ಹೆಚ್ಚುವರಿ ನೀರು ಕೆರೆಗಳಿಗೆ ಹರಿಸಿ
ಕ.ಪ್ರ.ವಾರ್ತೆ ಬೇಲೂರು ಜೂ.9
ಯಗಚಿ ಜಲಾಶಯದಿಂದ ಹೊರಬಿಡುವ ಹೆಚ್ಚುವರಿ ನೀರನ್ನು ಹುಂಡಿಗನಹಾಳು ಹಾಗೂ ಸುತ್ತಮುತ್ತಲಿನ ಕೆರೆಗಳಿಗೆ ಹರಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ರೈತರು, ಗ್ರಾಮಸ್ಥರು, ಸೋಮವಾರ ಯಗಚಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಹಳೆಬೀಡು ರಸ್ತೆಯಲ್ಲಿರುವ ಯಗಚಿ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಮುಂಭಾಗ ಜಮಾಯಿಸಿದ ಹುಂಡಿಗನಹಾಳು ಹಾಗೂ ಸುತ್ತ ಮುತ್ತಲಿನ ಭಾಗದ ರೈತರು ಗ್ರಾಮಸ್ಥರು, ಕುಡಿಯುವ ನೀರಿಗೆ ಹಾಹಾಕಾರವಿದೆ. ಜನ ಜಾನುವಾರುಗಳು ಪರದಾಡುವಂತಾಗಿದ್ದು, ಯಗಚಿ ಜಲಾಶಯದಿಂದ ಆ ಭಾಗದ ಕೆರೆಗಳಿಗೆ ನೀರು ಪೂರೈಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹುಂಡಿಗನಹಾಳು ಗ್ರಾಪಂ ಮಾಜಿ ಪ್ರಧಾನ ಮಲ್ಲೇಶ್ ಮಾತನಾಡಿ, ತಮ್ಮ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಪೂರ್ಣ ಕುಸಿದಿದ್ದು 700 ಅಡಿ ಭೂಮಿ ಕೊರೆದರೂ ನೀರು ಬರುತ್ತಿಲ್ಲ. ಗ್ರಾಮದಲ್ಲಿರುವ ಕೆರೆ ಕಟ್ಟೆಗಳು ಬತ್ತಿಹೋಗಿದ್ದು ಜಾನುವಾರುಗಳು ನೀರಿಲ್ಲದೆ ಸಾಯುವಂತಾಗಿವೆ. ಯಗಚಿ ಜಲಾಶಯದಿಂದ ಮಳೆಗಾಲದಲ್ಲಿ ಪ್ರತಿ ವರ್ಷ ಸರಾಸರಿ 12 ಟಿಎಂಸಿ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ಹೆಚ್ಚುವರಿಯಾಗಿ ಹೊರಬಿಡುತ್ತಿರುವ 12 ಟಿಎಂಸಿ ನೀರಿನಲ್ಲಿ ಕೇವಲ 2 ಟಿಎಂಸಿ ನೀರನ್ನು ಹುಂಡಿಗನಹಾಳು, ನಾಯಕನ ಕೆರೆ, ದೇವಿಕೆರೆಗೆ ಹರಿಸಿದರೆ 64 ಗಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಆಗುತ್ತದೆ. ಈ ಬಗ್ಗೆ ಶಾಸಕರಲ್ಲಿ ಮನವಿ ಮಾಡಿದ್ದು, ಇಂದು ಪ್ರತಿಭಟನೆ ಮುಖಾಂತರ ಯಗಚಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ಹೇಳಿದರು. ಪಾಣಿ ರಾಜಣ್ಣ, ಕುಮಾರಸ್ವಾಮಿ, ಪರಮೇಶ, ಶಾಂತಕುಮಾರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

