ಕುಟುಂಬ ಒಡೆಯುವ ಸ್ವಾರ್ಥ ರಾಜಕಾರಣಿಗಳು
ಚನ್ನರಾಯಪಟ್ಟಣ: ರಾಜಕಾರಣಿಗಳು ತಮ್ಮ ಸ್ಥಾನಕ್ಕಾಗಿ ಜನತೆಯನ್ನು ಕುಡುಕರನ್ನಾಗಿ ಮಾಡುವ ಜತೆಗೆ ಅವರ ಮನೆಯಲ್ಲಿಯೇ ಒಡಕು ತರುತ್ತಿದ್ದಾರೆ ಎಂದು ತಮ್ಮಡಿಹಳ್ಳಿಯ ಡಾ. ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ವಿಷಾದಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಗಂಗನಘಟ್ಟ ಗೇಟ್ನಲ್ಲಿ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರದಲ್ಲಿ ಆಶೀರ್ವಚನ ನೀಡಿ ರಾಜಕಾರಣಿಗಳು ಚುನಾವಣೆಯಲ್ಲಿ ಗೆಲ್ಲಲು ಕುಟುಂಬಗಳನ್ನು ಒಡೆಯುವುದರ ಜತೆಗೆ ಮದ್ಯವ್ಯಸನಿಗಳಾಗಿ ಮಾಡುತ್ತಿದ್ದಾರೆ ಎಂದರು. ಗ್ರಾಮೀಣ ಭಾಗದಲ್ಲಿ ಜನತೆ ಮದ್ಯಕ್ಕೆ ದಾಸರಾಗುತ್ತಿರುವುದರಿಂದ ಗ್ರಾಮೀಣ ಸಂಸ್ಕೃತಿ ಹಾಳಾಗುತ್ತಿದ್ದು, ಪರಂಪರೆಗಳು ನಶಿಸುತ್ತಿರುವ ಜತೆಗೆ ತಮ್ಮ ಮಕ್ಕಳು ಹಾಗೂ ತಂದೆ ತಾಯಿಗಳ ಮೇಲಿರುವ ಮಮತೆ ಇಲ್ಲವಾಗುತ್ತಿದೆ ಎಂದು ವಿಷಾದಿಸಿದರು.
ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಪ್ರೊ. ಶಿವರಾಜು ಮಾತನಾಡಿ ರಾಜ್ಯದಲ್ಲಿ ಪ್ರತಿದಿನ 25ಲಕ್ಷ ಮಂದಿ ಮದ್ಯಕ್ಕೆ ದಾಸರಾಗುತ್ತಿರುವ ಬಗ್ಗೆ ವರದಿಯಿದ್ದು, ರಾಜ್ಯದಲ್ಲಿ 1.75 ಕೋಟಿ ಮಂದಿ ಮದ್ಯ ವ್ಯಸನಿಗಳಿದ್ದಾರೆ ಎಂದು ತಿಳಿಸಿದರು. ಮದ್ಯ ವರ್ಜನ ಶಿಬಿರ ಸಮಿತಿ ಅಧ್ಯಕ್ಷ ನಟೇಶ್. ಧರ್ಮಸ್ಥಳ ಕ್ಷೇಮಾಭಿವೃದ್ಧಿ ಯೋಜನೆಯ ತುಮಕೂರು ಜಿಲ್ಲಾ ನಿರ್ದೇಶಕ ಗಂಗಾಧರ ಪೈ, ತುಮಕೂರು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ. ಸಂಜಯ್ ನಾಯಕ್, ಶಿಬಿರದ ಚಿಕಿತ್ಸಾ ತಂಡದ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಶಿಬಿರಾಧಿಕಾರಿ ದಿವಾಕರ್ ಪೂಜಾರಿ ಉಪಸ್ಥಿತರಿದ್ದರು. ಶಿಬಿರದಲ್ಲಿ 83 ಮದ್ಯವ್ಯಸನಿಗಳು ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಹಾಗೂ ತಮ್ಮ ಕುಟುಂಬದವರ ಜತೆ ಪ್ರಮಾಣ ಮಾಡಿ ಮದ್ಯಪಾನ ಮಾಡುವುದಿಲ್ಲವೆಂದು ಪ್ರಮಾಣ ಸ್ವೀಕರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

