ಕಾಂಪೌಂಡ್ ಕಾಮಗಾರಿ ನಿಲುಗಡೆಗೆ ಆಗ್ರಹ
ಕ.ಪ್ರ. ವಾರ್ತೆ ಟಿ ಬೇಲೂರು ಟಿ ಜೂ. 19
ಶಾಲಾ ಮುಂಭಾಗ ಕೆರೆಯಲ್ಲಿ ನೀರು ಇದ್ದು, ನಿಂತ ನೀರಿನ ಪಕ್ಕದಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣ ಮಾಡುತ್ತಿರುವದು ಅವೈಜ್ಞಾನಿಕವಾಗಿದೆ, ಅಲ್ಲದೆ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗೆ ಚಾಲನೆ ನೀಡಿಬೇಕು ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿನ ಸರ್ಕಾರಿ ಪ್ರೌಢಶಾಲೆ ಕಳೆದ 2013 ರ ಸಾಲಿನಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ 3 ಲಕ್ಷ ಬಿಡುಗಡೆ ಮಾಡಲಾಗಿದೆ. ಈ ಕಾಮಾಗಾರಿ 100 ಮೀಟರ್ ಮಾತ್ರ ಇದ್ದು, ಒಂದು ಮೀಟರ್ಗೆ 3 ಸಾವಿರದಂತೆ ವೆಚ್ಚ ಮಾಡಲಾಗಿದೆ ಎಂದು ಆದೇಶದಲ್ಲಿದೆ ಎಂದು ತಿಳಿದು ಬಂದಿದೆ.
ನೀರಿನ ನಡುವೆ ಕಾಂಪೌಂಡ್: ಅದರೆ ಇಲ್ಲಿನ ಪ್ರೌಢಶಾಲಾ ಮುಖ್ಯಶಿಕ್ಷಕರು ಹಾಗೂ ಎಸ್ಡಿಎಂಸಿ ಮಂಡಳಿ ಕೂಡಿ ಕೆರೆಯ ನೀರಿನ ಮಧ್ಯೆ ಕಾಂಪೌಂಡ್ ನಿರ್ಮಾಣದ ಅಗತ್ಯ ಏನು ಇತ್ತು, ಇವರು ನಿರ್ಮಾಣ ಮಾಡುತ್ತಿರುವ ಕಾಮಾಗಾರಿ ಇನ್ನು ಎರಡು ಮೂರು ವರ್ಷ ಮಾತ್ರ ಬಳಕೆ ಬರುತ್ತದೆ. ಅದರೆ ಶಾಶ್ವತ ಕೆಲಸ ಮಾಡಿಸಲು ಇವರಿಗೆ ಏನು ತೊಂದರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಹೆಬ್ಬಾಳು ಸರ್ಕಾರಿ ಫ್ರೌಢ ಶಾಲೆ ಸುತ್ತ-ಮುತ್ತಲ ಸುಮಾರು 7 ಗ್ರಾಮದಿಂದ ಬರುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಕೇಂದ್ರವಾಗಿದೆ, ಅದರೆ ಕಳೆದ ವರ್ಷಕ್ಕೆ ಹೋಲಿಸಿದರೆ 10 ನೇ ತರಗತಿಯಲ್ಲಿ ಶೇ 10 ರಷ್ಟು ಕಡಿಮೆ ಫಲಿತಾಂಶ ಬಂದಿದೆ. ಇದಕ್ಕೆ ಕಾರಣ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರಲ್ಲಿ ಯಾವ ಹೊಂದಾಣಿಕೆ ಇಲ್ಲದೆ ಇಂತಹ ಸ್ಥಿತಿಗೆ ತಂದಿದ್ದಾರೆ ಎಂದು ಕೆಲ ಪೋಷಕರು ದೂರಿದ್ದಾರೆ.
ಜಾಣ ಮೌನ: ಇದಕ್ಕೆ ಪುಷ್ಟಿ ನೀಡುವಂತೆ ಇಲ್ಲಿನ ಎಸ್ಡಿಎಸ್ಸಿ ಅಧ್ಯಕ್ಷರು ಮಾತ್ರ ಯಾವ ಗೋಜಿಗೂ ಹೊಗದೆ ಜಾಣ ಮೌನ ವಹಿಸಿದ್ದಾರೆ ಎಂದ ಅವರು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಬಿ.ಸುಂದ್ರೇಶ್ ಪ್ರತ್ರಿಕಿಯೆ ನೀಡಿ, ಹೆಬ್ಬಾಳು ಸರ್ಕಾರಿ ಫ್ರೌಢ ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಸದ್ಯ 3 ಲಕ್ಷ ರು. ಬಿಡುಗಡೆ ಮಾಡಿದ್ದು, ಉತ್ತಮ ಸ್ಥಳದಲ್ಲಿ ನಿರ್ಮಾಣ ಮಾಡವುದು ಎಸ್ಡಿಎಸ್ಸಿ ಮೂಲ ಕರ್ತವ್ಯ. ಅದರೆ ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ನಾಳೆ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

