ಹಾಸನ

ಮಗುವಿಗೆ ವಿಷ ಕುಡಿಸಿ ತಾಯಿ ಆತ್ಮಹತ್ಯೆ

Published On :

ಹಾಸನ: ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆಯೊಬ್ಬಳು ತನ್ನ 2 ವರ್ಷದ ಮಗುವಿಗೆ ವಿಷವುಣಿಸಿ, ತಾನು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿ ನಡೆದಿದೆ.
ತಾಲೂಕಿನ ಹೇರಳೆ ಗ್ರಾಮದ ರೇಣುಕಾ (23) ಸಾವಿಗೀಡಾದ ಮಹಿಳೆ. ಆಕೆಯ 2 ವರ್ಷದ ಮಗು ಗಗನ ಇಲ್ಲಿನ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಕಳೆದ 4 ವರ್ಷದ ಹಿಂದೆ ಕುಪ್ಪಳಿಯ ವೆಂಕಟೇಶ್ ಈಗಾಗಲೇ ಮದುವೆಯಾಗಿದ್ದರೂ  ಎಲ್ಲವನ್ನು ಮರೆಮಾಚಿ ರೇಣುಕಾಳನ್ನು ಎರಡನೆ ಮದುವೆಯಾಗಿದ್ದ.
ಮೃತರಾದ ರೇಣುಕಾ ಒಂದು ಒಂದುವರೆ ವರ್ಷದ ಹಿಂದೆ ವೆಂಕಟೇಶ್‌ನೊಂದಿಗೆ ಪರಿಚಯವಾಗಿತ್ತು. ಆತ ಆಕೆಯನ್ನ ಕುಪ್ಪಳಿಯಿಂದ ಕರೆತಂದು ಹಾಸನದ ಗಾರ್ಮೆಂಟ್‌ಗೆ ಕೆಲಸಕ್ಕೆ ಸೇರಿಸಿ ಮನೆ ಮಾಡಿಕೊಂಡು ಹಾಸನದಲ್ಲಿ ಇರಿಸಿಕೊಂಡಿದ್ದ. ನಂತರದ ದಿನಗಳಲ್ಲಿ ಗಂಡ- ಹೆಂಡಿರ ನಡುವೆ ಕಲಹ ಉಂಟಾಗುತ್ತಿತ್ತು.
ಇದರಿಂದ ಬೇಸತ್ತು ತನ್ನ ಮಗುವಿಗೆ ವಿಷವುಣಿಸಿ, ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.
ಥಳಿತ: ಆತ್ಮಹತ್ಯೆ ಮಾಡಿಕೊಂಡಿದ್ದ ರೇಣುಕಾ ಮತ್ತು ಗಗನರನ್ನು ವೆಂಕಟೇಶನೇ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಿದ್ದ. ಆದರೇ ಹೆಚ್ಚಿನ ಚಿಕಿತ್ಸೆಗೆ ಸ್ಪಂದಿಸದ ರೇಣುಕಾ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು.
 ಸಿಟ್ಟಿಗೆದ್ದ ರೇಣುಕಾ ಪೋಷಕರು ವೆಂಕಟೇಶನನ್ನು ಆಸ್ಪತ್ರೆಯ ಆವರಣದಲ್ಲಿಯೇ ಹಿಗ್ಗಾಮುಗ್ಗ ಥಳಿಸಿದರು.
ಪ್ರಕರಣ ಹಾಸನದ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.