ಹಾಸನ

ಸಮಾನ ಮನಸ್ಕರಿಗೆ ಬ್ಲಾಗ್‌ಗಳು ಸಹಕಾರಿ

Published On :

ಹಾಸನ:  ಪ್ರಪಂಚದ ನಾನಾ ಕಡೆಯಲ್ಲಿರುವ ಸಮಾನ ಮನಸ್ಕರನ್ನು ತಲುಪಲು ಬ್ಲಾಗ್‌ಗಳು ಸಹಾಯಕವಾಗಿದೆ ಎಂದು ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಪ್ರೊ. ನಾರಾಯಣ ಪ್ರಸಾದ್ ತಿಳಿಸಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲೆಯ ಲೇಖಕರಿಗೆ ಹಾಗೂ ಸಾಹಿತ್ಯಾಸಕ್ತರಿಗೆ ಇತ್ತೀಚೆಗೆ ಏರ್ಪಡಿಸಿದ್ದ ಬ್ಲಾಗ್‌ಗಳ ಕುರಿತಾದ ಪ್ರಾತ್ಯಕ್ಷತೆ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪತ್ರಿಕೆಗಳಲ್ಲಿ ಎಲ್ಲರ ಲೇಖನಗಳನ್ನು, ವಿಚಾರ ಧಾರೆಗಳನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ. ಒಮ್ಮೆ ಬ್ಲಾಗ್‌ನಲ್ಲಿ ಲೇಖನಗಳನ್ನು ಸೇರ್ಪಡೆಗೊಳಿಸಿದ ನಂತರ ಅದು ಸಾರ್ವತ್ರಿಕವಾಗುತ್ತದೆ. ಇದರಿಂದ ಓದಲು ಮತ್ತು ಪ್ರತಿಕ್ರಿಯಿಸಲು ಅವಕಾಶಗಳಿವೆ. ವಿಷಯವಾರು ಬ್ಲಾಗ್‌ಗಳನ್ನು ತೆರೆಯಲು ಅವಕಾಶವಿರುವುದರಿಂದ ಶಿಕ್ಷಕ, ವಿದ್ಯಾರ್ಥಿಯೊಂದಿಗೆ ಉದ್ಯಮಿ, ಗ್ರಾಹಕನೊಡನೆ, ರಾಜಕಾರಣಿಗಳು ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಿ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿದೆ.
ಅಪ್‌ಡೇಟ್ ಅಗತ್ಯ: 1997, ಡಿಸೆಂಬರ್ 17ರಿಂದ ವೆಬ್ ಲಾಗ್ ಎಂಬ ಹೆಸರಿನಿಂದ ಆರಂಭಗೊಂಡಿತು. ಇಂದು 17ಕೋಟಿಗೂ ಹೆಚ್ಚು ಬ್ಲಾಗ್‌ಗಳಿವೆಯಾದರೂ, ಅವುಗಳನ್ನು ಪ್ರಾರಂಭಿಸುವಾಗ ಇರುವ ಉತ್ಸಾಹ, ನಂತರ ಅಪ್‌ಡೇಟ್ ಮಾಡುವಾಗ ತೋರುವುದಿಲ್ಲ. ಇದರಿಂದ ಬಹುತೇಕರ ಬ್ಲಾಗ್‌ಗಳು ನಿಷ್ಕ್ರಿಯವಾಗಿವೆ ಎಂದರು. ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಸಾಪ  ಅಧ್ಯಕ್ಷ ಡಾ. ಎಚ್.ಎಲ್. ಜನಾರ್ದನ್ ಮಾತನಾಡಿ, ಸಾಮಾಜಿಕ ತಾಣಗಳನ್ನು, ತಂತ್ರಜ್ಞಾನವನ್ನು ಬಳಸಿಕೊಂಡು ಮತದಾರರನ್ನು ತಲುಪುವಲ್ಲಿ ಭಾರತದ ಪ್ರಧಾನಿ ನರೇಂದ್ರಮೋದಿ ಮಾದರಿಯಾಗಿದ್ದಾರೆ ಎಂದರು.
ಬೆಳೆಯುವಿಕೆ: ಕಸಾಪ ಗೌರವ ಕಾರ್ಯದರ್ಶಿ ಗೊರೂರು ಶಿವೇಶ್ ಮಾತನಾಡಿ, ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಕಾಲಕ್ಕನುಗುಣವಾಗಿ ಬೆಳೆಯದೆ ಇದ್ದಲ್ಲಿ, ಕಾಲದ ಓಟದಲ್ಲಿ ಹಿಂದಿಳಿಯುತ್ತಾರೆ. ಕಸಾಪವು ಇದಕ್ಕಾಗಿ ಜಿಲ್ಲೆಯ ಎಲ್ಲಾ ಲೇಖಕರಿಗೂ ತಮ್ಮ ಬ್ಲಾಗ್‌ಗಳನ್ನು ಪ್ರಾರಂಭಿಸಲು ಅನುಕೂಲವಾಗುವ ಉದ್ದೇಶದಿಂದ ಕಾರ್ಯಾಗಾರವನ್ನು ಏರ್ಪಡಿಸಿದೆ ಎಂದರು. ಜಿಲ್ಲಾ ಬ್ಲಾಗ್ ಫೋರಂನ ಸದಸ್ಯರಾದ ಅಹಮದ್ ಹಗರೆ, ಪ್ರಭಾಮಣಿ  ನಾಗರಾಜ್, ಬ್ಲಾಗಿಂಗ್ ಕುರಿತಾದ ತಮ್ಮ ಅನುಭವ ಹಂಚಿಕೊಂಡರು. ಹಿರಿಯ ಲೇಖಕಿ ಬಾನು ಮುಷ್ತಾಕ್, ಚಂದ್ರುಕಾಳೇನಹಳ್ಳಿ, ಜ.ಹೊ.ನಾರಾಯಣಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.