ಹಾಸನ

ಅಪ್ಪನ ಪ್ರೀತಿಗೆ ದೇಗುಲ ನಿರ್ಮಾಣ

Published On :

ಹಾನಗಲ್: ಹೆತ್ತವರನ್ನು ಬೀದಿಗೆ ತಳ್ಳುವ ಅಥವಾ ವೃದ್ಧಾಶ್ರಮಕ್ಕೆ ಬಿಡುವ ಈ ದಿನಗಳಲ್ಲಿ, ಅಪ್ಪನ ಮೇಲಿನ ಪ್ರೀತಿಗಾಗಿ ಗುಡಿ ನಿರ್ಮಿಸಿ, ಅಪ್ಪಂದಿರ ದಿನವಾದ ಭಾನುವಾರ(ಜೂ. 15) ಅಪ್ಪನ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ, ಈ ಮಕ್ಕಳು. ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ತಿಳವಳ್ಳಿ ಗ್ರಾಮದ ವಿಷ್ಣಪ್ಪ ರಾಮಚಂದ್ರ ರಾಯ್ಕರ(ಕುಂಚೂರ) ಅವರ ಪುತ್ರರಾದ ಸಂಜೀವ, ರಾಜೀವ ಹಾಗೂ ಡಾ೤ ರಾಘವೇಂದ್ರ ತಂದೆಯ ನೆನಪಿಗಾಗಿ ಮಂದಿರ ಕಟ್ಟಿ, ಮೂರ್ತಿ ಪ್ರತಿಷ್ಠಾಪಿಸಿ, ಕೃತಾರ್ಥರಾಗಿದ್ದಾರೆ.
ಆದರ್ಶ ತಂದೆ: ಬಡತನದ ಮಧ್ಯೆ ಮಕ್ಕಳನ್ನು ಚೆನ್ನಾಗಿ ಓದಿಸಿ, ಅವರಿಗೆ ಒಳ್ಳೆಯ ಬದುಕು ರೂಪಿಸಿಕೊಟ್ಟ ವಿಷ್ಣಪ್ಪ ಸಾಮಾಜಿಕ ಕಾರ್ಯಗಳಲ್ಲೂ ಸಕ್ರಿಯರಾಗಿದ್ದವರು. ಅವರ ನೆನಪಿಗಾಗಿ ಈಗ ಮಕ್ಕಳು ಹಾನಗಲ್ಲ-ದುಮ್ಮಿಹಾಳ ರಸ್ತೆಯ 10 ಎಕರೆ ಕೃಷಿ ಭೂಮಿಯಲ್ಲಿ ಪುಟ್ಟ ದೇವಸ್ಥಾನ ನಿರ್ಮಿಸಿ, ಅಲ್ಲಿ ವಿಷ್ಣಪ್ಪ ಅವರ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.
ಸಮಾಜಕ್ಕೆ ಸಂದೇಶ:  ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವಲ್ಲಿ ಹೆತ್ತವರ ಪಾತ್ರ ಬಹಳ ಮಹತ್ವದ್ದು. ಆದರೆ, ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಂಡ ಬಳಿಕ ಹೆತ್ತವರನ್ನು ಮರೆಯುತ್ತಾರೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ನಿಟ್ಟಿನಲ್ಲಿ ತಂದೆಯ ದೇವಸ್ಥಾನ ನಿರ್ಮಿಸಿದ್ದೇವೆ ಎಂದರು ಹಿರಿಯ ಪುತ್ರ ಸಂಜೀವ.
ಎಲ್ಲರಿಗೂ ಅಚ್ಚುಮೆಚ್ಚು: ಕುಟುಂಬ ಮಾತ್ರವಲ್ಲದೆ, ಗ್ರಾಮಸ್ಥರಿಗೂ ವಿಷ್ಣಪ್ಪ ಅಚ್ಚುಮೆಚ್ಚು. 35ಕ್ಕೂ ಹೆಚ್ಚು ಸದಸ್ಯರಿದ್ದ ಕುಟುಂಬದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಮಕ್ಕಳನ್ನೆಲ್ಲ ವಿದ್ಯಾವಂತರನ್ನಾಗಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.