ಹಾಸನ

ಕ್ಷೀರ ಭಾಗ್ಯ ಉಪಯೋಗ ಪಡೆಯಲು ಜನರಿಗೆ ಕರೆ

Published On :

ಹೊಳೆನರಸೀಪುರ: ಭೂಮಿಯ ಮೇಲೆ ಹುಟ್ಟಿನಿಂದ ಸಾಯುವವರೆಗೂ ಹಾಲನ್ನು ಕುಡಿಯುವ ಅವಕಾಶವಿರುವ ಏಕೈಕ ಜೀವಿ ಮನುಷ್ಯ ಎಂದು ಜೆಎಸ್‌ಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗದೀಶ್ ಅಭಿಪ್ರಾಯಪಟ್ಟರು. ತಾಲೂಕಿನ ದೊಡ್ಡಕಾಡನೂರಿನ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ವಿಶ್ವ ಹಾಲು ದಿನ ಆಚರಣೆಯ ಸಂದರ್ಭದಲ್ಲಿ ಮಾತನಾಡುತ್ತಾ, ಹಾಲು ಸಂಪೂರ್ಣ ಆಹಾರ ಮಕ್ಕಳಿಗೆ ರಕ್ತಕ್ಕೆ ಬೇಕಾಗುವ ಗ್ಲೂಕೋಸ್ ಮತ್ತು ಖನಿಜ ಸತ್ವಗಳನ್ನು ಹೊಂದಿದ್ದು ಎಲ್ಲಾ ಮಕ್ಕಳಿಗೂ ಹಾಲು ಕುಡಿಯುವ ಅವಕಾಶ ಕಲ್ಪಿಸುವ ಸಲುವಾಗಿ ಸರ್ಕಾರ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತಂದು ಅವಕಾಶವಂಚಿತರಿಗೂ ಕೂಡ ಹಾಲು ನೀಡುವ ಪ್ರಯತ್ನವನ್ನು ಮಾಡುತ್ತಿದ್ದು, ಅದರ ಉಪಯೋಗ ಪಡೆದುಕೊಳ್ಳಿ ಎಂದು ಕರೆ ನೀಡಿದರು.ಹಿರಿಯ ಶಿಕ್ಷಕಿಯಾದ ಸ್ವರೂಪರಾಣಿ ಮಾತನಾಡುತ್ತಾ, ಹಾಲಿನಲ್ಲಿ ಕ್ಯಾಲ್ಷಿಯಂ ಅಂಶ ಇರುವುದರಿಂದ ಮೂಳೆಗಳು ಗಟ್ಟಿಗೊಳ್ಳಲು ಹಾಲು ಸಹಾಯವಾಗುತ್ತದೆ, ಆದ್ದರಿಂದ ಎಲ್ಲರೂ ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿ ನೀಡುವ ಹಾಲನ್ನು ನಿರ್ಲಕ್ಷಿಸದೆ ಕುಡಿಯಬೇಕು ಎಂದು ತಿಳಿಸಿದರು.  ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಶಿಕ್ಷಕರು, ಡಿ.ಇಡಿ ವಿಭಾಗದ ಉಪನ್ಯಾಸಕರು ಮತ್ತು ಪದವಿ ಪೂರ್ವ ವಿಭಾಗದ ಉಪನ್ಯಾಸಕರು ಇದ್ದರು.

ಲೋಕಾಯುಕ್ತರಿಂದ ಅರ್ಜಿ ವಿಚಾರಣೆ
ಹಾಸನ: ಸಾರ್ವಜನಿಕ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಮನವಿಗಳ ಹಾಗೂ ದೂರುಗಳ ಪರಿಶೀಲನೆಯಲ್ಲಿ ಜರುಗುತ್ತಿರುವ ವಿಳಂಬ, ಅಧಿಕಾರ ದುರುಪಯೋಗ, ಸರ್ಕಾರಿ ಹಣದ ದುರುಪಯೋಗ, ದುರಾಡಳಿತ, ಭ್ರಷ್ಟಾಚಾರ ಇತ್ಯಾದಿಗಳ ಬಗ್ಗೆ ಸಾರ್ವಜನಿಕರು ಕರ್ನಾಟಕ ಲೋಕಾಯುಕ್ತ ಕಾಯಿದೆ, 1984ರ ಅಡಿಯಲ್ಲಿ ನಮೂನೆ-1 ಹಾಗೂ ನಮೂನೆ-2ರಲ್ಲಿ ಕ್ರಮಬದ್ಧವಾಗಿ ಸಲ್ಲಿಸುವ ದೂರು ಅರ್ಜಿಗಳನ್ನು ಸ್ವೀಕರಿಸಿ ನೋಂದಾಯಿಸಿ ವಿಚಾರಣೆಗೆ ಒಳಪಡಿಸುವ ಕಾರ್ಯಕ್ರಮವನ್ನು ಜೂನ್ 23 ಮತ್ತು 24 ರಂದು ಜಿಲ್ಲೆಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣಾ ಕಚೇರಿಯಲ್ಲಿ ಏರ್ಪಡಿಸಲಾಗಿದೆ. ಕರ್ನಾಟಕ ರಾಜ್ಯದ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್, ಜೂನ್ 25 ರಂದು ಬೆಳಗ್ಗೆ 10.30 ರಿಂದ ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಲೋಕಾಯುಕ್ತ ಕಾಯಿದೆ, 1984ರ ಅಡಿಯಲ್ಲಿ ನಮೂನೆ-1 ಹಾಗೂ 2ರಲ್ಲಿ ಸಲ್ಲಿಸಲಾಗಿರುವ ಹಾಗೂ  ವಿಚಾರಣಾ ಹಂತಗಳಲ್ಲಿರುವ ಜಿಲ್ಲಾ ವ್ಯಾಪ್ತಿಯ ಅರ್ಜಿಗಳ ವಿಚಾರಣೆಯನ್ನು ನಡೆಸಲಿದ್ದಾರೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಹಾಗೂ ಲೋಕಾಯುಕ್ತ ಪೊಲೀಸ್ ಅಧೀಕ್ಷಕ  ಡಾ.ಸಿ.ಬಿ. ವೇದಮೂರ್ತಿ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.