ಹಾಸನ

ಕನ್ನಡ ಏಕೀಕರಣಕ್ಕೆ ದುಡಿದ ಬೆಟಗೇರಿ ಕೃಷ್ಣಶರ್ಮ

Published On :

ಹಾಸನ: ಡಾ.ಬೆಟ್ಟಗೇರಿ ಕೃಷ್ಣಶರ್ಮಾ ಸ್ಮಾರಕ ಟ್ರಸ್ಟ್, ಅನನ್ಯ ಟ್ರಸ್ಟ್ ಹಾಗೂ ಬಾಂಧವ್ಯ ಲೋಕ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಆನಂದಕಂದರ ಕಾವ್ಯ ಪರಿಚಯ ಕಾರ್ಯಕ್ರಮ ನಡೆಯಿತು.
 ನಗರದ ಎವಿಕೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಹಾಗೂ ಖ್ಯಾತ ಕಾದಂಬರಿಕಾರ ಪ್ರೊ.ರಾಘವೇಂದ್ರ ಪಾಟೀಲ್ ಮಾತನಾಡಿ, ಶರ್ಮಾರವರು ಹಳೇಗನ್ನಡವನ್ನು ಅಭ್ಯಸಿಸಿ ಪ್ರಾವಿಣ್ಯತೆಯನ್ನು ಪಡೆದಂತವರು. ಅವರು ಜಾನಪದ ಹಾಡುಗಳು, ಸಾಹಿತ್ಯಕವಾದ ಒಗಟುಗಳನ್ನು ಸಂಗ್ರಹಿಸಿ ಪ್ರಕಟಿಸಿದಂತಹ ಹಾಗೂ ಸಾಹಿತ್ಯಕವಾಗಿ ಸಮೃದ್ಧಿಯಾಗಿದ್ದಂತಹ ಮಹಾನ್ ವ್ಯಕ್ತಿಯಾಗಿದ್ದರು ಎಂದರು.
ಸಾಹಿತ್ಯಾಭಿಮಾನ ಬೆಳೆಸಿಕೊಳ್ಳಿ: ಎಚ್.ಬಿ.ಮದನ್ ಗೌಡ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ಹಾಗೂ ಸಾಹಿತ್ಯ ಶ್ರೀಮಂತವಾಗಿದ್ದು, ಈ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಹಲ್ಮಿಡಿ ಶಾಸನವನ್ನು ಈ ಕ್ಷೇತ್ರಕ್ಕೆ ನೀಡಿದಂತಹ ಕೀರ್ತಿ ಹಾಸನಕ್ಕೆ ಸಲ್ಲುತ್ತದೆ ಎಂದರು.
 ಕಾರ್ಯಕ್ರಮದಲ್ಲಿ ಅನನ್ಯ ಟ್ರಸ್ಟ್ ಅಧ್ಯಕ್ಷೆ ಕೆ.ಟಿ.ಜಯಶ್ರೀ, ಕಾಲೇಜಿನ ಪ್ರಾಂಶುಪಾಲ ಎಚ್.ವಿ. ಲಕ್ಷ್ಮಿನಾರಾಯಣ್, ಲೇಖಕಿ ಶೈಲಜ ಹಾಸನ್ ಹಾಗೂ ಇತರರು ಇದ್ದರು.
ಶಿಬಿರ ಕಾರ್ಯಕ್ರಮ: ಡಾ.ಬೆಟಗೇರಿ ಕೃಷ್ಣಶರ್ಮ ಅವರು ಕನ್ನಡ ಸಂಸ್ಕೃತಿಯನ್ನು ಜನ ಸಾಮಾನ್ಯರಿಗೆ ಪರಿಚಯಿಸುವ ಮೂಲಕ ಕನ್ನಡದ ಏಕೀಕರಣಕ್ಕಾಗಿ ದುಡಿದ ಮಹಾನ್ ವ್ಯಕ್ತಿ ಎಂದು ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಪ್ರೊ. ರಾಘವೇಂದ್ರ ಪಾಟೀಲ್ ಹೇಳಿದರು.
 ನಗರದ ವಾಣಿವಿಲಾಸ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಸ್ವರ ಸುರಭಿ ಟ್ರಸ್ಟ್, ಅನನ್ಯ ಟ್ರಸ್ಟ್ ವತಿಯಿಂದ ನಡೆದ ಮೃತ್ಯುಂಜಯ ದೊಡ್ಡ ವಾರ್ಡ್ ಸಂಗೀತ ನಿರ್ದೇಶನದಲ್ಲಿ ಬನ್ನಿ ನಮ್ಮ ಹಾಡಿಗೆ ಬಾರಕಾರ ಹುಣ್ಣಿವೆ ಆನಂದಕಂದ ವಿರಚಿತ ಭಾವಗೀತೆಗಳ 11ನೇ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಉ.ಕ.ಕ್ಕೆ ಸೀಮಿತ: ಡಾ.ಬೆಟಗೇರಿ ಕೃಷ್ಣಶರ್ಮ ಅವರ ಸಾಹಿತ್ಯ ಹಾಗೂ ಅವರ ವಿಚಾರಧಾರೆಗಳು ಕೇವಲ ಉತ್ತರ ಕರ್ನಾಟಕದ ಭಾಗಕ್ಕೆ ಮಾತ್ರ ಉಳಿದು, ದಕ್ಷಿಣ ಕನ್ನಡ ಭಾಗಕ್ಕೆ ತಲುಪದೆ ಇರುವುದರ ನೋವಿನ ಸಂಗತಿ ಎಂದರು.  ಸಾಹಿತಿ ಜಾನಕಿ ಸುಂದರೇಶ್ ಮಾತನಾಡಿದರು. ಸಾಹಿತಿಗಳಾದ ಪ್ರೊ.ಚಂದ್ರಶೇಖರ ವಸ್ತ್ರದ, ಸತೀಶ್  ಕುಲಕರ್ಣಿ, ಚಂದ್ರಕಾಂತ ಪಡೆಸೂರ್, ಸ್ತ್ರೀ ರೋಗ ತಜ್ಞೆ ಡಾ.ಭಾರತಿ ರಾಜಶೇಖರ್, ಬಿ.ಎನ್.ರಾಮಸ್ವಾಮಿ, ನಾಯಕರಹಳ್ಳಿ ಮಂಜೇಗೌಡ, ಕೆ.ಟಿ. ಜಯಶ್ರೀ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.