ಹಾಸನ

ವಿಹೆಚ್‌ಪಿ - ಬಜರಂಗದಳ ಕಾರ್ಯಕರ್ತರ ಬೈಠಕ್

Published On :

ಸಕಲೇಶಪುರ: ತಾಲೂಕು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರ ಬೈಠಕ್‌ಅನ್ನು ಪಟ್ಟಣದ ಹೊಳೆಮಲ್ಲೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬಜರಂಗದಳದ ಪ್ರಾಂತ ಮುಖಂಡ ರಘು ಮಾತನಾಡಿ, ವಿಶ್ವ ಹಿಂದೂ ಪರಿಷತ್ ಧಾರ್ಮಿಕ ವಿಚಾರಗಳನ್ನು ಕೈಗೆತ್ತಿಕೊಂಡು ಹಿಂದು ಸಮಾಜವನ್ನು ಒಟ್ಟುಗೂಡಿಸಿ ಹಿಂದುತ್ವವನ್ನು ಉಳಿಸಲು ಹೋರಾಡುತ್ತಿದೆ ಹಾಗೂ  ಬಜರಂಗದಳ ಈ ದೇಶದಲ್ಲಿ ನಡೆಯುತ್ತಿರುವ ಮತಾಂತರ, ಭಯೋತ್ಪಾದನೆ ಲವ್-ಜಿಹಾದ್‌ನಂತಹ ಕುಕೃತ್ಯಗಳನ್ನು ತಡೆಯುವಲ್ಲಿ ನಿರತವಾಗಿದೆ ಎಂದು  ಹೇಳಿದರು. ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ ಈ ಕೃಷ್ಣಾಷ್ಟಮಿಗೆ 50ವರ್ಷ ಆಗುವುದರಿಂದ ಈ ವರ್ಷ ಪ್ರತಿ  ತಾಲೂಕಿನಲ್ಲೂ ರಜತ ಮಹೋತ್ಸವ ಆಚರಿಸಬೇಕಾಗಿದ್ದು ಈ ನಿಟ್ಟಿನಲ್ಲಿ ಆಗಸ್ಟ್ 14 ರಂದು ಅಖಂಡ ಭಾರತ ಸಂಕಲ್ಪ ದಿನ ಹಾಗೂ ಆಗಸ್ಟ್ 17ರಂದು ಮಕ್ಕಳಿಗೆ ಕೃಷ್ಣ ಹಾಗೂ ರಾಧ ವೇಷ ಸ್ಫರ್ಧೆ ಏರ್ಪಡಿಸಲಾಗಿದೆ ಎಂದು ವಿವರಿಸಿದರು.


 ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ: ಗೌಪ್ಯ ಸ್ಥಳಕ್ಕೆ 17 ಸದಸ್ಯರು


ಸಕಲೇಶಪುರ:  ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ತರುವ ನಿಟ್ಟಿನಲ್ಲಿ ಪುರಸಭೆಯ 17 ಸದಸ್ಯರು ಶುಕ್ರವಾರ ಗೌಪ್ಯಸ್ಥಳಕ್ಕೆ ತೆರಳಿದ್ದಾರೆ.
ಪುರಸಭೆ ಅಧ್ಯಕ್ಷ ಆಕಾಂಕ್ಷಿಯಾಗಿರುವ ಸಂತೋಷ್ ನೇತೃತ್ವದಲ್ಲಿ ಜೆಡಿಎಸ್‌ನ 12 ಹಾಗೂ ಕಾಂಗ್ರೆಸ್‌ನ ಸಯ್ಯದ್ ಮಫೀಜ್ ಹೊರತುಪಡಿಸಿ ಉಳಿದ 5 ಸದಸ್ಯರು ಪಟ್ಟಣ ತೊರೆದಿದ್ದು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
23 ಸದಸ್ಯ ಬಲದ ಪುರಸಭೆಯಲ್ಲಿ 13 ಸದಸ್ಯ ಬಲದ ಜೆಡಿಎಸ್ ಅಧಿಕಾರಿ ಹಿಡಿದಿತ್ತು. ಪಕ್ಷದ ಆಂತರಿಕ ಒಡಂಬಡಿಕೆಯಂತೆ ತಲಾ 6 ತಿಂಗಳಿಗೆ ಅಧ್ಯಕ್ಷ ಬದಲಾವಣೆ ಆಗಬೇಕಿತ್ತು. ಆದರೆ ಮೊದಲು ಅಧ್ಯಕ್ಷರಾಗಿರುವ ಎಸ್.ಎನ್, ಸತೀಶ್ ನಾನಾ ಕಾರಣಗಳಿಂದ ಅಧ್ಯಕ್ಷ ಸ್ಥಾನ ಬಿಡಲೊಪ್ಪದ ಕಾರಣದಿಂದ ಜೆಡಿಎಸ್ ಪಾಳಯದಲ್ಲಿ ಅತೃಪ್ತಿ ಮನೆಮಾಡಿತ್ತು. ಇದರಿಂದಾಗಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ತರುವ ನಿಟ್ಟಿನಲ್ಲಿ 17 ಸದಸ್ಯರ ಬೆಂಬಲ ಗಳಿಸುವುದು ಅವಶ್ಯವಿದ್ದು. ಅದರಂತೆ ಕಾಂಗ್ರೆಸ್‌ನ ಐವರೊಂದಿಗೆ 12 ಜೆಡಿಎಸ್ ಸದಸ್ಯರು ಗೌಪ್ಯಸ್ಥಳ ಸೇರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.