ನಿವೇಶನರಹಿತರಿಗೆ ಮನೆ ನೀಡಿಲ್ಲ: ಆಕ್ರೋಶ
ಬೇಲೂರು: ಕಳೆದ 20 ವರ್ಷಗಳಿಂದ ಪುರಸಭೆಯಲ್ಲಿ ನಿವೇಶನರಹಿತರಿಗೆ ಒಂದೇ ಒಂದು ಆಶ್ರಯ ಅಥವಾ ಜನತಾ ಮನೆಯನ್ನು ವಿತರಿಸಿಲ್ಲ. ಕಡುಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸದಸ್ಯ ಜಿ. ಶಾಂತಕುಮಾ ರ್ ಕಿಡಿಕಾರಿದರು.
ಇಲ್ಲಿ ಪುರಸಭೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಮುಂದಿನ 10 ವರ್ಷದಲ್ಲಿ ಎಲ್ಲಾ ಬಡವರಿಗೂ ಸೂರು ಕಲ್ಪಿಸಬೇಕು ಎಂದು ಸರ್ಕಾರ ಅದೇಶ ಹೊರಡಿಸಿ, ಅದಕ್ಕೆ ತಕ್ಕ ಯೋಜನೆಯನ್ನು ರೂಪಿಸುತ್ತಿದೆ. ಆದರೆ ಪಟ್ಟಣದ ಪುರಸಭೆಯಲ್ಲಿ ಕಳೆದ 20 ವರ್ಷದಿಂದ ಒಂದು ಮನೆಯನ್ನು ವಿತರಣೆ ಮಾಡದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಖಾಲಿ ನಿವೇಶನ: ಇದಕ್ಕೆ ಸಹಮತ ವ್ಯಕ್ತಪಡಿಸಿದ ಸದಸ್ಯ ರವಿ ಅಣ್ಣೇಗೌಡ, ಪಟ್ಟಣದ ಚನ್ನಕೇಶವ ಬಡಾವಣೆಯಲ್ಲಿ ಪುರಸಭೆಯ 120 ನಿವೇಶನಗಳಿದ್ದು, ಅದರಲ್ಲಿ ಕೆಲವೇ ಮಂದಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಇನ್ನುಳಿದ 80ಕ್ಕೂ ಹೆಚ್ಚು ನಿವೇಶನಗಳನ್ನು 15 ವರ್ಷದಿಂದ ಖಾಲಿ ಬಿಡಲಾಗಿದೆ. 10 ವರ್ಷಕ್ಕಿಂತ ಹೆಚ್ಚು ಕಾಲ ನಿವೇಶನ ಖಾಲಿ ಬಿಟ್ಟರೆ, ಅದನ್ನು ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರ ಹೆಸರಿಗೆ ಖಾತೆ ಮಾಡಬಹುದು ಎಂದರು. ಇದಕ್ಕೆ ಉತ್ತರವನ್ನು ನೀಡಿದ ಅಧ್ಯಕ್ಷ ಗಿರೀಶ್, ಈ ಬಗ್ಗೆ ಜಿಲ್ಲಾಧಿಕಾರಿಗೆ ಪುರಸಭೆಯಿಂದ ಪತ್ರ ಬರೆಯಲಾಗಿತ್ತು. ಎಂಜಿನಿಯರ್ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿ ಕಚೇರಿಯಿಂದ ಉತ್ತರ ಬಂದಿದೆ ಎಂದರು.
ಕ್ರಮ ಏನು?: ಮುಖ್ಯ ಎಂಜಿನಿಯರ್ ಪ್ರಸಾದ್ ಕಾಮಗಾರಿ ಮಾಡದೇ ಬಿಲ್ ಮಾಡಿಸಿಕೊಂಡಿರುವ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಂಡಿದ್ದರೂ, ಯಾವ ಕ್ರಮ ಜರುಗಿಸಲಾಗಿದೆ? ಡಿಸಿ ತನಿಖೆ ಎಲ್ಲಿಗೆ ಬಂತು? ಈ ಬಗ್ಗೆ ಮಾಹಿತಿ ನೀಡುವಂತೆ ಸದಸ್ಯ ಶಾಂತಕುಮಾ ಅವರನ್ನು ಒತ್ತಾಯಿಸಿದರು.ಸದಸ್ಯ ಶ್ರೀನಿಧಿ ಮಾತನಾಡಿ, ವ್ಯಾಪಾರಸ್ಥರಿಂದ ಪುರಸಭೆಯ ಅಧಿಕಾರಿಗಳು ಪರವಾನಗಿ ಶುಲ್ಕ ಹೆಚ್ಚಳದ ಬಗ್ಗೆ ದೂರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

