ಸರಿಯಾಗಿ ವೇತನ ನೀಡಿ
ಕ.ಪ್ರಭ ವಾರ್ತೆ ಹಾಸನ ಜೂ. 11
ಸಮರ್ಪಕ ವೇನತ ನೀಡುವಂತೆ ಆಗ್ರಹಿಸಿ ಗೋ ಗೋ ಇಂಟರ್ನ್ಯಾಷನಲ್ ಕಂಪನಿಯ ಕಾರ್ಮಿಕರು ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.
ನಗರದ ಕೈಗಾರಿಕಾ ಪ್ರದೇಶದಲ್ಲಿ ಇರುವ ಗೋ ಗೋ ಕಾರ್ಖಾನೆ ಮುಂದೆ ಕೆಲಸ ಬಹಿಷ್ಕರಿಸಿ ಮುಷ್ಕರ ನಡೆಸಿದ ಪ್ರತಿಭಟನಕಾರರು ದುಡಿಯುವ ಕೆಲಸಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ. ವೇತನ ಹೆಚ್ಚಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಗೋ ಗೋ ಇಂಟರ್ನ್ಯಾಷನಲ್ ಕಂಪನಿಯ ನೂರಾರು ಕಾರ್ಮಿಕರು ತಮ್ಮ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ ಅವರು, ಸರ್ಕಾರದ ಆದೇಶದಂತೆ ಪ್ರತಿ ಕಾರ್ಮಿಕನಿಗೂ 1500 ರು. ಹೆಚ್ಚಳ ವೇತನ ನೀಡಬೇಕು. ಒಂದೇ ಕಂಪನಿಯಲ್ಲಿ ಎರಡು ಗುಂಪುಗಳನ್ನಾಗಿ ಮಾಡಿ ಒಂದು ಗುಂಪಿಗೆ ಮಾತ್ರ ಹೆಚ್ಚಿಗೆ ವೇತನ ನೀಡಲಾಗುತ್ತಿದೆ. ಕಾರ್ಖಾನೆಯಲ್ಲಿ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಗುಂಪಿನ ಕಾರ್ಮಿಕರಿಗೆ ಮಾಸಿಗ 6300, 6500. ಹಾಗೂ 6800. ನಂತೆ ಪ್ರತಿ ಕಾರ್ಮಿಕನಿಗೂ ನೀಡಲಾಗುತ್ತಿದೆ. ಆದರೆ ಇನ್ನೊಂದು ಗುಂಪಿನ ಕಾರ್ಮಿಕರನ್ನು ಕಡೆಗಣಿಸಿ ಕಾರ್ಖಾನೆಯ ಆಡಳಿತ ಮಂಡಳಿ ಸರ್ಕಾರದ ಆದೇಶದಂತೆ ಹೆಚ್ಚಳವಾಗಿರುವ 1500 ಗಳನ್ನು ನೀಡದೆ ಕೇವಲ 4700 ವೇತನ ನೀಡುವ ಮೂಲಕ ಒಂದು ಕಣ್ಣಿಗೆ ಕಾರ್ಮಿಕರಿಗೆ ವಂಚಿಸಲಾಗುತ್ತಿದೆ ಎಂದು ಅಲವತ್ತುಕೊಂಡರು.
ಮೊದಲೆ ಕಡಿಮೆ ನೀಡುವ ವೇತನವನ್ನು ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಕಾರ್ಮಿಕರಿಗೆ ನೀಡದೆ ಮನಸ್ಸಿಗೆ ಬಂದಂತೆ ಕೊಡಲಾಗುತ್ತಿದೆ. ಕಾರ್ಮಿಕರಿಗೆ ಅವಶ್ಯಕತೆ ಇದ್ದಾಗ ಯಾವುದಾದರೂ ರಜೆಯನ್ನು ಹಾಕಿದರೆ ವೇತನ ಹಾಗೂ ಇತರೆ ಸೌಲಭ್ಯದ ಹಣವನ್ನು ಕಡಿತಗೊಳಿಸುತ್ತಾರೆ. ಒಟ್ಟಿನಲ್ಲಿ ಕಾರ್ಖಾನೆಯಲ್ಲಿ ಕಾರ್ಮಿಕರ ಕೆಲಸಕ್ಕೆ ತಕ್ಕದಾದ ವೇತನ ನೀಡುತ್ತಿಲ್ಲ ಎಂದು ದೂರಿದರು.
ಕಾರ್ಖಾನೆಯ ಅವ್ಯವಸ್ಥೆ ಹಾಗೂ ಸಮಸ್ಯೆಗಳ ವಿರುದ್ಧ ಕಾರ್ಮಿಕರು ಪ್ರತಿಭಟನೆ ಮಾಡಲು ಮುಂದಾದರೆ ಅವರ ಮೇಲೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡುತ್ತಾರೆ. ಹಲವು ಬಾರಿ ಕಾರ್ಮಿಕರ ಕೆಲಸಕ್ಕೆ ತಕ್ಕ ವೇತನ ನೀಡುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಕಾರ್ಮಿಕರಾದ ಲಕ್ಷ್ಮಮ್ಮ, ಚಂದ್ರಶೇಖರ್, ಕುಮಾರ್, ಮಂಜನಾಥ್, ಲೋಕೇಶ್, ಸುನೀಲ್, ಸಂತೋಷ್, ಮೋಹನ್, ಚಂದ್ರಶೇಖರ್, ರಾಜು, ಮನೋಜ್, ಶಿವಕುಮಾರ್, ರಂಜಿತಾ, ಸವಿತಾ, ಲಾವಣ್ಯ, ಕಮಲ, ಲಕ್ಷೀ ಹಾಗೂ ಇತರರು ಇದ್ದರು.
ಬೇಡಿಕೆಗಳೇನು?
- ಕಾರ್ಮಿಕರಿಗೆ ಸಮರ್ಪಕ ವೇತನ ನೀಡಬೇಕು.
-ಕಾರ್ಮಿಕರನ್ನು ಎರಡು ಗುಂಪಾಗಿ ಹೊಡೆದಿರುವುದನ್ನು ನಿಲ್ಲಿಸಬೇಕು.
- ಕಾರ್ಮಿಕರಿಗೆ ರಜೆಯ ಸೌಲಭ್ಯವನ್ನು ಸರಿಯಾಗಿ ನೀಡಬೇಕು ಹಾಗೂ ಯಾವುದೇ ಹಣವನ್ನು ಕಡಿತಗೊಳಿಸಬಾರದು.
- ಕಾರ್ಮಿಕರ ಯಾವುದೇ ಸಮಸ್ಯೆಗಳಾದರೂ ಕಾರ್ಖಾನೆಯ ಆಡಳಿತ ಮಂಡಳಿ ಕೂಡಲೇ ಸ್ಪಂದಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

