ಹಾಸನ

ಮೆಣಸಿನ ಕಾಯಿ ಬೆಲೆ ಕುಸಿತ: ರೈತರು ಕಂಗಾಲು

Published On :

ರಾಮನಾಥಪುರ: ಅರಕಲಗೂಡು ಕೃಷಿ ಮಾರುಕಟ್ಟೆಯಲ್ಲಿ ಗುರುವಾರ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತದಿಂದಾಗಿ ರೈತರು ತೀವ್ರ ಕಂಗಾಲಾಗಿದ್ದಾರೆ.  
 ಕಳೆದ ವಾರ 25ರಿಂದ 30 ಕೆ.ಜಿ. ಮೆಣಸಿನಕಾಯಿ ಚೀಲಕ್ಕೆ 200ರಿಂದ 210ರಷ್ಟು ಇತ್ತು. ಆದರೆ ಈ ವಾರದ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಪ್ರತಿ ಚೀಲ ಒಂದಕ್ಕೆ 100ರಿಂದ 150ರವರೆಗೆ ಮಾರಾಟವಾಗಿದೆ.
ದಲ್ಲಾಳಿಗೆ ಲಾಭ: ಈ ಕುರಿತು ಹಾಸನ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಹೆಚ್.ಇ. ಜಗದೀಶ್ ಮಾತನಾಡಿ, ರೈತರು ಮೆಣಸಿನಕಾಯಿ ಬೀಜ ಖರೀದಿಸಿ ಬಿತ್ತನೆ ಮಾಡಿ ಸಸಿ ಮಡಿಯಿಂದ ನಾಟಿ ಮಾಡಿ ಬೆಳೆ ಕುಯ್ಲಿಗೆ ಬರುವವರೆಗೂ ಇದಕ್ಕೆ ಬೇಕಾಗುವ ಉಳುಮೆ, ಗೊಬ್ಬರ, ಔಷಧಿ, ಕೂಲಿ ಎಲ್ಲಾ ಸೇರಿ ಸುಮಾರು 15ರಿಂದ 20 ಸಾವಿರ ಖರ್ಚು ತಗಲುತ್ತದೆ. ಕಡಿಮೆ ಬೆಲೆಯಲ್ಲಿ ರೈತರಿಂದ ಮೆಣಸಿನಕಾಯಿಯನ್ನು ದಲ್ಲಾಳಿಗಳು ಖರೀದಿಸುತ್ತಿದ್ದು, ಇದೇ ಮೆಣಸಿನಕಾಯಿಯನ್ನು ಗ್ರಾಹಕರಿಗೆ ಪ್ರತಿ ಕಿಲೋಗೆ 40 ಗೆ ಮಾರಾಟ ಮಾಡುತ್ತಿದ್ದಾರೆ.  
 ಕೂಡಲೆ ಸರ್ಕಾರ ಮುಂದಾಗಿ ಪ್ರತಿ ಚೀಲ ಮೆಣಸಿನಕಾಯಿಗೆ ಕನಿಷ್ಠ  400ರಿಂದ 450ರಷ್ಟು ಬೆಂಬಲ ಬೆಲೆ ನೀಡಿ ಖರೀದಿಸಬೇಕು. ಮೊದಲೇ ಈ ಬಾರಿಯ ಮುಂಗಾರು ಹಿನ್ನಡೆಯಾಗಿರುವ ಆತಂಕದಲ್ಲಿರುವ ರೈತರು, ಎಲ್ಲಿ ತಾವು ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯುವುದಿಲ್ಲ ಎಂಬ ಆತಂಕದಲ್ಲಿದ್ದಾರೆ ಎಂದು ತಿಳಿಸಿದರು.


ಜಮೀನಿನಲ್ಲಿ ಮೆಣಸಿನಕಾಯಿ ಕುಯ್ಲು ಮಾಡಲು ಬರುವ ಕೂಲಿ ಆಳುಗಳಿಗೆ ಪ್ರತಿದಿನ ಒಬ್ಬರಿಗೆ 150 ಕೂಲಿ ನೀಡಲಾಗುತ್ತಿದೆ. ಜೊತೆಗೆ ಬಾಡಿಗೆ ವಾಹನಗಳಲ್ಲಿ ಹೆಚ್ಚು ಹಣ ತೆತ್ತು ಕೃಷಿ ಮಾರುಕಟ್ಟೆಗೆ ತರುವ ಖರ್ಚು ಪ್ರತ್ಯೇಕ. ಇಷ್ಟಿದ್ದೂ ಈ ರೀತಿ ಬೆಲೆ ಕುಸಿದರೆ ರೈತರ ಬದುಕು ಸರ್ವನಾಶವಾದಂತೆ.  
ಹೆಚ್.ಎ. ಶ್ರೀನಿವಾಸಮೂರ್ತಿ, ಉಪಾಧ್ಯಕ್ಷರು, ಕೃಷಿ ಮಾರುಕಟ್ಟೆ ಹೊಳೆನರಸೀಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.