ಹಾಸನ

ಮೊಬೈಲ್ ಮೂಲಕ ಗುರುತು ಚೀಟಿ ಸಂಖ್ಯೆ ತಿಳಿಸಲು ಮನವಿ

Published On :

ಅರಸೀಕೆರೆ: ರಾಜ್ಯ ಸರ್ಕಾರದ ಆದೇಶದನ್ವಯ ತಾಲೂಕಿನ ಎಲ್ಲಾ ಅಂತ್ಯೋದಯ ಮತ್ತು ಬಿ.ಪಿ.ಎಲ್. ಪಡಿತರದಾರರು ತಮ್ಮ ಕುಟುಂಬದ ಮೊಬೈಲ್‌ನಿಂದ ಕುಟುಂಬದ ಮುಖ್ಯಸ್ಥರು ಹಾಗೂ ಕಾರ್ಡಿನಲ್ಲಿರುವ ಇತರೆ ವಯಸ್ಕ ಸದಸ್ಯರ ಚುನಾವಣಾ ಗುರುತಿನ ಚೀಟಿ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಗಳನ್ನು 92123 57123 ಸಂಖ್ಯೆಗೆ ಎಸ್.ಎಂ.ಎಸ್. ಮಾಡಲು ತಾಲೂಕು ತಹಸೀಲ್ದಾರ್ ನಟರಾಜ್ ಮನವಿ ಮಾಡಿದ್ದಾರೆ.
ಪಡಿತರದಾರರು ಎಸ್.ಎಂ.ಎಸ್. ಮಾಡುವ ವಿಧಾನ ಉದಾಹರಣೆ-  -  RCMOB - ARS14154919  ಅಥವಾ   ARSR00104187 ಅಥವಾ  ARSU00100504  ಎಂದು ಟೈಪ್ ಮಾಡಿ 92123 57123 ಸಂಖ್ಯೆಗೆ ಎಸ್.ಎಂ.ಎಸ್. ಮಾಡಬೇಕಾಗಿದೆ. ನಂತರ  ಉದಾಹರಣೆಗೆ RCEPIC - YYP3280435  ಕುಟುಂಬದ ಯಜಮಾನ ಮತ್ತು ಎಲ್ಲಾ ವಯಸ್ಕ ಸದಸ್ಯರ ಮತದಾರರ EPIಈಸಂಖ್ಯೆಯನ್ನು 92123 57123 ಸಂಖ್ಯೆಗೆ SMS ಮೂಲಕ ಕಳುಹಿಸಬೇಕು. ತದನಂತರ RCUID - 1234 56789123  ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡುಗಳ ಸಂಖ್ಯೆಯನ್ನು 92123 57123 ಸಂಖ್ಯೆಗೆ SMS ಮೂಲಕ ಕಳುಹಿಸಬೇಕೆಂದು ತಿಳಿಸಿದ್ದಾರೆ.  
ಯಾವುದೇ ಕುಟುಂಬದಲ್ಲಿ ಮೊಬೈಲ್ ಇಲ್ಲದಿದ್ದರೇ ಗ್ರಾ.ಪಂ. ಕಚೇರಿ, ಅಟಲ್‌ಜೀ ಜನಸ್ನೇಹಿ ಕೇಂದ್ರಗಳಿಗೆ ಭೇಟಿ ನೀಡಿ ಸಂಖ್ಯೆಗಳನ್ನು ನೊಂದಾಯಿಸಲು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಬೇಕಾದರೇ ತಮ್ಮ ನ್ಯಾಯಬೆಲೆ ಅಂಗಡಿ ಅಥವಾ ತಾಲೂಕು ಆಹಾರ ಇಲಾಖೆ ಶಿರಸ್ತೇದಾರರು ಮತ್ತು ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.