ಆಯುರ್ವೇದ ವೈದ್ಯರು ಅಧ್ಯಯನ ಶೀಲರಾಗಲಿ
ಹಾಸನ: ಆಯುರ್ವೇದವು ಸಹಸ್ರಾರು ವರ್ಷಗಳ ಹಿನ್ನೆಲೆ ಹೊಂದಿದೆ. ಅಂದು ಉಲ್ಲೇಖಿಸಿದ ಚಿಕಿತ್ಸಾ ಸೂತ್ರಗಳು ಸರ್ವಕಾಲಕ್ಕೂ ವಿಧಿತವಾಗಿರುತ್ತವೆ ಎಂದು ಕನ್ಯಾಕುಮಾರಿಯ ಖ್ಯಾತ ಆಯುರ್ವೇದ ತಜ್ಞ ಡಾ. ಮಹಾದೇವನ್ ಹೇಳಿದರು.
ನಗರದ ಎಸ್.ಡಿ.ಎಂ ಆಯುರ್ವೇದ ಮಹಾವಿದ್ಯಾಲಯದಲ್ಲಿ ಕಾಯಚಿಕಿತ್ಸೆ-ಪಂಚಕರ್ಮ-ಮಾನಸರೋಗ ವಿಭಾಗಗಳ ವತಿಯಿಂದ ನಡೆಯುತ್ತಿರುವ ಅತ್ಯುತ್ತಮ ಆಯುರ್ವೇದ ಚಿಕಿತ್ಸಾ ಅಭ್ಯಾಸ ಎಂಬ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸತತ ಅಧ್ಯನ ಮಾಡಿ: ಆಯುರ್ವೇದ ವೈದ್ಯರು ಸತತವಾಗಿ ಆಯುರ್ವೇದ ಚಿಕಿತ್ಸಾ ಗ್ರಂಥಗಳ ಅಧ್ಯಯನ ಮಾಡುತ್ತಾ, ನುರಿತ ಆಯುರ್ವೇದ ತಜ್ಞರಲ್ಲಿ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳುತ್ತಾ, ತಮ್ಮ ಚಿಕಿತ್ಸಾ ಜ್ಞಾನನವನ್ನು ಪುನಶ್ಚೇತನಗೊಳಿಸುತ್ತಿರಬೇಕು ಎಂದು ಅವರು ಹೇಳಿದರು.
ಕಾಲೇಜಿನ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಡಾ. ಗುರುದೀಪ್ ಸಿಂಗ್, ಪಂಚಕರ್ಮ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿಕುಮಾರ್ ಇದ್ದರು. ಪ್ರಾಂಶುಪಾಲ ಡಾ. ಪ್ರಸನ್ನ ನರಸಿಂಹರಾವ್ ಅವರು ಅಧ್ಯಕ್ಷತೆ ವಹಿಸಿದ್ದರು.
ವಿಚಾರ ಸಂಕಿರಣ: ಎರಡು ದಿನಗಳ ಈ ವಿಚಾರ ಸಂಕಿರಣದಲ್ಲಿ ಅನುಭವಿ ಆಯುರ್ವೇದ ವೈದ್ಯ ಡಾ. ಎಲ್. ಮಹದೇವನ್, ಡಾ. ನಾರಾಯಣ ಪ್ರಕಾಶ್, ಡಾ. ದಿವಾಕರ್ ಜೋಷಿ, ಡಾ. ಮುರಳಿಕೃಷ್ಣ ಇವರುಗಳಿಂದ ಅನೇಕ ಉಪಯುಕ್ತ ಚಿಕಿತ್ಸೆಗಳ ಕುರಿತು ಉಪನ್ಯಾಸ ಮತ್ತು ಸಂವಾದ ಆಯೋಜಿಸಲಾಗಿದೆ. ದೇಶದ 10 ರಾಜ್ಯಗಳಿಂದ 120 ಜನ ಆಯುರ್ವೇದ ವೈದ್ಯರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದಾರೆ.
ಅನುಷಾ ಮತ್ತು ವೃಂದದವರು ಪ್ರಾರ್ಥಿಸಿದರು. ಡಾ. ಚಿಂಟುಜಾ ನಿರೂಪಿಸಿದರು. ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ನಾರಾಯಣ ಪ್ರಕಾಶ್ ಸ್ವಾಗತಿಸಿದರು. ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿಕುಮಾರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

