3ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ
ಹಾರನಹಳ್ಳಿ: ಹಾರನಹಳ್ಳಿಗೆ ಯಗಚಿ ನದಿ ಮೂಲಕ ನೀರು ಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು, ಈ ಭಾಗದ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು, ರೈತ ಸಂಘದ ಮುಖಂಡರು ಕೈಗೊಂಡ ಪ್ರತಿಭಟನೆ ಬುಧವಾರ ಮೂರನೇ ದಿನಕ್ಕೆ ಕಾಲಿಟಿದ್ದು, ಪ್ರತಿಭಟನಕಾರರು ರಾಜ್ಯ ಹೆದ್ದಾರಿ ತಡೆ ನಡೆಸಿ ನೀರಾವರಿ ಇಲಾಖಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಹಿರಿಯ ರೈತ ಎಚ್.ಎನ್. ರಾಮಯ್ಯ ಮಾತನಾಡಿ, ಮೈಸೂರಿನ ದಿವಾನರಾಗಿದ ಸರ್.ಎಂ. ವಿಶ್ವೇಶ್ವರಯ್ಯನವರು ಅರಸೀಕೆರೆ ತಾಲೂಕಿನ ಕೆರೆಗಳಿಗೆ ನೀರು ಕೊಡುವ ಬಗ್ಗೆ ಯೋಜನೆ ರೂಪಿಸಿದ್ದರು. ಆದರೆ ರಾಜಕೀಯ ಲಾಭಕ್ಕಾಗಿ ಯಗಚಿ ಯೋಜನೆಯನ್ನು ಬದಲಿಸಿದ್ದರಿಂದ ನಾವು ನೀರಿಗಾಗಿ ವಿಪರ್ಯಾಸ ಪಡಬೇಕಾಗಿದೆ. ಈ ಹಿಂದೆ ಮಿಲಿಟರಿ ಸಿದ್ದಪ್ಪನವರು, ಎಚ್. ರಾಮಯ್ಯ ಹಾರನಹಳ್ಳಿ ಭಾಗದ ರೈತರು ಅನೇಕ ಹೋರಾಟ ನಡೆಸಿ ದಿವಾನರಿಂದ ಹಿಡಿದು ಸರ್ಕಾರಕ್ಕೆ ಮನವಿ ನೀಡುತ್ತಾ ಬಂದಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಅಧಿಕಾರಿಗಳು ಗಮನ ಹರಿಸಿದರೆ ನಮಗೆ ಇಂತಹ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಓಂಕಾರಮೂರ್ತಿ ಮಾತನಾಡಿ, ಇಂದು ರೈತ ಸಮುದಾಯ ಕಷ್ಟದಲ್ಲದೆ ರೈತರಿಗೆ ನೀರು, ವಿದ್ಯುತ್ ಕೊಟ್ಟರೆ ಅಗತ್ಯವಾದ ಬೆಳೆಯನ್ನು ಬೆಳೆಯುವ ಸಾಮರ್ಥ್ಯ ರೈತರಲ್ಲಿದೆ. ಸರ್ಕಾರಗಳು ರೈತರಿಗೆ ಆಶ್ವಾಸನೆ ನೀಡುವುದನ್ನು ಬಿಟ್ಟು ನಮ್ಮ ಭಾಗಕ್ಕೆ ನೀರು ಕೋಡುವ ತನಕ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿದರು. ರೈತ ಮಖಂಡ ಸೋಮಶೇಖರ್ ಮಾತನಾಡಿ, ಈ ಭಾಗದಿಂದ ಆಯ್ಕೆಯಾದ ಜನಪ್ರತಿನಿಧಿಗಳು 3 ದಿನದಿಂದ ಧರಣಿ ಮಾಡುತ್ತಿದ್ದರೂ ನಮ್ಮ ಸಮಸ್ಯೆ ಕೇಳದೆ ಹೋದರೆ ಇಂತಹ ಜನಪ್ರತಿನಿಧಿಗಳು ಯಾಕೆ ಬೇಕು. ಬರೀ ಚುನಾವಣೆ ಸಂದರ್ಭದಲ್ಲಿ ಮತ ಕೇಳುವುದಕ್ಕೆ ಬಂದು ಗೆದ್ದು ಹೋದರೆ ಸಾಲದು ನಮ್ಮ ಸಮಸ್ಯಗೆ ಸ್ಪಂದಿಸುವಂತಹ ಜನ ನಾಯಕರು ಬೇಕು ಎಂದರು.
ನೀರಿನ ಹೋರಾಟಕ್ಕೆ ಪ್ರಾಣ ಕೊಡಲು ಸಿದ್ದವಿದ್ದು, 3 ದಿನ ದಿಂದ ಹೋರಾಟ ನಡೆಯುತ್ತಿದ್ದರು ನೀರಾವರಿ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿಕುಳಿತ್ತಿದ್ದಾರೆ. ನಮ್ಮ ಭಾಗದಲ್ಲಿ ಜಲಕ್ಷಾಮವಾಗಿದ್ದು, ರೈತರ ಅಕ್ರೋಶ ಕಟ್ಟೆಯೊಡೆಯುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಂಡು ನೀರಾವರಿ ಸೌಲಭ್ಯ ಕಲ್ಪಿಸಲು ಮುಂದಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ರೈತ ಸಂಘ ಮುಖಂಡ ಪ್ರಸನಕುಮಾರ್ ಎಚ್ಚರಿಸಿದ್ದರು. ಪ್ರತಿಭಟನೆಯಲ್ಲಿ ಹಾರನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ನಂದೀಶ್, ಗ್ರಾಪಂ ಅಧ್ಯಕ್ಷ ಕರೀಂಸಾಬ್, ಗುರುಲಿಂಗಪ್ಪ, ಸುತ್ತಮುತ್ತಲ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

