ಕೋಟಿ ವಿಷ್ಣು ಸಹಸ್ರನಾಮ ಅರ್ಚನೆ ಸಂಪನ್ನ
ಬೇಲೂರು: ಬೇಲೂರು ಪಟ್ಟಣದ ಚನ್ನಕೇಶವಸ್ವಾಮಿ ದೇವಾಲಯದ ಬಳಿಯ ರಾಮಾನುಜ ಸಹಸ್ರ ಸಂಭ್ರಮ 2017ರ ಅಂಗವಾಗಿ ನಡೆದ ಕೋಟಿ ವಿಷ್ಣು ಸಹಸ್ರನಾಮ ತುಳುಸಿ ಅರ್ಚನೆ, ಅಖಂಡ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ 501ನೇ ರಾಮಾನುಜ ಸ್ಪರ್ಶ ಪಾದುಕಾ ಉತ್ಸವ ಜು.4ರಿಂದ ನಿರಂತರವಾಗಿ ನಡೆಯುತಿದೆ. ಮಂಗಳವಾರ ಕೋಟಿ ವಿಷ್ಣು ಸಹಸ್ರನಾಮ ತುಳಸಿ ಅರ್ಚನೆ ಅಂತ್ಯಗೊಂಡಿದ್ದು, ಲಲಿತನಾಮ ಸಹಸ್ರನಾಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ರಾಮಾನುಜ ಸೇವಾ ಟ್ರಸ್ಟ್ ನಿರ್ದೇಶಕ ತಿರುಸ್ವಾಮೀಜಿ, ರಾಮಾನುಜ ಅಚಾರ್ಯರಿಗೆ 2017ಕ್ಕೆ ಸಾವಿರ ವರ್ಷವಾಗಲಿದ್ದು, ಈ ಕಾರಣದಿಂದ ದೇಶಾದ್ಯಂತ ರಾಮಾನುಜ ಸಹಸ್ರ ಸಂಭ್ರಮ 2017 ಎಂದು 501 ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.
ರಾಮಾನುಜರು ಯಾವ ಜಾತಿ ಭೇದವಿಲ್ಲದೆ ನಾಡಿಗೆ ಧರ್ಮ ಸಂದೇಶ ನೀಡಿದ್ದಾರೆ. ಈ ಕಾರಣದಿಂದ ಅವರ ಸಾವಿರ ವರ್ಷದ ಸವಿನೆನಪಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ವರ್ಗದವರು ಸೇರಿ ನಾಡಿನಲ್ಲಿ ಉತ್ತಮ ಮಳೆ, ಬೆಳೆ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ. ಪ್ರಾರ್ಥನೆಯನ್ನು ಸಾಮೂಹಿಕವಾಗಿ ನಡೆಸಲಾಗುತ್ತದೆ ಎಂದರು.
ಜು.4ರಿಂದ ಆರಂಭವಾದ ಕಾರ್ಯಕ್ರಮಗಳು ಜು.20ಕ್ಕೆ ಪೂರ್ಣಗೊಳ್ಳಲಿವೆ. ವಿಶೇಷವೆಂದರೆ ಸಹಸ್ರ ವಿಷ್ಣುನ ನಾಮ ಪಠಣ ಸ್ಪರ್ಧಾ ಕಾರ್ಯ ಹಮ್ಮಿಕೊಂಡಿದ್ದು, ವಿಜೇತರಿಗೆ 1 ಲಕ್ಷ ನೀಡಲಾಗುತ್ತದೆ. ಈ ಕಾರ್ಯ ದೇಶದಲ್ಲಿ ಪ್ರಥಮವಾಗಿದೆ. ಬೇಲೂರಿನ ಈ ಉತ್ಸವದ ನೆನಪಿಗೆ ಯತಿರಾಜಮಠದಲ್ಲಿ ರಾಮಾನುಜರ ವಿಗ್ರಹ ಸ್ಥಾಪನೆಗೆ ದಾನಿಗಳು ಮುಂದಾಗಿದ್ದಾರೆ. ಇಂತಹ ಅಗಮ್ಯ ಕಾರ್ಯವನ್ನು ಬೇಲೂರಿನ ವಿಶಾಲಾಕ್ಷಿ ಬಿ.ಎಸ್.ಕೇಶವನ್ ಕುಟುಂಬ ನಡೆಸುತ್ತಿದೆ. ನಾವು ಈ ಕಾರ್ಯಕ್ಕೆ ಯಾವ ವಂತಿಕೆ ಪಡೆದಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

