂಪನಿಯಾಗಿದ್ದು, ಕಂಪನಿಗೆ ಅಗತ್ಯವಾಗಿ ಬೇಕಾಗಿರುವ ಲರ್ನರ್ಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 23 ವಯೋವುತಿಯಲ್ಲಿನ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕಿದೆ. ಜು. 11 ರಂದು ಬೆಳಗ್ಗೆ 11ರಿಂದ ಹಾಸನ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ತರಬೇತಿ ಅವಧಿಯಲ್ಲಿ ಮಾಸಿಕ 5 ತರಬೇತಿ ಭತ್ಯೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಇವರನ್ನು ಖದ್ದಾಗಿ ಅಥವಾ ದೂರವಾಣಿ ಸಂಖ್ಯೆ 08172-268374 ಅನ್ನು ಸಂಪರ್ಕಿಸಲು ಕೋರಲಾಗಿದೆ.
ಜಿಲ್ಲಾ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಹಾಸನ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್ ಷಾ ಆಯ್ಕೆಗೊಂಡ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ ಬಿಜೆಪಿ ಕಾರ್ಯಕರ್ತರು ನಂತರ ಎನ್.ಆರ್. ವೃತ್ತಕ್ಕೆ ತೆರಳಿ ಜೈಕಾರ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಮಿತ್ ಷಾ ಈ ಹಿಂದೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದಲ್ಲಿ ಕಾರ್ಯನಿರ್ವಹಿಸಿದ್ದರು. ಅವರ ಸೇವೆಯನ್ನು ಗುರುತಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಸಂತಸ ಪಟ್ಟರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರೇಣುಕುಮಾರ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಚನ್ನಕೇಶವ, ಪ್ರಧಾನ ಕಾರ್ಯದರ್ಶಿ ನಾಗೇಶ್, ಶೋಬನ್ ಬಾಬು, ಕೃಷ್ಣೇಗೌಡ, ರಾಮಕೃಷ್ಣ, ಪ್ರಸನ್ನ ಕುಮಾರ, ಹರಳಹಳ್ಳಿ ಕುಮಾರ್, ಸಿಂಗಪಟ್ಟಣ ರಾಮಕೃಷ್ಣ ಹಾಗೂ ಇತರರು ಇದ್ದರು.
ಚಿತ್ರಕಲೆ ಸಂಸ್ಕೃತಿಯ ಪ್ರತಿಬಿಂಬ
ಬೇಲೂರು: ಚಿತ್ರಕಲೆ ಕೇವಲ ಕಲೆಯಾಗದೆ ನಮ್ಮ ಸಂಸ್ಕೃತಿಯ ಕೈಗನ್ನಡಿಯಾಗಿದೆ. ಚಿತ್ರ ಕಲೆ ಇಂದು ವಿಶ್ವದ ಗಮನ ಸೆಳೆದ ಪ್ರಮುಖ ವಾಹಿನಿ ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಅನಂತು ತಿಳಿಸಿದರು. ಪಟ್ಟಣದ ಪತ್ರಕರ್ತರ ಭವನದಲ್ಲಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಪತ್ರಕರ್ತರ ಸಂಘದ ಗ್ರಾಮೀಣ ಉಪಾಧ್ಯಕ್ಷ ಬಿ.ಎಂ.ರವೀಶ್, ಪ್ರಧಾನ ಕಾರ್ಯದರ್ಶಿ ಡಿ.ಬಿ.ಮೋಹನ್ ಕುಮಾರ್ ಮಾತನಾಡಿದರು.ಸಂಘದ ಉಪಾಧ್ಯಕ್ಷ ರಾಘವೇಂದ್ರ ಹೊಳ್ಳ ಇದ್ದರು.
ಅತ್ಯಾಚಾರಿಯ ಬಂಧನ
ಅರಕಲಗೂಡು: ಆಟವಾಡುತ್ತಿದ್ದ ನೆರೆಮನೆಯ ಬಾಲಕಿಯೊಬ್ಬಳವುಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಕೊಣನೂರು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿ ಅಂಜನ್ ಕುಮಾರ್(22) ಎಂಬುವನನ್ನು ಈ ಸಂಬಂಧ ಬಂಧಿಸಲಾಗಿದೆ. ತಾಲೂಕಿನ ನಿಲುವಾಗಿಲು ಗ್ರಾಮದ ಆರೋಪಿ ಪಕ್ಕದ ಮನೆಯ ಮಗು 7 ವರ್ಷದ ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ನೆಡೆಸಿ ಪರಾರಿಯಾಗಿದ್ದನು. ಬುಧವಾರ ಕೊಣನೂರು ಹೋಬಳಿಯ ಗ್ರಾಮದ ಬಂಧುವೊಬ್ಬರ ಮನೆಯಲ್ಲಿ ಆರೋಪಿ ಇದ್ದುದನ್ನು ಪತ್ತೆ ಹಚ್ಚಿರುವ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

