ಮೊರಾರ್ಜಿ ಶಾಲೆ: ಸಮಸ್ಯೆಗಳ ಸರಮಾಲೆ
-ಎಚ್.ಡಿ. ಗುರುಪ್ರಸಾದ್
ಹೊಳೆನರಸೀಪುರ: ಸತತವಾಗಿ ಐದು ವರ್ಷ ಕಾಮಗಾರಿ ಕುಂಟುತ್ತಾ ಸಾಗಿ, ಫೆ.16ರಂದು ಕಡೆಗೂ ಉದ್ಘಾಟನೆಗೊಂಡ ಹಾಸನ- ಮೈಸೂರು ರಸ್ತೆಯಲ್ಲಿನ ಎಸ್. ಅಂಕನಹಳ್ಳಿ ಬೋರೆಯ ಬಳಿಯ ಅರಣ್ಯ ಪ್ರದೇಶದೊಳಗೆ ನಿರ್ಮಿಸಲಾಗಿರುವ ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಆರಂಭದಿಂದಲೇ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಕುಳಿತಿದೆ.
ಸರ್ಕಾರಿ ಶಾಲೆಗಳಲ್ಲದೇ ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣವನ್ನು ನೀಡುವ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಮೊರಾರ್ಜಿ ವಸತಿ ಶಾಲೆಯನ್ನು ಆರಂಭಿಸಿದೆ. ಅಲ್ಲಿಯವರೆಗೂ ಈ ಮೊರಾರ್ಜಿ ಶಾಲೆಯು ಪಟ್ಟಣದ ಸಿಂಗಮ್ಮ ದೇವಾಲಯದ ಬಳಿಯಲ್ಲಿ ಖಾಸಗಿ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು.
ಕುಡಿಯುವ ನೀರಿಲ್ಲ: ನೂತನ ಮೊರಾರ್ಜಿ ಶಾಲೆ ಕಟ್ಟಡ ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದರೂ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನೀರಿನ ಲಭ್ಯತೆ ಇಲ್ಲ. ಇಲ್ಲಿನ ವಸತಿ ಶಾಲೆಯ ಆವರಣದಲ್ಲಿ ಬೋರ್ವೆಲ್ ಕೊರೆಸಲಾಗಿದ್ದರೂ, ಅದರಲ್ಲಿ ನೀರಿನ ಲಭ್ಯತೆ ಕಡಿಮೆಯಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಅಲ್ಲದೇ ಈ ನೂತನ ಕಟ್ಟಡಕ್ಕೆ ಶಾಶ್ವತ ವಿದ್ಯುತ್ ಸಂಪರ್ಕವನ್ನು ಇದುವರೆವಿಗೂ ಪೂರೈಸದೇ ಇರುವ ಕಾರಣದಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡಚಣೆಯಾಗಿದೆ. ನೀರಿನ ಕೊರತೆಯನ್ನು ನೀಗಿಸಲು ಪಕ್ಕದ ಆಲಗೌಡನಹಳ್ಳಿ ಬಳಿಯಿಂದ ಖಾಸಗಿ ಕೊಳವೆಬಾವಿಯಿಂದ ನೀರನ್ನು ಪಡೆಯಲಾಗುತ್ತಿದ್ದರೂ ನೀರಿನ ಲಭ್ಯತೆ ಇಲ್ಲಿಯೂ ಸಾಕಾಗುತ್ತಿಲ್ಲ ಎನ್ನಲಾಗಿದೆ.
ಕಾಡು ಪ್ರಾಣಿಗಳ ಹಾವಳಿ: ಶಾಲೆಯು ಅರಣ್ಯ ಪ್ರದೇಶದಲ್ಲಿ ಇರುವ ಕಾರಣದಿಂದಾಗಿ ರಾತ್ರಿ ವೇಳೆಯಲ್ಲಿ ಚಿರತೆ, ತೋಳಗಳ ಹಾಗೂ ಇನ್ನಿತರ ಪ್ರಾಣಿಗಳ ಕಾಟವನ್ನೂ ಕೂಡ ಇಲ್ಲಿನ ವಿದ್ಯಾರ್ಥಿಗಳು ಸಹಿಸಿಕೊಳ್ಳಬೇಕಾಗಿದೆ. ಇಲ್ಲಿ ವಿದ್ಯಾರ್ಥಿಗಳ ರಕ್ಷಣೆಗಾಗಿ ಸೂಕ್ತ ವಸ್ಥೆಯನ್ನೂ ಮಾಡಿಲ್ಲ.
ಇಲ್ಲಿ ಶಿಕ್ಷಕರು-ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಾಗಿ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಇನ್ನೂ ಯಾವುದೇ ಶಿಕ್ಷಕರುಗಳೂ ವಾಸಿಸುತ್ತಿಲ್ಲಿ. ನಾರು, ವಿದ್ಯುತ್ ಸೇರಿದಂತೆ ಇತರ ಸೌಲಭ್ಯಗಳನ್ನು ಕಲ್ಪಿಸಿದರೆ ಶಿಕ್ಷರು ಇಲ್ಲಿಯೇ ತಂಗಲು ಅನುಕೂಲವಾಗುತ್ತದೆ ಎಂಬುದು ಪೋಷಕರ ಮನವಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

