ಹಾಸನ

ಸ್ಥಳಕ್ಕೆ ಅನುಗುಣವಾಗಿ ವಿವಿಧ ತಳಿಗಳು

Published On :

ದೊಡ್ಡಬಳ್ಳಾಪುರ ತೂಬುಗೆರೆ ಹೋಬಳಿ ಕಾಚನಹಳ್ಳಿ ಹಲಸು, ಮಾಗಡಿ ತಾಲೂಕು ಜಾಣಗೆರೆ ಹಲಸು, ದೊಡ್ಡಬಳ್ಳಾಪುರ ತಾಲೂಕು ತಪಸೀಹಳ್ಳಿ ಸದಾನಂದ ಹಲಸು, ಮಲೆನಾಡಿನ ಅಂಟುರಹಿತ ಹಲಸು, ಸಕ್ಕರಾಯಪಟ್ಟಣ ಹಲಸು, ಬೆಂಗಳೂರು ಜಿ.ಕೆ.ವಿ.ಕೆಯಲ್ಲಿರುವ ಸಿಂಗಪೂರ್ ಹಲಸು, ಹಳ್ಳಿ ಮೈಸೂರು ಹಲಸು, ಬೆಂಗಳೂರು ಲಾಲ್‌ಬಾಗ್‌ನಲ್ಲಿರುವ ಲಾಲ್‌ಬಾಗ್ ಮದುರ ಹಲಸು ಮತ್ತು ಸ್ಥಳೀಯ ತಳಿಗಳಾದ ಚಂದ್ರಹಲಸು, ರುದ್ರಾಕ್ಷಿ ಹಲಸುಗಳನ್ನು ಕಾಣಬಹುದು. ಹಬ್ಬಗಳಲ್ಲಿ ಹಣ್ಣಾಗುವ ಕಾಲಗಳ ಆಧಾರಿತವಾಗಿ ರೈತರು, ಸಂಕ್ರಾತಿ ಹಲಸು, ಶಿವರಾತ್ರಿ ಹಲಸು, ಯುಗಾದಿ ಹಲಸು, ಏಕಾದಶಿ ಹಲಸು ಎಂದು ಕರೆಯುತ್ತಾರೆ. ಹಲಸನ್ನು ಸಾಮಾನ್ಯವಾಗಿ ಬೀಜದಿಂದ ಬೆಳೆಸಲಾಗುತ್ತದೆ, ಆದರೆ ಇವು ತಾಯಿಗಿಡದ ಲಕ್ಷಣಗಳನ್ನು ಸಂಪೂರ್ಣವಾಗಿ ಹೊಂದಿರುವುದಿಲ್ಲ ಆದ್ದರಿಂದ ಹಲಸಿನಲ್ಲಿ ಕಣ್ಣುಕಸಿ ಮತ್ತು ಮೃದು ಕಾಂಡ ಕಸಿ ಮಾಡಿದ ಗಿಡಗಳನ್ನು ಉಪಯೋಗಿಸುವುದು ಉತ್ತಮ ಎಂದು ಹೇಳಿದ್ದಾರೆ. ಕೆಂಪು ಮತ್ತು ಮರಳು ಮಿಶ್ರಿತ ಕಪ್ಪು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ ಬರಗಾಲ ತಡೆಯುವ ಗುಣವುಳ್ಳ ಹಲಸು ಅಧಿಕ ಮಳೆ ಬರುವ ಪ್ರದೇಶಗಳಲ್ಲಿ ಸಹ ಬೆಳೆಯುತ್ತದೆ ಆದರೆ ನಿರು ಬಸಿದು ಹೋಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.