ರಾಮನಾಥಪುರ ಹೋಬಳಿಯಲ್ಲಿ ಹೊಗೆಸೊಪ್ಪು ನಾಟಿ ಕೃಷಿ ಆರಂಭ
ರಾಮನಾಥಪುರ: ರೈತರು ಬೆಳೆಯ ಬಗ್ಗೆ ಅಪಾರ ನಿರೀಕ್ಷೆ ಇಟ್ಟು ಕೊಂಡಿದ್ದಾರೆ. ಭೂಮಿಯಲ್ಲಿ ಬಿತ್ತಿರುವ ರೈತರು ತಮ್ಮ ಹೊಲ ಗದ್ದೆಗಳಲ್ಲಿ ತಂಬಾಕು ನಾಟಿ ಮುಂತಾದ ಸಸಿ ಮಡಿಯಲ್ಲಿರುವ ಕಳೆ ತೆಗೆಯಲು ತಮ್ಮ ಎತ್ತುಗಳಲ್ಲಿ ಹರತೆ ಬೇಸಾಯದಲ್ಲಿ ತೊಡಗಿದ್ದಾರೆ.
3-4 ವರ್ಷಗಳ ಹಿಂದಿನ ಸಾಲಿನ ಬೇಸಿಗೆಯನ್ನು ಹೊರತುಪಡಿಸಿದರೆ ಉಳಿದ ಅವಧಿಯಲ್ಲಿ ಕೆಲವು ಕಡೆ ಮುಂಗಾರು ಪ್ರಾರಂಭದಲ್ಲಿ ಅಲ್ಪಸಲ್ಪ ಮಳೆಯಾಗುತ್ತಿದ್ದರಿಂದ ಕೆರೆ ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿ ಇದರಿಂದ ಹೊಗೆ ಬೀಜ ಸಸಿ ಮಡಿ, ಉಳುಮೆಗೆ ಅನುಕೂಲವಾಗಿತ್ತು. ಅದರೆ 20 ದಿನಗಳಿಂದ ಮತ್ತೆ ಮಳೆ ಇಲ್ಲದೇ ಬೆಳೆಗಳು ಒಣಗುತ್ತಿದ್ದು ಮತ್ತು ಕೆರೆ ಕಟ್ಟೆಗಳಲ್ಲಿ ನೀರು ಇಲ್ಲದೇ ದನಕುರು, ಹಕ್ಕಿಗಳಿಗೂ ನೀರಿನ ಬರ ಎದುರಾಗಿದೆ.
ಪೂರ್ವದಿಂದ ಮುಂಗಾರು ಮಳೆ ಬೀಳ ತೊಡಗಿದಾಗ ರೈತರು ಹರ್ಷಚಿತ್ತರಾಗಿದ್ದರು. ಉತ್ತಮ ಫಸಲು ಬೆಳೆಯಬಹುದು ಎಂಬ ಲೆಕ್ಕಾಚಾರ ಅವರದಾಗಿತ್ತು. ಅದರೆ, 20 ದಿನಗಳಿಂದ ಮಳೆ ಇಲ್ಲದೇ ರೈತರ ಸಂತಸ ಬಹುಕಾಲ ಉಳಿಯದೇ ಅತಿಯಾದ ಬಿಸಿಲಿನಿಂದಾಗಿ ತಂಬಾಕು ಸಸಿ ಗಿಡಗಳು ಒಣಗಿ ಹಾಳಾಗುತ್ತಿವೆ.
ಈ ಭಾಗದ ರೈತರು ಹೆಚ್ಚು ತಂಬಾಕು, ಮುಸುಕಿನ ಜೋಳ, ಅಲೂಗಡ್ಡೆ, ರಾಗಿ ಬೆಳೆಯನ್ನೇ ಹೆಚ್ಚು ಆಶ್ರಯಿಸಿರುವುದರಿಂದ ಬೆಳೆ ಮಾಡಲು ತುಂಬಾ ಹರಸಾಹಸ ಪಡಬೇಕಿದೆ. ಇಲ್ಲಿ ಕೆಲವು ಕಡೆ ನಮಗೆ ನೀರಾವರಿ ಮೂಲಗಳು ಇಲ್ಲ. ಕಾವೇರಿ ನದಿ ಪಾತ್ರದಲ್ಲಿ ಬರುವ ಜಮೀನು ಆಗಿರುವುದರಿಂದ ನೂರಾರು ಅಡಿ ದೂರದಿಂದ ಪೈಪ್ ಅಳವಡಿಸಿ ಬೇಸಾಯ ಮಾಡಿದ್ದೇವೆ. ಮಳೆಯನ್ನು ನೆಚ್ಚಿಕೊಂಡು ಹೊಗೆ ಬೀಜ ಹಾಕಿದೆ. ಆದರೆ, ಇದುವರೆಗೂ ಮಳೆ ಹೇಳಿಕೊಳ್ಳುವ ಮಟ್ಟದಲ್ಲಿ ಆಗಿಲ್ಲ. ಕೈಸಾಲ ಮಾಡಿ ಬೋರ್ವೆಲ್ ಹಾಕಿಸಿ ಬೆಳಿ ಮಾಡುತ್ತಿದ್ದೇನೆ. ಆದ್ರೆ ಕರೆಂಟ್ ಸಕಾಲದಲ್ಲಿ ದೊರೆಯದ ಪರಿಣಾಮ ಬೆಳೆ ಕೈಗೊಳ್ಳಲು ಹಿನ್ನೆಡೆಯಾಗಿದೆ.
ಕಾವೇರಿ ನದಿ ಪಾತ್ರದ ಕಟ್ಟೇಪುರ ನಾಲೆಯ ಎಡದಂಡೆ ಹಾಗೂ ಬಲದಂಡೆ ಮತ್ತು ಹಾರಂಗಿ ನಾಲೆಯ ಎಡದಂಡೆ ಹಾಗೂ ಬಲದಂಡೆ ವ್ಯಾಪ್ತಿಗೆ ಬರುವ ಹಾಗೂ ನೀರಿನ ಮೂಲಗಳನ್ನು ಹೊಂದಿರುವವರು ಈಗಾಗಲೇ ಸಾವಿರಾರು ಎಕರೆ ಪ್ರದೇಶದಲ್ಲಿ ನಾಟಿ ಕಾರ್ಯ ಮುಗಿಸಿ ಬೇಸಾಯದಲ್ಲಿ ನಿರತವಾಗಿರುವುದು ಕಂಡುಬಂದಿದೆ.
ನಾಲ್ಕಾರು ವರ್ಷಗಳಿಂದ ರೈತರು ತಮ್ಮ ಕೃಷಿ ಚಟುವಟಿಕೆಗಾಗಿ ಮಾಡಿರುವ ಲಕ್ಷಾಂತರ ರೂ ಬ್ಯಾಂಕ್ ಮತ್ತು ಕೈಸಾಲ ಹೊರೆಯಿಂದ ಪರಿತಪಿಸಿ ರೈತ ಅತ್ಮಹತ್ಯಗೆ ಶರಣಾಗುತ್ತಿದ್ದಾನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದಿನ ಎಲ್ಲಾ ಬ್ಯಾಂಕ್ಗಳ ಸಾಲ ಮನ್ನಾ ಮಾಡಿ ಮುಂದಿನ ದಿನಗಳಲ್ಲಿ ರೈತರು ಜೀವನ ನಡೆಸಲು ಸಹಕರಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

