ರೈತರ ಶಾಂತಿಯುತ ಪ್ರತಿಭಟನೆ 22ನೇ ದಿನಕ್ಕೆ
ಹಾರನಹಳ್ಳಿ: ಹಾರನಹಳ್ಳಿ ಯಗಚಿ ನದಿ ಮೂಲಕ ನೀರು ಹರಿಸುವ ಬಗ್ಗೆ ಗ್ರಾಮಸ್ಥರು, ಈ ಭಾಗದ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಸೂತ್ತಮುತ್ತಲ ರೈತ ಸಂಘದ ಮುಖಂಡರು ಹಾರನಹಳ್ಳಿ ಗ್ರಾಮ ಪಂಚಾಯತಿ ಮುಂಭಾಗದಲ್ಲಿ 22ನೇ ದಿನವಾದ ಸೋಮವಾರ ಶಾಂತಿಯುತ ಪ್ರತಿಭಟನೆ ನಡೆಸಿದರು.
ಯಗಚಿ ನದಿಯಿಂದ ಅರಸೀಕೆರೆ ತಾಲೂಕು ಹಾರನಹಳ್ಳಿ ಕೆರೆಗೆ ನೀರು ಬಿಡುವಂತೆ ಈಗಾಗಲೇ ಬೇಲೂರು, ಯಗಚಿ ಜಲಾಶಯ ಇಲಾಖೆ ಅಧಿಕಾರಿಗಳು ಯೋಜನೆ ತಯಾರಿಸಿದ್ದು ಶಾಶ್ವತ ನೀರಾವರಿ ಯೋಜನೆಗೆ ಕಾವೇರಿ ನಿಗಮ ವ್ಯವಸ್ಥಾಪಕ ನಿರ್ದೇಶಕರು ಈ ಯೋಜನೆ ಬಗ್ಗೆ ಟಿ.ಪಿ.ಆರ್. ತಯಾರಿಸಿ ಯೋಜನೆಯ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
11 ರಂದು ಬಂದ್: ಈಗಾಗಲೇ ಕೋಡಿಮಠದ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮಿ ಹಾಗೂ ಅಶೋಕ್ ಹಾರನಹಳ್ಳಿ ಮಾರ್ಗದರ್ಶನದಲ್ಲಿ ಜುಲೈ 11ರಂದು ಅರಸೀಕೆರೆ ಬಂದ್ಗೆ ಕರೆ ನೀಡಿರುವುದಾಗಿ ರೈತ ಸಂಘ ಮುಖಂಡ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಹೇಳಿದರು.
ಕಳೆದ 22 ದಿನದಿಂದ ಧರಣಿ ಮಾಡಿದರೂ ಈ ಭಾಗದ ರೈತರ ಬಗ್ಗೆ ಜನಪ್ರತಿನಿಧಿಗಳು ಆಡಳಿತ ಜಿಲ್ಲಾಧಿಕಾರಿಗಳು ಗಮನ ಕೊಡದಿರುವುದು ದುರದೃಷ್ಟಕರ ಎಂದರು.
ಸರ್ಕಾರಕ್ಕೆ ಮನವಿ: ಪ್ರತಿಭಟನಾ ಸ್ಥಳಕ್ಕೆ ಸಣ್ಣನೀರಾವರಿ ಇಲಾಖೆ ಎಂಜಿನಿಯರ್ ಉಮೇಶ್ ಭೇಟಿ ನೀಡಿ, ಈಗಾಗಲೇ ಯಗಚಿ ನೀರಾವರಿ ಅಭಿಯಂತರವರು ಈ ಯೋಜನೆ ಬಗ್ಗೆ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು ಈ ಯೋಜನೆಯ ಅನುಷ್ಠಾನದ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹಾರನಹಳ್ಳಿ ಸಮಗ್ರ ಕೆರೆಯ ಅಭಿವೃದ್ಧಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡರು ಹಾರನಹಳ್ಳಿ ಕೆರೆ ಅಭಿವೃದ್ದಿಪಡಿಸಲು ಸರ್ಕಾರಕ್ಕೆ ಯೋಜನೆ ತಯಾರಿಸಿ ಕಳುಹಿಸುವುದಾಗಿ ತಿಳಿಸಿದ್ದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಗೌಸ್ ಅಹಮದ್, ಗ್ರಾಪಂ ಮಾಜಿ ಅಧ್ಯಕ್ಷ ಹೆಚ್.ಎಸ್.ನಂದೀಶ್, ಗುರುಲಿಂಗಪ್ಪ, ಬಸವರಾಜು, ಆಟೋ ಚಾಲಕ ಸಂಘಧವರು, ಕೋಡಿಕೊಪ್ಪಲು, ಗುತ್ತಿನಕೆರೆ, ಹೆಬ್ಬಾರನಹಳ್ಳಿ, ಸುತ್ತಮುತ್ತಲ ಗ್ರಾಮಗಳ ರೈತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

