ಗ್ರಾಮೀಣರಿಗಾಗಿ ಮುಕ್ತಿರಥ ವಾಹನ ಕೊಡುಗೆ
ಹೊಳೆನರಸೀಪುರ: ಗ್ರಾಮಾಂತರ ಪ್ರದೇಶದಲ್ಲಿನ ನಿವಾಸಿಗಳಿಗೆ ಅಪಘಾತ ಅಥವಾ ಸಾವು ನೋವು ಸಂಭವಿಸಿದಾಗ ಸಂಕಷ್ಟದಲ್ಲಿರುವ ಜನರಿಗಾಗಿ ಸಹಕಾರಿಯಾಗಲು ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ ತಮ್ಮ ಮತಕ್ಷೇತ್ರವಾದ ಮೈಸೂರು, ಹಾಸನ, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳ ನಗರಪಾಲಿಕೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳಿಗೆ ಮುಕ್ತಿರಥ(ಶವ ಸಾಗಿಸುವ ವಾಹನ)ವನ್ನು ನೀಡುತ್ತಿರುವುದಾಗಿ ದಕ್ಷಿಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ತಿಳಿಸಿದರು.
ಇಲ್ಲಿನ ಪುರಸಭೆಗೆ ಶುಕ್ರವಾರ 2.94 ಲಕ್ಷ ರು. ವೆಚ್ಚದ ಮಾರುತಿ ಓಮ್ನಿ ವ್ಯಾನನ್ನು ಕೊಡುಗೆಯಾಗಿ ನೀಡಿದ ನಂತರ ಮಾತನಾಡಿದ ಅವರು, ಗ್ರಾಮೀಣರು ಕಡಿಮೆ ಖರ್ಚಿನಲ್ಲಿ ಶವವನ್ನು ತಮ್ಮ ಗ್ರಾಮಗಳಿಗೆ ಸಾಗಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ನಿರ್ದರಿಸಿದ್ದಾಗಿ ಅವರು ತಿಳಿಸಿದರು.
5 ಟೆಂಪೋ ಟ್ರಾವೆಲರ್: ಈ ನಿಟ್ಟಿನಲ್ಲಿ ತಮ್ಮ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಸಮೀಕ್ಷೆಯನ್ನು ಕೈಗೊಂಡು, ತಮ್ಮ ಕ್ಷೇತ್ರ ವ್ಯಾಪ್ತಿಯ ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಮುಕ್ತಿವಾಹನವನ್ನು ನೀಡಲಾಗುವುದು. ಈ ದಿಸೆಯಲ್ಲಿ 5 ಟೆಂಪೋ ಟ್ರಾವೆಲರ್ ಮಾದರಿಯ ಆಂಬ್ಯಲೆನ್ಸ್ ಹಾಗೂ 22 ಮಾರುತಿ ಕಂಪನಿಯ ಓಮ್ನಿ ವಾಹನ ಸೇರಿದಂತೆ 1.03 ಕೋಟಿಗೂ ಹೆಚ್ಚಿನ ಮೌಲ್ಯದಲ್ಲಿ ವಾಹನಗಳನ್ನು ಖರೀದಿಸಿ ವಿತರಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಹರೀಶ್, ಪರಿಸರ ಎಂಜಿನಿಯರ್ ಅರ್ಚನಾ ಆರಾಧ್ಯ, ಆರೋಗ್ಯ ನಿರೀಕ್ಷಕ ವಸಂತ್ ಕುಮಾರ್, ಉಪನ್ಯಾಸಕರಾದ ಎಚ್.ಎಸ್.ಪ್ರಭುಶಂಕರ್ ಹಾಗೂ ಪುರಸಭೆಯ ಸದಸ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

