ಪಡಿತರ ಚೀಟಿ ಫಜೀತಿ: ರೈತರಿಂದ ಆಕ್ರೋಶ
ಬೇಲೂರು: ಪಡಿತರ ಚೀಟಿಗೆ ಭಾವಚಿತ್ರ ತೆಗೆಯಲು ಗ್ರಾಮ ಪಂಚಾಯಿತಿಗೆ ತೆರಳಿದರೆ, ಫೋಟೊ ತೆಗೆಯದೆ ವಾಪಾಸು ಕಳಿಸುತ್ತಿದ್ದು, ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಗ್ರಾಪಂ ಮುಂದೆ ಗ್ರಾಮಸ್ಥರು ಕೆಲಕಾಲ ಪ್ರತಿಭಟನೆ ನಡೆಸಿದರು ಬಂಟೇನಹಳ್ಳಿ, ರಾಯಾಪುರ ಹಾಗೂ ಮುದಿಗೆರೆ ಗ್ರಾಮಸ್ಥರು ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ಮುಂದೆ ಜಮಾಯಿಸಿ ಅಧಿಕಾರಿಗಳ ವಿರುಧ್ಧ ಕಿಡಿಕಾರಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಡಿತರ ಚೀಟಿಗಾಗಿ ಭಾವಚಿತ್ರ ತೆಗೆಸಲು ಗ್ರಾಮ ಪಂಚಾಯಿತಿಯಲ್ಲಿ ದಿನಾಂಕ ನಿಗದಿ ಪಡಿಸಲಾಗಿದೆ. ಅದರಂತೆ ಕೆಲಸ ಕಾರ್ಯ ಬಿಟ್ಟು ಫೋಟೊ ತೆಗೆಸಲು ಬಂದರೆ ಇಲ್ಲಿ ತೆಗೆಯುತ್ತಿಲ್ಲ. ಈ ಬಗ್ಗೆ ಗ್ರಾಪಂ ಪಿಡಿಒ ಚಂದ್ರಶೇಖರ್ ಅವರನ್ನು ಕೇಳಿದರೆ ಅವರು 3 ದಿನದಿಂದ ಕರೆಂಟ್ ಇಲ್ಲ ಟ್ರಾನ್ಸ್ಫಾರ್ಮರ್ ಸುಟ್ಟು ಹೋಗಿದೆ, ಕಂಪ್ಯೂಟರ್ ಸರಿ ಇಲ್ಲ ಎಂದು ಹೇಳುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಭವಿಷ್ಯ ನಿಧಿ ಅದಾಲತ್10ಕ್ಕೆ
ಹಾಸನ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಶ್ರಮ ಮಂತ್ರಾಲಯ, ಕೇಂದ್ರ ಸರ್ಕಾರವು ತನ್ನ ಉಪ ಕ್ಷೇತ್ರೀಯ ಕಚೇರಿಯನ್ನು ಯಶೋರಾಮ್ ಚೇಂಬರ್ಸ್, ರತ್ನಗಿರಿ ರಸ್ತೆ, ಚಿಕ್ಕಮಗಳೂರಿನಲ್ಲಿ ಹೊಂದಿದೆ. ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರು ಜೂನ್ 10 ರಂದು ಭವಿಷ್ಯನಿಧಿ ಅದಾಲತನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.
ಭವಿಷ್ಯನಿಧಿ ಉದ್ಯೋಗದಾತರು ಮತ್ತು ಸದಸ್ಯರು ತಮ್ಮ ದೂರುಗಳೇನಾದರೂ ಇದ್ದಲ್ಲಿ ತಮ್ಮ ಅರ್ಜಿಯನ್ನು ಖುದ್ದಾಗಿ 10ನೇ ಜೂನ್ 2014 ರ ಬೆಳಿಗ್ಗೆ 11.00 ಗಂಟೆಗೆ ಅಥವಾ 9ನೇ ಜೂನ್ 2014 ರೊಳಗೆ ಅಂಚೆ ಮೂಲಕ ನೋಂದಾಯಿಸಲು ಕೋರಿದ್ದಾರೆ. ಎಲ್ಲ ದೂರುಗಳನ್ನು ಅದೇ ದಿನ ಇತ್ಯರ್ಥಪಡಿಸಲು ಶ್ರಮ ವಹಿಸಲಾಗುತ್ತದೆ. ಸದಸ್ಯರು ಹಾಗೂ ಉದ್ಯೋಗದಾತರು ಢಿಢಿಢಿ.ಜಠಜ್ಝ್ಜಿಟಡ.್ಜ್ಟಢ.್ಝಟಿ ಇಲ್ಲಿ ತಮ್ಮ ದೂರುಗಳನ್ನು ನೋಂದಾಯಿಸಬಹುದು. ನೋಂದಾಯಿಸಿದ ದೂರುಗಳನ್ನು 30 ದಿನಗಳೊಳಗೆ ಇತ್ಯರ್ಥ ಮಾಡಿಕೊಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಮಾಹಿತಿಗೆ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸುವಂತೆ ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತೆ ಪ್ರಭಾವತಿ ಬಿ. ಜೋಶಿ ತಿಳಿಸಿದ್ದಾರೆ. ದೂ: 08262-234106.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

