ಹಾಸನ

ಪ್ರಕೃತಿ ವಿಕೋಪಕ್ಕೆ ಮನುಷ್ಯನ ದುರಾಸೆಯೇ ಕಾರಣ

Published On :

ಹಾಸನ: ಪ್ರಕೃತಿ ವಿಕೋಪಕ್ಕೆ ಮನುಷ್ಯನ ದುರಾಸೆಯೇ ಕಾರಣ. ದಿನೇ ದಿನೇ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿ ನಾಶಕ್ಕಾಗಿ ಪಣತೊಟ್ಟು ನಿಂತಿರುವುದು ದುರಂತದ ಸಂಗತಿ ಎಂದು ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಹೇಳಿದರು.
ಆಲೂರು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ  ತಾಲೂಕು ಸುವರ್ಣ ಲೇಡಿಸ್ ಕ್ಲಬ್ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿ, ಹಸಿರು ನಮ್ಮ ಉಸಿರು, ಉಸಿರು ಉಳಿಯಬೇಕಾದರೆ ಹಸಿರು ಉಳಿಯಲೇಬೇಕು. ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬೇಕಾದರೆ ಅದು ನಾವು ಈಗಲೇ ಪ್ರಾಕೃತಿಕ ಜಾಗೃತಿ ವಹಿಸಬೇಕು ಎಂದರು. ಜಿಲ್ಲಾ ಸುವರ್ಣ ಲೇಡಿಸ್ ಕ್ಲಬ್ ಕಾರ್ಯದರ್ಶಿ ಅರ್ಚನಾ ಮೋಹನ್ ಮಾತನಾಡಿ, ಸುವರ್ಣ ಲೇಡಿಸ್ ಕ್ಲಬ್ ಕೇವಲ ಮನೋರಂಜನೆಗಾಗಿ ಸ್ಥಾಪನೆಯಾಗಿಲ್ಲ. ಸಾರ್ವಜನಿಕ ಕಳಕಳಿಯ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನ ಜಾಗೃತಿ ಮೂಡಿಸಲು ಸ್ಥಾಪಿತವಾದ ಸಂಸ್ಥೆ ಎಂದರು. ಕಸಾಪ ಕಾರ್ಯದರ್ಶಿ ಎ.ಟಿ. ಮಲ್ಲೇಶ್, ಕಸಾಪ  ಅಧ್ಯಕ್ಷ  ಗುಲಾಂ ಸತ್ತಾರ್, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸುವರ್ಣ ಲೇಡಿಸ್ ಕ್ಲಬ್ ಸಂಯೋಜಕಿ ವೇದಶ್ರೀರಾಜ್ ಮಾತನಾಡಿದರು. ಪರಿಸರ ಜಾಗೃತಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾವನಾ ಪ್ರಥಮ, ಮೇಘನ ದ್ವೀತಿಯ ಹಾಗೂ ಜಾಹಿದ್ ತೃತೀಯ ಸ್ಥಾನ ಗಳಿಸಿದರೆ, ಹಾಗೆಯೇ ಪರಿಸರ ಕುರಿತ ಭಾಷಣ ಸ್ಪರ್ಧೆಯಲ್ಲಿ ಶೀಲಾ  ಪ್ರಥಮ ಹಾಗೂ ಆಶಾ ದ್ವಿತೀಯ ಸ್ಥಾನ ಗಳಿಸಿ ಬಹುಮಾನ ಪಡೆದರು. ರತ್ನಮಾಲಾ, ಕು.ಚೈತ್ರ, ಎಚ್.ವಿ. ರಾಘವೇಂದ್ರ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.