ಹಾಸನ

ಬೈಪಾಸ್ ರಸ್ತೆ ಬದಲಿಸಲು ಆಗ್ರಹಿಸಿ ಪ್ರತಿಭಟನೆ

Published On :

ಹಾಸನ: ರಾಷ್ಟ್ರೀಯ ಹೆದ್ದಾರಿ  ವಿಸ್ತರಣೆ ಯೋಜನೆಯಡಿ ಸಕಲೇಶಪುರ ತಾಲೂಕು ಬಾಳ್ಳುಪೇಟೆಯ ಬಳಿ  ನಿರ್ಮಿಸುತ್ತಿರುವ ಅವೈಜ್ಞಾನಿಕ ಬೈಪಾಸ್ ರಸ್ತೆಯನ್ನು ಕೂಡಲೇ ಬದಲಿಸುವಂತೆ ಆಗ್ರಹಿಸಿ  ಬಾಳ್ಳುಪೇಟೆ ನಾಗರಿಕ ಹೋರಾಟ ಸಮಿತಿಯ ಆಶ್ರಯದಲ್ಲಿ  ಶುಕ್ರವಾರ ಹಾಸನ ನಗರದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಗೆ  ಶೀರಾಮ ಸೇನೆ, ಕರವೇ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು
ಶ್ರೀಮಂತರಿಗೆ ಅನುಕೂಲ: ಬಾಳ್ಳುಪೇಟೆ ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಬಾಳ್ಳುಗೋಪಾಲ್ ಮಾತನಾಡಿ,  ಬಾಳ್ಳುಪೇಟೆ ಬಳಿ ಬೈಪಾಸ್ ರಸ್ತೆ ನಿರ್ಮಿಸಲು ಇಲ್ಲಿನ ಜನರ ಜತೆ ಚರ್ಚ ಮಾಡದೆ ಅಧಿಕಾರಿಗಳು ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡಿ ತೀರ್ಮಾನಿಸಲಾಗಿದೆ. ರಾಜಕೀಯದ ಒತ್ತಡ ಹಾಗೂ ಕೆಲ ಶ್ರೀಮಂತರನ್ನು ಉಳಿಸಲು ಇಂತಹ ಬೇಡವಾದ ಕೆಲಸಕ್ಕೆ ಕೈ ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಚಾರಕ್ಕೆ ಅಡ್ಡಿ: ಬಾಳ್ಳುಪೇಟೆ ಗ್ರಾಮ ವ್ಯಾಪ್ತಿಯಲ್ಲಿ ವಾಹನಗಳ ವೇಗ ಕಡಿಮೆ ಆಗುವುದರಿಂದ ಬೈಪಾಸ್ ರಸ್ತೆ ಆರಂಭಿಕದಲ್ಲಿಯೇ 4 ಶಾಲೆಗಳು, 2 ದೇವಾಲಯ, 1 ಮಸೀದಿ ಉದೆ. ರಸ್ತೆ ಪಕ್ಕದಲ್ಲಿಯೇ ಬಸವೇಶ್ವರ ನಗರ, ಇಂದಿರಾ ನಗರ, ಹಸಗವಳ್ಳಿ, ಜೆ.ಪಪಿ. ನಗರ, ಅಯೋಧ್ಯಾ ನಗರ, ಓಂನಗರಗಳಿಗೆ ಸಂಪರ್ಕ ಕಲ್ಪಿಸುವ 12 ಅಡ್ಡ ರಸ್ತೆಗಳು ಹೆದ್ದಾರಿಗೆ ಕೂಡಿಕೊಂಡಿದೆ. ಈ ಭಾಗದಲ್ಲಿ ಬೈಪಾಸ್ ಆದರೇ ಮುಂದೆ ಸಂಚಾರಕ್ಕೆ ಅಡ್ಡಿ ಆಗುವುದು ನಿಶ್ಚಿತ ಎಂದು ಹೇಳಿದರು. ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್, ಉಪಾಧ್ಯಕ್ಷ ಕುಮಾರ್, ಕರವೇ ಸತೀಶ್, ಲೋಕೇಶ್, ಕೆ.ಎಲ್. ದೇವರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.