ಗೋಹತ್ಯೆ ತಡೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ್ಣ ಆಲೂರು ್ಣ ಜೂ.30
ಆಲೂರು ಪಟ್ಟಣದಲ್ಲಿ ಅವ್ಯಾಹತವಾಗಿ ಗೋಹತ್ಯೆ ಹಾಗೂ ಗೋಮಾಂಸ ವ್ಯಾಪಾರ ನಡೆಯುತ್ತಿದ್ದು, ಇದನ್ನು ತಡೆದು ಇಂತಹವರ ವಿರುದ್ಧ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ 5 ಮತ್ತು 6ನೇ ವಾರ್ಡ್ನಲ್ಲಿ ನಿರಂತರವಾಗಿ ಗೋಮಾಂಸ ವ್ಯಾಪಾರ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿದ್ದು, ಇದರಿಂದಾಗಿ ಪಟ್ಟಣದ ನಾಗರೀಕರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು. ಇದರ ತ್ಯಾಜ್ಯದಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು, ಪಪಂ ರವರು ಶೀಘ್ರ ಇತ್ತ ಗಮನ ಹರಿಸಿ ಗೋಹತ್ಯೆ ಹಾಗೂ ಗೋಮಾಂಸ ವ್ಯಾಪಾರವನ್ನು ತಡೆ ಹಿಡಿಯದಿದ್ದರೆ ಬಿಜೆಪಿ ಕಾರ್ಯಕರ್ತರು ಪಪಂ ಕಚೇರಿಗೆ ಬೀಗ ಜಡಿದು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಕ್ರಮ ಕೈಗೊಳ್ಳುವ ಭರವಸೆ: ಪಪಂ ಅಧ್ಯಕ್ಷೆ ನೀಲೂಫರ್ ಮಾತನಾಡಿ, ಈ ಸಂಬಂಧವಾಗಿ ಸಾರ್ವಜನಿಕರು ಸಹಾ ದೂರು ನೀಡಿದ್ದು, ಈಗಾಗಲೇ ಗೋಹತ್ಯೆ ಹಾಗೂ ಗೋಮಾಂಸ ವ್ಯಾಪಾರಿಗಳಿಗೆ ತೆರವು ಗೊಳಿಸುವಂತೆ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಶೀಘ್ರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಆಲೂರು ಕಟ್ಟಾಯ ಮಂಡಲ ಅಧ್ಯಕ್ಷ ಕೆ.ಆರ್.ಕಾಂತರಾಜ್, ಉಪಾಧ್ಯಕ್ಷ ಈಶ್ವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕದಾಳು ಲೋಕೆಶ್, ಕೆ.ಸಿ.ಪೂವಯ್ಯ, ಪಿ.ಎಲ್.ಶೇಖರ್, ಬಾಲಲೋಚನ, ಹೇಮಂತ್, ಗೋವಿಂದೇಗೌಡ, ಕ್ಯಾಂಟೀನ್ ನಾಗರಾಜ್, ಕವಳಿಕೆರೆ ಸುಧಾ, ಚಿದಾನಂದ್, ಯೋಗೀಶ್, ನಾಗರಾಜ್, ಕರಿಯಯ್ಯ, ತಾಳೂರು ವೆಂಕಟೇಶ್, ಆನಂದ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

