370ನೇ ವಿಧಿ ಎಲ್ಲ ರಾಜ್ಯಗಳಿಗೂ ವಿಸ್ತರಿಸಿ
ಹಾಸನ: ಭಾರತದ ಒಕ್ಕೂಟ ವ್ಯವಸ್ಥೆಯ ಒಂದು ಭಾಗವಾದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಸಂವಿಧಾನದ 21 ನೇ ಪರಿಚ್ಚೇಧದ ಭಾಗವಾಗಿ 370 ನೇ ವಿಧಿ ಜಾರಿಗೆ ಬಂತು ಎಂದು ಮಲೆನಾಡು ಜನಪರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಎ. ಕಿಶೋರ್‌ಕುಮಾರ್ ತಿಳಿಸಿದರು.
ಇತ್ತೀಚೆಗೆ ನಗರದ ಅಧ್ಯಯನ ವೃತ್ತವು ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿದ್ದ 370 ನೇ ವಿಧಿ ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದ ಸಾರ್ವಭೌಮತೆ ರಕ್ಷಿಸುವ ಉದ್ದೇಶದಿಂದ 370 ವಿಧಿ ಜಾರಿಗೆ ಬಂತು ಎಂದರು.
ಪ್ರತ್ಯೇಕತೆಗೆ ಕುಮ್ಮಕ್ಕು: ಶಿಕ್ಷಣ ಹಕ್ಕು ಸಮಿತಿ ಜಿಲ್ಲಾಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ, ಜನರನ್ನು ಭಾವನಾತ್ಮಕ ಗೊಂದಲದಲ್ಲಿ ಬೀಳಿಸುವಂತಹ ಕೆಲಸವನ್ನು ಬಿಜೆಪಿ ಹುಟ್ಟಿದಾಗಿನಿಂದಲೂ ಮಾಡಿಕೊಂಡು ಬರುತ್ತಿದೆ. ಪ್ರತ್ಯೇಕತಾ ಭಾವನೆ ಕೆರಳಿಸಲು 370 ವಿಧಿ ತೆಗೆಯುವ ಕೆಲಸಕ್ಕೆ ಮೋದಿ ಸರ್ಕಾರ ಕೈ ಹಾಕಿದೆ ಎಂದು ಟೀಕಿಸಿದರು.
ಹಿರಿಯ ಉಪನ್ಯಾಸಕಿ ರತ್ನವತಿ ಹಾಗೂ ಸಾಹಿತಿ ಹೆತ್ತೂರ್ ನಾಗರಾಜು ಮಾತನಾಡಿ, 370 ವಿಧಿಯಿಂದ ಭಾರತಕ್ಕೇ ನಷ್ಟ ಇಲ್ಲ. ಬದಲಿಗೆ ಕಾಶ್ಮೀರ, ಬಹುರಾಷ್ಟ್ರೀಯ ಕಂಪೆನಿ ಹಾಗೂ ಭಾರತದ ಲೂಟಿಕೋರರಿಂದ ರಕ್ಷಣೆ ಪಡೆದಿದೆ ಎಂದರು.
ಸಂಸ್ಕೃತಿಯ ರಕ್ಷಣೆ: ಕಾರ್ಮಿಕ ಮುಖಂಡ ಎಂ.ಸಿ. ಡೋಂಗ್ರೆ ಮಾತನಾಡಿ, ಪ್ರಜಾತಂತ್ರವನ್ನು ಹೆಚ್ಚು ಬಲಗೊಳಿಸಲು ಸಾದ್ಯವಿರುವ ವಿಧಿ ಎಂದರೆ ಈ 370ನೇ ವಿಧಿ. ರಾಜ್ಯಗಳ ಸ್ವಾಯುತ್ತತೆ, ಸಂಪತ್ತು, ಸಂಸ್ಕೃತಿಯನ್ನು ಇದು ರಕ್ಷಿಸುತ್ತದೆ ಎಂದರು.
ಸಾಹಿತಿ ಜ.ಹೊ.ನಾ, ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆ ಬಲಗೊಳ್ಳಬೇಕು ಎನ್ನುವುದು ನಮ್ಮ ಸಂವಿಧಾನದ ಆಶಯ. ಪ್ರಜಾತಂತ್ರ ಬಲಗೊಳ್ಳುವುದು ಅಧಿಕಾರದ ವಿಕೇಂದ್ರೀಕರಣಗೊಂಡಾಗ ಮಾತ್ರ. ಭಾರತದ ಪ್ರಜಾತಂತ್ರ ವ್ಯವಸ್ಥೇ ಕೇಂದ್ರ, ರಾಜ್ಯ, ಮಂಡಲ ಹಾಗೂ ಗ್ರಾಮಗಳಾಗಿ ವಿಭಜನೆಯಾಗಿದೆ. ಗಾಂಧೀಜಿ ಕನಸಿದಂತೆ ಭಾರತದ ಜೀವ ಗ್ರಾಮಗಳು ಹಾಗಾಗಿ ಗ್ರಾಮಪಂಚಾಯತಿಗಳಿಗೆ ಹೆಚ್ಚು ಅಧಿಕಾರ ನೀಡಬೇಕು ಎಂದರು.
ಎಲ್ಲ ರಾಜ್ಯಕ್ಕೂ ವಿಸ್ತರಿಸಿ: ಕೇಂದ್ರ ಕಡಿಮೆ ಅಧಿಕಾರ ಇಟ್ಟಿಕೊಳ್ಳಬೇಕು. ಆದರೆ ಭಾರತದ ಕೇಂದ್ರೀಕೃತ ವ್ಯವಸ್ಥೆ ರಾಜ್ಯಗಳನ್ನು ಸಮಾನವಾಗಿ ಕಾಣುತ್ತಿಲ್ಲ. ಹಾಗಾಗಿ 370ನೇ ವಿಧಿ ಸ್ಥಳೀಯ ಸರ್ಕಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಇದನ್ನು ಭಾರತದ ಎಲ್ಲಾ ರಾಜ್ಯಗಳಿಗೂ ವಿಸ್ತರಿಸಬೇಕು ಎಂದರು.
ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷ ಅಹಮದ್ ಹೆಗರೆ ಹಿರಿಯ ಚೇತನ ಜಯದೇವಪ್ಪ, ವಕೀಲರಾದ ಮಂಜುಳ, ಎಂ.ಆರ್.ಕುಮುದ, ಹರೀಶ್ ಕುಮಾರ್, ಲೇಖಕಿಯರ ಬಳಗದ ನಿರ್ಮಲ, ದಲಿತ ಸೇನೆಯ ಸತೀಶ್, ಪ್ರಕಾಶ್, ಜಯಪ್ರಕಾಶ್, ಮಾಯಣ್ಣಗೌಡ ತಮ್ಮ ಅನಿಸಿಕೆ ಹಂಚಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

