ಹಾಸನ

ರಸ್ತೆ ಬದಿ ವಾಹನ ನಿಲುಗಡೆ ಅವಕಾಶಕ್ಕೆ ಆಗ್ರಹ

Published On :

ಸಕಲೇಶಪುರ: ಪಟ್ಟಣದ ಮುಖ್ಯ ರಸ್ತೆಯ ಒಂದು ಬದಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ಇತ್ತೀಚೆಗೆ ಪಟ್ಟಣದ ಪುರಸಭೆಯಲ್ಲಿ ನಡೆದ ಟ್ರಾಫಿಕ್ ಸಮಸ್ಯೆ ಕುರಿತು ಚರ್ಚೆಯಲ್ಲಿ ಒಕ್ಕೊರಲಿನಿಂದ ಕೇಳಿ ಬಂದ ದ್ವನಿಯಾಗಿದೆ.
ಪಟ್ಟಣದಲ್ಲಿ ಹೆಚ್ಚಿರುವ ವಾಹನಗಳಿಗೆ ತಕ್ಕಂತೆ ರಸ್ತೆಗಳು ವಿಸ್ತರಣೆಯಾಗದಿರುವುದರಿಂದ ನಿತ್ಯ ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಪಟ್ಟಣದ ವಿವಿಧ ಸಂಘ,ಸಂಸ್ಥೆಗಳ ಮುಖಂಡರು, ವರ್ತಕರು ಹಾಗೂ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ವಿವಿಧ ಕ್ಷೇತ್ರದ ಮುಖಂಡರು, ವಾಹನ ನಿಲುಗಡೆಗೆ ಪಟ್ಟಣದಲ್ಲಿ ಸ್ಥಳವಿಲ್ಲದೆ ಇರುವುದರಿಂದ ತೀವ್ರತರಹದ ಸಮಸ್ಯೆ ಸೃಷ್ಟಿಯಾಗಿರುವುದರಿಂದ ಪಟ್ಟಣದ ಕಾಂಕ್ರೀಟಿಕರಣಗೊಂಡಿರುವ ರಸ್ತೆಗಳ ಅಂಚಿಗೆ ಮಣ್ಣನ್ನು ತುಂಬಿ ರಸ್ತೆ ಅಗಲೀಕರಣಗೊಳಿಸುವ ಮೂಲಕ ವಾಹನ ನಿಲುಗಡೆ ಮಾಡಬೇಕು ಹಾಗೂ ಹಳೇ ತಾಲೂಕು ಕಚೇರಿ ಕಟ್ಟಡವನ್ನು ಕೆಡವಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು.
ಪಟ್ಟಣದ ಮಿನಿವಿಧಾನ ಸೌದದ ಎದುರಿನ ಸ್ಥಳದಲ್ಲಿ ವಾಹನ ನಿಲುಗಡೆ ಹಾಗೂ ಸಾರಿಗೆ ಬಸ್ಸು ನಿಲುಗಡೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಮಾತುಗಳೊಂದಿಗೆ ಮುಖ್ಯ ರಸ್ತೆಯ ಒಂದು ಬದಿಯ ವಾಹನ ನಿಲುಗಡೆಯು ಮಾಡಿದರೆ ಮಾತ್ರ ಟ್ರಾಫಿಕ ಸಮಸ್ಯೆ ಬಗೆಹರಿಸ ಬಹುದಾಗಿದೆ ಇದಲ್ಲದೆ ಪಟ್ಟಣದಲ್ಲಿರುವ ಸರಕಾರಿ ಜಾಗಗಳನ್ನು ವಾಹನಗಳ ನಿಲುಗಡೆಗೆ ಬಳಸಿಕೊಳ್ಳುವ ಕುರಿತು ಸಭೆಯಲ್ಲಿ ಸಲಹೆಗಳು ಕೇಳಿಬಂದವು.
ಸಾರ್ವಜನಿಕರ ಸಲಹೆ ಪಡೆದ ನಂತರ ಮಾತನಾಡಿದ ವೃತ್ತ ನಿರೀಕ್ಷಕ ಗುರುರಾಜ್, ಎರಡು ವರ್ಷದಿಂದ ಹೆದ್ದಾರಿಯಲ್ಲಿ ವಾಹನ ನಿಲುಗಡೆಯನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದು ಕಳೆದ ಮೂರು ದಿನಗಳಿಂದ ಪ್ರಯೋಗಿಕವಾಗಿ ಮುಖ್ಯ ರಸ್ತೆಯ ಒಂದು ಬದಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ನಾಳೆಯಿಂದ ಮತ್ತೆ ವಾಹನ ನಿಲುಗಡೆಯನ್ನು ನಿಷೇಧಿಸಿ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಅವರ ಒಪ್ಪಿಗೆ ಪಡೆದ ನಂತರ ಮುಖ್ಯ ರಸ್ತೆಯಲ್ಲಿ ವಾಹನ ನಿಲುಗಡೆ ಅವಕಾಶ ಕಲ್ಪಿಸಲಾಗುವುದು ಎಂದರು. ಉಪವಿಭಾಗಾಧಿಕಾರಿ ಮಧುಕೇಶ್ವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.