ಅತಿ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಗೆ ಹಾನಿ
ಹಾಸನ: ಇಂದಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರ ಬಳಕೆಯನು ಅತಿಯಾಗಿ ಭೂಮಿಗೆ ನೀಡಲಾಗುತ್ತಿರುವುದರಿಂದ ಭೂಮಿಯಲ್ಲಿರುವ ಸೂಕ್ಷ ಜೀವಿಗಳಿಗೆ ತೊಂದರೆಯಾಗುತ್ತಿದೆ. ಇದರಿಂದ ಮುಂದಿನ ದಿನಮಾನಗಳಲ್ಲಿ ಭೂಮಿ ಬರಡಾಗುವ ಸಂಭವವಿದೆ ಎಂದು ಹಾಸನದ್ಕೃಷಿ ಕಾಲೇಜಿನ ಸಹ ಪ್ರಾಧ್ಯಾಪಕ ಶಿವಮೂರ್ತಿಭೈರಪ್ಪನವರ್ ಎಚ್ಚರಿಸಿದರು.
ತಾಲೂಕಿನ ಕಟ್ಟಾಯ ಹೋಬಳಿ ಅಂಕನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ, ಅನುಗನಾಳು ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ (ಬಿಸಿಆರ್ಟಿ) ಹಾಗೂ ಅಂಕನಹಳ್ಳಿಯ ಜೈವಿಕ ಕೃಷಿಕರ ಸಂಘದ ಆಶ್ರಯದಲ್ಲಿ ಜನಾರ್ದನ್ ಮತ್ತು ತಿಮ್ಮೇಗೌಡರ ತಾಕಿನಲ್ಲಿ ಆಯೋಜಿಸಿದ್ದ ಸಾವಯವ ಕೃಷಿ ಸೆಣಬಿನ ಬೇಸಾಯ ಕುರಿತು ಕ್ಷೇತ್ರೋತ್ಸವದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಗೊಬ್ಬರ: ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಲು ಹಸಿರೆಲೆ ಗೊಬ್ಬರವಾಗಿ ಉಳುಮೆಗೆ ಮೊದಲು ಎಕರೆಗೆ 15 ರಿಂದ 20 ಕೆಜಿಯಷ್ಟು ಸೆಣಬಿನ ಬೀಜಗಳನು ಚೆಲ್ಲಿ ಉಳುಮೆ ಮಾಡಿ, ಇವು ಬೆಳೆದ 40 ರಿಂದ 45 ದಿನಗಳೂಳಗಾಗಿ ಭೂಮಿಗೆ ಸೇರಿಸಿದಾಗ ಒಂದು ಚದರ ಮೀಟರ್ಗೆ 5 ಕೆ.ಜಿ., ಅಂದರೆ ಒಂದು ಎಕರೆ ಜಮೀನಿಗೆ 10 ಟನ್ ಕೊಟ್ಟಿಗೆ ಗೊಬ್ಬರ ನೀಡಿದಂತಾಗುತ್ತದೆ ಎಂದರು.
ಕೃಷಿಕ ಬ್ಯಾಡರಹಳ್ಳಿ ರವಿಶಂಕರ್ ಮಾತನಾಡಿ, ನಾನು ನನ ಜಮೀನಿಗೆ 15 ವರ್ಷದಿಂದ ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ ಬೆಳೆ ಬೆಳೆದು ಎಲ್ಲರಿಗಿಂತಲೂ ಉತ್ತಮ ಇಳುವರಿ ತೆಗೆಯುತ್ತಿದ್ದೇನೆ ಎಂದರು.
ಉಡುವಾರೆ ಜಯಕುಮಾರ್ ಮಾತನಾಡಿ, ನಮ್ಮ ಪೂರ್ವಜರು ಮಾಡಿಕೊಂಡು ಬರುತ್ತಿದ್ದ ಸೆಣಬಿನ ಕೃಷಿಯನು ಇಂದಿನ ದಿನಗಳಲ್ಲಿ ಪ್ರಾತ್ಯಕ್ಷತೆ ಮೂಲಕ ತಿಳಿಸಬೇಕಾಗಿರುವುದು ವಿಷಾದಕರ ಸಂಗತಿಯಾಗಿದೆ ಎಂದರು.
ಊರಿಗೊಂದೇ ನಾಟಿ ಹಸು: ಉಡುವಾರೆ ಜಯಕುಮಾರ್ ಅವರು ಹೈನುಗಾರಿಕೆ ಮಹತ್ವ ಕುರಿತು ಮಾತನಾಡುವ ಸಂದರ್ಭದಲ್ಲಿ ನಾಟಿ ಹಸುವಿನ ಮಹತ್ವವನೂ ಹೇಳಿದರು. ಈ ಅಂಕನಹಳ್ಳಿ ಗ್ರಾಮದಲ್ಲಿ ಎಷ್ಟು ನಾಟಿ ಹಸುಗಳಿವೆ ಎಂದು ಸಭಿಕರಿಗೆ ಪ್ರಶೆ ಎಸೆದಾಗ, ಇಡೀ ಊರಿಗೆ ರಾಜಮ್ಮ ಮಾತ್ರ ಕೈ ಎತ್ತಿದ್ದರು ಅಂದರೆ ಊರಿಗೊಂದೇ ನಾಟಿ ಹಸು ಇರುವುದು ಎಂಬುದು ಖಾತ್ರಿಯಾಯಿತು. ಅಂತಿಮವಾಗಿ ರಾಜಮ್ಮ ಅವರಿಗೆ ಬಹುಮಾನವನೂ ನೀಡಲಾಯಿತು
ಗ್ರಾಪಂ ಅಧ್ಯಕ್ಷ ರಾಮೇಗೌಡ ಮಾತನಾಡಿ, ಸಾವಯವ ಭಾಗ್ಯ ಯೋಜನೆ ಅಡಿ ಸಾವಯವ ಕೃಷಿಗೆ ಪೂರಕವಾದ ಹಲವು ಘಟಕಗಳಿದ್ದು, ಇವುಗಳಿಗೆ ಇಲಾಖೆ ವತಿಯಿಂದ ಶೇ. 50 ಸಹಾಯಧನವನು ನೀಡಲಾಗುತ್ತಿದೆ ಎಂದರು.
ಬಿಸಿಆರ್ಟಿ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಕೃಷಿ ಅಧಿಕಾರಿ ಎನ್. ನಾಗರಾಜು ಅವರು ಇಲಾಖೆಯಲ್ಲಿ ದೊರಕುವ ಸವಲತ್ತುಗಳನು ವಿವರಿಸಿ ಅವುಗಳ ಸದ್ಬಳಕೆಗೆ ಕೋರಿದರು.
ಜಿಪಂ ಸದಸ್ಯೆ ಶಾಂತಮ್ಮ, ಅಂಕನಹಳ್ಳಿ ಜೈವಿಕ ಕೃಷಿಕರ ಸಂಘದ ಅಧ್ಯಕ್ಷ ಎಸ್. ನಾಗರಾಜು (ಡೈರಿ) ಇದ್ದರು. ಬಿಸಿಆರ್ಟಿ ಕ್ಷೇತ್ರಾಧಿಕಾರಿ ಎಚ್. ಮಹೇಶ್ ಸ್ವಾಗತಿಸಿದರು. ಕ್ಷೇತ್ರಾಧಿಕಾರಿ ಶಿವಪ್ಪ ವಂದಿಸಿದರು. ಕ್ಷೇತ್ರ ಸಹಾಯಕ ಕುಮಾರಸ್ವಾಮಿ ನಿರೂಪಿಸಿದರು. ಅಂಕನಹಳ್ಳಿ ರೈತರು, ರೈತ ಮಹಿಳೆಯರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

