ಬೆಳೆಗೆ ವೈಜ್ಞಾನಿಕವಾಗಿ ನೀರು ಪೂರೈಸಿ
ನುಗ್ಗೇಹಳ್ಳಿ: ರೈತರು ಪ್ರಜ್ಞಾವಂತರಾಗಿ ಮಳೆ ನೀರು, ಕೊಳವೆ ಬಾವಿ, ಬಚ್ಚಲು ನೀರನ್ನು ಸಹ ವ್ಯಯ ಮಾಡದೆ ಬೆಳೆಗಳಿಗೆ ವೈಜ್ಞಾನಿಕವಾಗಿ ನೀರು ಪೂರೈಸಿ ಬೆಳೆ ಬೆಳೆಯುವುದರಿಂದ ನೀರಿನ ಸದ್ಬಳಕೆ ಮಾಡಬಹುದಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಸರ್ಕೀರಿ ಪ್ರಾಥಮಿಕ ಶಾಲಾ ಅವರಣದಲ್ಲಿ ಇತ್ತೀಚೆಗೆ ನಡೆದ ಕೋರಮಂಡಲ್ ಇಂಟರ್‌ನ್ಯಾಷನಲ್ ಕಂಪನಿಯ ಗೋಮೋರ್ ಕೃಷಿಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಉಪ ಬೆಳೆ ಬೆಳೆಯಿರಿ: ಇಸ್ರೇಲ್ ದೇಶದಲ್ಲಿ ಶೇ.30 ರಷ್ಟು ಕೃಷಿ ಭೂಮಿ ಇದ್ದು ಹನಿ ನೀರಾವರಿ ಮೂಲಕ ಲಭದಾಯಕ ಬೆಳೆ ಬೆಳೆಯುತ್ತಾರೆ. ನಮ್ಮ ದೇಶದ ಭೂಮಿಯಲ್ಲಿ ಎಲ್ಲಾ ವಿದಧ ಬೆಳೆಗಳನ್ನು ಬೆಳೆಯಲು ಭೂಮಿ ಫಲವತ್ತಾಗಿದೆ, ಮಳೆ ಸಕಾಲಕ್ಕೆ ಬೀಳದೆ ರೈತರು ಬೆಳೆ ಬೆಳೆಯಲು ಆಗುತ್ತಿಲ್ಲ. ಸೋಮಾರಿತನ ಮಾಡದೆ ಇರುವ ನೀರನ್ನೇ ಉಪಯೋಗಿಸಬೇಕು. ತೆಂಗಿನ ಜೋತೆ ಬೆರೆಬೆಳೆಗಳನ್ನು ಬೆಳೆಯುವುದು ಸೂಕ್ತ ಎಂದು ತಿಳಿಸಿದರು. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಬಿ. ಶಿವರಾಜ್ ಮಾತಾನಾಡಿ, ರೈತರು ರಾಗಿ ಜತೆಗೆ ಹಲಸಂದೆ, ಜೋಳ, ತೊಗರಿ, ಎಳ್ಳು, ಸಾಸಿವೆ ಬೆಳೆಯುವುದು ಸೂಕ್ತ. ಕೊಟ್ಟಿಗೆ ಗೊಬ್ಬರ ಬೆಳೆಗಳಿಗೆ ಬಳಸಲು ದನಕರು, ಕುರಿ, ಮೇಕೆ ಸಾಕುವುದು ಒಳ್ಳೆಯದು. ಇದರಿಂದ ಅಧಿಕ ಲಾಭ ಬರುತ್ತದೆ. ರೈತರಿಗೆ ಉಚಿತವಾಗಿ 250 ಎಕರೆಯಲ್ಲಿ ಹೊಸ ತಳಿ ರಾಗಿ ಬೆಳೆಯಲು ಸರ್ಕಾರ ರು. 30 ಲಕ್ಷ ಬಿಡುಗಡೆ ಮಾಡಿದೆ ಎಂದರು.
ಆರ್.ಎಂ.ಸಿ ನಿರ್ದೇಶಕ ಬಿ.ಸಿ ದೊರೆಸ್ವಾಮಿ ಗ್ರಾ.ಪಂ ಅಧ್ಯಕ್ಷೆ ಶೋಭರಾಜಶೇಖರ್, ಸಹಾಯಕ ಕೃಷಿ ನಿರ್ದೇಶಕ ಮಲ್ಲೇಶ್ ಗೌಡ, ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕ ಬಸವರಾಜ್, ಕೋರಮಂಡಲ್ ಇಂಟರ್ ನ್ಯಾಷನಲ್ ಕಂಪನಿಯ ಉಪಾಧ್ಯಕ್ಷ ಎಸ್.ಪಿ ರಾಮಮೋಹನ್, ಮ್ಯಾನೆಜರ್ ಜೆ.ಕೆ ದಾಸ್, ರಾಜಶೇಖರ್ ಬಡಿಗೇರ್, ಶ್ರೀರಾಮ ರೆಡ್ಡಿ, ಡೀಲರ್ ಎನ್.ಪಿ ರವಿ, ಡಾ. ಮಂಜುನಾಥ್, ಡಿ ಆನಂದ ಕುಮಾರ್, ಆರ್.ಐ ಬಲರಾಮ್ ಶ್ರೀನಿವಾಸ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

