ಮೆಗಾ ಡೇರಿ ಸ್ಧಾಪನೆಗೆ ಚಿಂತನೆ
ಮದ್ದೂರು: ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಮೆಗಾ ಡೈರಿ ಸ್ಧಾಪಿಸುವ ಚಿಂತನೆ ನಡೆದಿದೆ ಎಂದು ಒಕ್ಕೂಟದ ಅಧ್ಯಕ್ಷ ಕದಲೂರು ರಾಮಕೃಷ್ಣ ಸೋಮವಾರ ಹೇಳಿದರು.
ಪಟ್ಟಣದ ಶಿವಪುರದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳಿಗೆ ಹಾಲಿನ ಗುಣಮಟ್ಟ ನಿರ್ವಹಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅತಿ ಹೆಚ್ಚು ಹಾಲು ಸಂಗ್ರಣೆ ಮಾಡುವಲ್ಲಿ ರಾಜ್ಯದ 13 ಜಿಲ್ಲಾ ಒಕ್ಕೂಟಗಳ ಪೈಕಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ 12 ನೇ ಸ್ಧಾನದಲ್ಲಿದೆ. ಹಾಲಿನ ಗುಣಮಟ್ಟದಲ್ಲಿ ನಾವು 2 ನೇ ಸ್ಧಾನದಲ್ಲಿ ಇದ್ದೆವು. ಈಗ 5 ನೇ ಸ್ಧಾನಕ್ಕೆ ಕುಸಿದಿದ್ದೇವೆ ಎಂದರು.
ಒಕ್ಕೂಟಕ್ಕೆ ಪ್ರತಿದಿನ 6.64 ಲಕ್ಷ ಲೀ. ಹಾಲು ಶೇಖರಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಕ್ಕೂಟ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಬೇಕಾದರೆ ಅತ್ಯಾಧುನೀಕ ತಂತ್ರಜ್ಞಾನ ಬಳಕೆ ಅತ್ಯಗತ್ಯವಾಗಿದೆ. ಒಕ್ಕೂಟದಲ್ಲಿ ಕನಿಷ್ಠ 10 ಲಕ್ಷ ಲೀ. ಹಾಲು ಸಂಗ್ರಹಣೆ ಸಾಮರ್ಥ್ಯ ಹೊಂದುವ ನಿಟ್ಟಿನಲ್ಲಿ ಮೆಗಾ ಡೈರಿ ಸ್ಧಾಪನೆ ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ಯೋಜನೆ ರೂಪಿಸುವ ಚಿಂತನೆ ಹೊಂದಲಾಗಿದೆ ಎಂದು ಹೇಳಿದರು.
ಮೆಗಾ ಡೈರಿ ಸ್ಧಾಪನೆಗೆ ಸುಮಾರು 200 ಕೋಟಿ ರು. ಬಂಡವಾಳ ಅಗತ್ಯವಾಗಿದೆ. ಸರ್ಕಾರ ಕಳೆದ ತಿಂಗಳು ಪ್ರತಿ ಲೀ. ಹಾಲಿಗೆ 2 ರು. ಹೆಚ್ಚಳ ಮಾಡಿರುವ ಹಣವನ್ನು ಒಕ್ಕೂಟದ ಮೂಲಭೂತ ಸೌಕರ್ಯಗಳಿಗೆ ಬಳಕೆ ಮಾಡಬೇಕಿದೆ. ಈ ಹಣವನ್ನು ಯಾವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು ತಿಳಿಸಿದರು.
ಒಕ್ಕೂಟದ ವ್ಯವಸ್ಧಾಪಕ ನಿರ್ದೇಶಕ ಡಾ.ಕೆ.ಸ್ವಾಮಿ ಮಾತನಾಡಿ ಜಾಗತೀಕ ಮಾರುಕಟ್ಟೆಯಲ್ಲಿ ಜಿಲ್ಲಾ ಹಾಲು ಒಕ್ಕೂಟ ಪೈಪೋಟಿ ಎದುರಿಸಬೇಕಾದರೆ ನಂದಿನಿ ಹಾಲಿನ ಗುಣಮಟ್ಟ ಬೇರೆ ಹಾಲಿಗಿಂತ ಉತ್ತಮವಾಗಿರಬೇಕು ಎಂದು ಹೇಳಿದರು.
ರಾಷ್ಟ್ರೀಯ ಹೈನು ಅಭಿವೃದ್ಧಿ ನಿಗಮದ ನಿವೃತ್ತ ವಿಜ್ಞಾನಿ ಡಾ.ಇ.ಜಿ.ಜಗನಾಥ್, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಉಮೇಶ್, ಪ್ರಧಾನ ವ್ಯವಸ್ಧಾಪಕ ಜಗದೀಶ್, ವ್ಯವಸ್ಧಾಪಕ ಕೃಷ್ಣಾರೆಡ್ಡಿ, ಉಪ ವ್ಯವಸ್ಧಾಪಕರಾದ ಡಾ.ಅಕ್ಕಲಪ್ಪರೆಡ್ಡಿ ಡಾ.ಕೃಷ್ಣಮೂರ್ತಿ, ಡಾ.ರಾಮಕೃಷ್ಣಯ್ಯ, ಶ್ಯಾಂಸುಂದರ್, ಶ್ರೀನಿವಾಸರೆಡ್ಡಿ, ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

