ಹಾಸನ

ಜನಸಂಖ್ಯೆ ಹೆಚ್ಚಳದಿಂದ ಸಂಕಷ್ಟ

Published On :

ಬೇಲೂರು: ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಭವಿಷ್ಯದಲ್ಲಿ ಉಸಿರಾಟಕ್ಕೂ ತೊಂದರೆಯಾಗುವ ಸ್ಥಿತಿಯಿದೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜು ಉಪಪ್ರಾಂಶುಪಾಲ ಶಿವಮರಿಯಪ್ಪ ಆತಂಕ ವ್ಯಕ್ತಪಡಿಸಿದರು.
ಇತ್ತೀಚೆಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ನಡೆದ ಜನಸಂಖ್ಯಾ ಸ್ಫೋಟ ನಿಯಂತ್ರಣ ಕುರಿತ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ಇಂದಿನ ಜನಸಂಖ್ಯೆ ಹೆಚ್ಚಳದಿಂದ ಕುಡಿಯುವ ನೀರು, ಗಾಳಿ ಇನ್ನಿತರ ವಸ್ತಗುಳು ಕಲುಷಿತಗೊಳ್ಳುತ್ತಿದೆ. ಪರಿಣಾಮ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯಿದೆ. ಈಗಲೇ  ಜನಸಂಖ್ಯೆ ನಿಯಂತ್ರಿಸಿ ದೇಶದ ಸಂಪನ್ಮೂಲ ವಿಸ್ತರಿಸಿಕೊಂಡು ಬದುಕು ನಡೆಸುವತ್ತ ಎಲ್ಲರೂ ಯೋಚಿಸುವ ಅಗತ್ಯವಿದೆ ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಕೋಶಾಧ್ಯಕ್ಷ ತಿಮ್ಮೇಗೌಡ ಇತರರು ಇದ್ದರು.

ಬಸೀಕರಣ ಹೊಂಡ ಪ್ರದೇಶದಲ್ಲಿ ವನಮಹೋತ್ಸವ ಆಚರಣೆ
ಬೇಲೂರು: ಪಟ್ಟಣದ ಹೊಳೆ ಬೀದಿಯಲ್ಲಿರುವ ಪುರಸಭೆಗೆ ಸೇರಿದ ಬಸೀಕರಣ ಹೊಂಡದ ಸಮೀಪ ಇತ್ತೀಚೆಗೆ ಪುರಸಭೆ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆಗಳ ಆಶ್ರಯದಲ್ಲಿ ಸುಮಾರು 200 ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಶ್ರೇಣಿ  ನ್ಯಾಯಾಧೀಶ ಇ. ರಾಜೀವೇಗೌಡ, ಮಳೆ ಬೆಳೆ ಇಲ್ಲದೆ ಜನ-ಜಾನುವಾರುಗಳು ಪರದಾಡುವ ಸ್ಥಿತಿ ಉದ್ಭವವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ವಹಿಸಿ ಗಿಡಗಳನ್ನು  ನೆಡುವಂತಹ ಕೆಲಸಕ್ಕೆ ಕೈ ಹಾಕಬೇಕು ಮತ್ತು ಗಿಡಗಳನ್ನು ನೆಟ್ಟರೆ ಸಾಲದು ಅವುಗಳನ್ನು  ಪೋಷಣೆ ಮಾಡುವ ಮೂಲಕ ಬೆಳೆಸಬೇಕು ಎಂದು ತಿಳಿಸಿದರು. ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ ಭಟ್ ಮಾತನಾಡಿ, ಸರ್ಕಾರ ಪ್ರತಿಯೊಂದು ಶಾಲೆಯ ಮಗುವಿಗೂ ಒಂದು ಸಸಿ ಎಂಬ ಯೋಜನೆ ರೂಪಿಸಿದ್ದು, ಅರಣ್ಯ ಇಲಾಖೆಯಲ್ಲಿ ನೋಂದಣಿ ಮಾಡಿದ ಶಾಲೆಗಳಿಗೆ ಸಸಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಪುರಸಭೆ ಅಧ್ಯಕ್ಷ ಬಿ. ಗಿರೀಶ್ ಮಾತನಾಡಿ, ಪಟ್ಟಣದಲ್ಲಿನ 16 ಉದ್ಯಾನವನಗಳಿಗೆ ನೂತನ ರೂಪ ನೀಡುವ ಕಾರ್ಯಕ್ಕೆ ಪುರಸಭೆ ಸದ್ಯದಲ್ಲೇ ಮುಂದಾಗಲಿದೆ ಎಂದು ತಿಳಿಸಿದರು. ಕಿರಿಯ ಶ್ರೇಣಿ ನ್ಯಾಯಾಧೀಶ ವೆಂಕಟೇಶ ನಾಯಕ್, ಪುರಸಭೆ ಮುಖ್ಯಾಧಿಕಾರಿ ಬಸವರಾಜು, ವಕೀಲರ ಸಂಘದ ರಾಜೇಗೌಡ, ಜೆ.ಟಿ. ಪ್ರಕಾಶ್, ರವಿ, ವೃತ್ತ ನಿರೀಕ್ಷಕ ಗಣೇಶ್, ಪಿಎಸ್‌ಐ ಆನಂದ್ ಕುಮಾರ್, ಪುರಸಭಾ ಸದಸ್ಯರಾದ ಮುದ್ದಮ್ಮ, ಭಾರತಿ ಅರುಣ್, ಅಕ್ರಂಪಾಶಾ ಇತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.