ಬೆಳೆ ಪರಿಹಾರ ನೀಡುವಲ್ಲಿ ಇಲಾಖೆ ವಿಫಲ: ಆರೋಪ
ಬೇಲೂರು: ಕೃಷಿ ಇಲಾಖೆ ಪ್ರತಿ ವರ್ಷ ರೈತರಿಂದ ಬೆಳೆ ವಿಮೆ ಪಾವತಿ ಮಾಡಿಸಿಕೊಳ್ಳುತ್ತಿದ್ದು ಬೆಳೆ ಪರಿಹಾರ ನೀಡುವಲ್ಲಿ ಇಲಾಖೆ ಯಾವುದೆ ಗಮನಹರಿಸಿಲ್ಲ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ ಗೀರಿಶ್ ಆರೋಪಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ತಾಲೂಕಿನಲ್ಲಿ ಹಲವಾರು ರೈತರು ಅಲೂಗಡ್ಡೆ ಬೆಳೆಗೆ ವಿಮೆ ಮಾಡಿಸಿದ್ದಾರೆ ಅವರಿಗೆ ಇದುವರೆಗೂ ಬೆಳೆ ವಿಮೆ ಬಂದಿಲ್ಲ ಅದರೂ ಈ ವರ್ಷ ಕೂಡ ಬೆಳೆ ವಿಮೆ ಮಾಡಲು ಕೃಷಿ ಇಲಾಖೆ ಹೇಳುತ್ತಿದೆ ಇದರಿಂದ ರೈತರಿಗೆ ಯಾವ ಪ್ರಯೋಜನವಾಲಿದೆ ಎಂದು ಪ್ರಶ್ನಿಸಿದರು.
ತೆರೆದ ಕೊಳವೆ ಬಾವಿ ಮುಚ್ಚಿಸಿ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೊರೆದಿರುವ ಕೊಳವೆ ಭಾವಿಗಳಲ್ಲಿ ನೀರು ಬಾರದೆ ಇರುವ ಕೊಳವೆ ಬಾವಿಗಳನ್ನು ಮುಚ್ಚಿಸಲು ಅಧಿಕಾರಿಗಳು ಗಮನಹರಿಸಬೇಕು ಹಾಗು ಖಾಸಗಿಯವರು ಕೊಳವೆಬಾವಿ ಕೊರೆಯಿಸಿದ್ದರೆ ಅವರಿಗೂ ಅಧಿಕಾರಿಗಳು ಏಚ್ಚರಿಕೆ ನೀಡಬೇಕೆ ಎಂದು ಅಧ್ಯಕ್ಷರು ಸೂಚನೆ ನೀಡಿದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಪರ್ವತಯ್ಯ, ಉಪಾಧ್ಯಕ್ಷೆ ಕಮಲಮ್ಮ, ಕಾರ್ಯನಿರ್ವಹಣಾಧಿಕರಿ ಬಸವರಾಜ್ ಅಯ್ಯಣ್ಣನವರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

