ಹಾಸನ

ಗ್ರಾಪಂ ಪುನರ್ ವಿಂಗಡಣೆಗೆ ಸಮಿತಿ ರಚನೆ

Published On :

ಹಾಸನ: ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಅಡಿ ನಿಯಮಗಳನುಸಾರ ಗ್ರಾಮ ಪಂಚಾಯಿತಿಗಳ ಪುನರ್ ವಿಂಗಡಣೆ ಮತ್ತು ಪರಿಷ್ಕರಣೆ ಹಾಗೂ ಕೇಂದ್ರ ಸ್ಥಾನ ಬದಲಾವಣೆ ಮಾಡುವ ಬಗ್ಗೆ ಸಮಿತಿ ರಚಿಸಿದ್ದು, ಸದರಿ ಸಮಿತಿಯ ಅಧ್ಯಕ್ಷರಾಗಿ ಮಾಜಿ ಶಾಸಕ ಎಸ್.ಜಿ. ನಂಜಯ್ಯನ ಮಠ  ನೇಮಕಗೊಂಡಿದ್ದಾರೆ.
ಮಂಡ್ಯದ ರಾಜೀವ್ ಗಾಂಧಿ ಸಂಘಟನೆಯ ಬಿ.ಸಿ. ಶಿವಾನಂದ, ಹುಬ್ಬಳ್ಳಿಯ ನಿವೃತ್ತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಬಿ.ದ್ಯಾಬೇರಿ, ಶಿರಸಿ ತಾಲೂಕು ಎಡಳ್ಳಿ ಅಂಚೆಯ ಶಿರಸಿಮಕ್ಕಿ ಗ್ರಾಮದ ಎಸ್.ಕೆ.ಭಾಗವತ್, ಹುಣಸೂರಿನ ಎ.ಆರ್.ಸುಧಾಮಣಿ ಕೋಂ ಬಸವರಾಜಪ್ಪ, ಅಥಣಿ ತಾಲೂಕು ಕವಟಿ ಕೊಪ್ಪದ ರಾಜೀವ್ ಗಾಂಧಿ ಸಂಘಟನೆಯ ರಾವ್ ಸಾಹೇಬ ಅಲಗುಂದ ಅವರು  ಸಮಿತಿಯ ಸದಸ್ಯರಾಗಿದ್ದಾರೆ  ಮತ್ತು ಮೈಸೂರು ಅಬ್ದುಲ್ ನಜೀರ್ ಸಾಬ್ ರಾಜ್ಯ  ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ದ ಪಿ. ಶಿವಶಂಕರ್ ಸಮಿತಿಯ  ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ನೂತನ ಗ್ರಾಪಂ ರಚನೆ: ಬೆಳಗಾಂ, ಚಿಕ್ಕಮಗಳೂರು, ದಕ್ಷಿಣಕನ್ನಡ, ಧಾರವಾಡ, ಹಾಸನ, ಕೊಡಗು, ಶಿವಮೊಗ್ಗ, ಉಡುಪಿ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಪ್ರತಿ 5000ರಿಂದ 7000 ಜನಸಂಖ್ಯೆಗೆ ಒಂದು ಗ್ರಾಮ ಪಂಚಾಯ್ತಿಯನ್ನು ರಚಿಸಲು ಅವಕಾಶವಿದ್ದು ಮೇಲ್ಕಂಡ ಜಿಲ್ಲೆಗಳಲ್ಲಿ ಮಾತ್ರ ಪ್ರತಿ 2500ಕ್ಕೂ ಮೇಲ್ಪಟ್ಟ ಜನಸಂಖ್ಯೆಗೆ ಒಂದು ಗ್ರಾಪಂ ರಚಿಸಲು ಅವಕಾಶವಿದೆ.ಸಾರ್ವಜನಿಕರು ತಮ್ಮ ಅಹವಾಲುಗಳನ್ನು ನಿರ್ದೇಶಕರು, ಆನಸಾರಾಗ್ರಾ ಸಂಸ್ಥೆ, ಲಲಿತಮಹಲ್ ರಸ್ತೆ, ಮೈಸೂರು ಅಥವಾ ನಿರ್ದೇಶಕರು ಇಲಾಖೆ, ಬಹು ಮಹಡಿಗಳ ಕಟ್ಟಡ. ಬೆಂಗಳೂರು ಅವರಿಗೂ ಸಹ ಸಲ್ಲಿಸಬಹುದಾಗಿದೆ. ಅಹವಾಲುಗಳನ್ನು ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.