ಹಾಸನ

ಪಾಲಿಸಿದಾರರ ಹಣ ಹಿಂದಿರುಗಿಸಲು ಆಗ್ರಹ

Published On :

ಮೈಸೂರು: ಎಲ್‌ಐಸಿ ಮೈಕ್ರೋ ಇನ್ಸೂರೆನ್ಸ್ ಪಾಲಿಸಿದಾರರಿಗೆ ಹಣ ಹಿಂದಿರುಗಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಹಾಸನ ಜಿಲ್ಲಾ ಸಮಿತಿಯವರು ಮೈಸೂರಿನ ಬನ್ನಿಮಂಟಪದಲ್ಲಿರುವ ಎಲ್‌ಐಸಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು. ಮೈಕ್ರೋ ಇನ್ಸೂರೆನ್ಸ್ ಪಾಲಿಸಿಯಲ್ಲಿ ಖಾಸಗಿ ಏಜೆನ್ಸಿಗಳ (ಸ್ವಯಂ ಸೇವಾ ಸಂಸ್ಥೆಗಳು) ಪಾತ್ರದ ಬಗ್ಗೆ ಪಾಲಿಸಿದಾರರಿಗೆ, ಸಬ್ ಏಜೆಂಟರು ಆದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ನಿರುದ್ಯೋಗಿಗಳಿಗೆ ಎಲ್‌ಐಸಿ ಯಾವುದೇ ಮಾಹಿತಿ ನೀಡಿಲ್ಲ. 2008ರಲ್ಲಿ ಆರಂಭವಾದ ಈ ಪ್ರಕ್ರಿಯೆಯಲ್ಲಿ ಕೇವಲ 2 ವರ್ಷದ ಹಣವನ್ನು ಮಾತ್ರ ಎನ್‌ಜಿಒಗಳು ಎಲ್‌ಐಸಿ ಕಚೇರಿಗೆ ಪಾವಸಿವೆ. ನಂತರ ಪಾಲಿಸಿದಾರರು ಮತ್ತು ಸಬ್ ಏಜೆಂಟರುಗಳಿಂದ ಪಡೆದ ಹಣವನ್ನು ಎಲ್‌ಐಸಿಗೆ ನೀಡಿಲ್ಲ ಎಂದು ದೂರಿದರು. ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ, ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲೂಕಿನಲ್ಲೂ ಸಾಕಷ್ಟು ಪಾಲಿಸಿದಾರರಿಗೆ ಮೋಸ ಮಾಡಿದ್ದಾರೆ. ಈ ಸಂಬಂಧ ಸಿಐಡಿ ತನಿಖೆ ನಡೆಯುತ್ತಿದ್ದರೂ ಈವರೆಗೂ ಪಾಲಿಸಿದಾರರು ಮತ್ತು ಸಬ್ ಏಜೆಂಟರುಗಳಿಗೆ ಹಣ ವಾಪಸ್ ನೀಡಿಲ್ಲ ಎಂದು ಕಿಡಿಕಾರಿದರು. ಸಿಐಡಿ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ, ಪಾಲಿಸಿದಾರರು ಮತ್ತು ಸಬ್ ಏಜೆಂಟರ ಹಣ ವಾಪಸ್ ಕೊಡಿಸಬೇಕು. ಹಣ ಕೊಡುವ ಜವಾಬ್ದಾರಿಯನ್ನು ಎಲ್‌ಐಸಿ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಅಂಗನವಾಡಿ ನೌಕರರ ಸಂಘದ ಹಾಸನ ಜಿಲ್ಲಾ ಸಮಿತಿ ಅಧ್ಯಕ್ಷೆ ಇಂದ್ರಮ್ಮ, ಕಾರ್ಯದರ್ಶಿ ಶಾಂತಲಕ್ಷ್ಮಿ ನೇತೃತ್ವ ವಹಿಸಿದ್ದರು.
ಕಣ್ಣಿನ ರಕ್ಷಣೆಗೆ ಜಾಗೃತಿ ಅಗತ್ಯ
ಅರಸೀಕೆರೆ:  ಮನುಷ್ಯನಿಗೆ ಪ್ರತಿಯೊಂದು ಅಂಗಗಳು ಪ್ರಮುಖವಾಗಿದ್ದು, ಆದರಲ್ಲೂ ಕಣ್ಣಿನ ಮಹತ್ವ ಅತ್ಯಂತ ಪ್ರಮುಖವಾಗಿದ್ದು, ಅವುಗಳ ರಕ್ಷಣೆ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವುದು ಸೂಕ್ತ ಎಂದು ಆರ್ಯ ವೈಶ್ಯ ಮಂಡಲಿ ಅಧ್ಯಕ್ಷ ಬಿ.ಎಸ್.ಅರುಣ್ ಕುಮಾರ್ ತಿಳಿಸಿದರು.  ಸ್ಥಳೀಯ ವಾಸವಿ ಕ್ಲಬ್ ಇಂಟರ್ ನ್ಯಾಷನಲ್ ಮತ್ತು ಮೈಸೂರಿನ ಭಗವಾನ್ ಮಹಾವೀರ್ ದರ್ಶನ್ ಕಣ್ಣಿನ ಆಸ್ಪತ್ರೆ  ಸಹಯೋಗದಲ್ಲಿ ಪಟ್ಟಣ ವಾಸವಿ ಮಹಲ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಭಗವಾನ್ ಮಹಾವೀರ್ ಕಣ್ಣಿನ ಆಸ್ಪತ್ರೆಯ ಡಾ. ಭರತ್ ಕುಮಾರ್, ಬೆಂಗಳೂರು ವಾಸವಿ ಕ್ಲಬ್, ಇಂಟರ್ ನ್ಯಾಷನಲ್‌ನ ಜಿಲ್ಲಾ ವಲಯದ ಜಿಲ್ಲಾ ಮುಖ್ಯಸ್ಥ ಎ.ಎಸ್.ರಮೇಶ್ ಬಾಬು, ವಾಸವಿ ಕ್ಲಬ್‌ನ ಮತ್ಚೊಬ್ಬ ಮುಖ್ಯಸ್ಥರಾದ ಎಸ್.ಮಂಜುನಾಥ್, ಗೌರವ ಅಧ್ಯಕ್ಷ ಕೆ.ಎನ್.ದುರ್ಗಪ್ಪ ಶೆಟ್ಟಿ ಮಾತನಾಡಿದರು.  ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಇದ್ದರು. ವಾಸವಿ ಕ್ಲಬ್ ಇಂಟರ್ ನ್ಯಾಷನಲ್ ಅಧ್ಯಕ್ಷ ಎಂ.ಎಸ್.ರಾಜಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.  ತಪಾಸಣಾ ಶಿಬಿರದಲ್ಲಿ ಒಟ್ಟು 468 ಜನರು ತಮ್ಮ ಕಣ್ಣಿನ ಪರೀಕ್ಷೆ ಒಳಗಾಗಿದ್ದು, ಒಟ್ಟು 60 ಮಂದಿ ಶಸ್ತ್ರಚಿಕಿತ್ಸೆಗಾಗಿ ಗುರುತಿಸಲಾಗಿದೆ ಎಂದು ವಾಸವಿ ಕ್ಲಬ್ ಅಧ್ಯಕ್ಷ ಎಂ.ಎಸ್. ರಾಜಗೋಪಾಲ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.