ಇಂದು ಭವನ ಉದ್ಘಾಟನೆ
ಅರಕಲಗೂಡು: ಇಲ್ಲಿನ ಪೇಟೆ ಮಾಚಗೌಡನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯಭವನದ ಉದ್ಘಾಟನೆಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾನುವಾರ ಉದ್ಘಾಟಿಸುವರು. ಶಾಸಕ ಎ.ಮಂಜು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಶಾಸಕ ಎಚ್.ಡಿ.ರೇವಣ್ಣ ಆಗಮಿಸುವರು. ಕಾರ್ಯಕ್ರಮ ನೇತೃತ್ವವನ್ನು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಛಲವಾದಿ ಸಮಾವೇಶ
ಅರಕಲಗೂಡು: ರಾಜ್ಯ ಮಟ್ಟದ ಛಲವಾದಿ ಮಹಾ ಸಮಾವೇಶ ಮಾ. 2ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದು, ತಾಲೂಕಿನ ಛಲವಾದಿ ಸಮುದಾಯದವರು ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳುವಂತೆ ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಹೆಚ್.ಆರ್.ನಾರಾಯಣ್ ಕೋರಿದ್ದಾರೆ. ಶನಿವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮನವಿ ಮಾಡಿದರು.ನಾಗೇಂದ್ರ, ಮಂಜುನಾಥ್, ಧರ್ಮಪಾಲ್, ಚಂದ್ರಣ್ಣ, ಸಣ್ಣಸ್ವಾಮಿ ಉಪಸ್ಥಿತರಿದ್ದರು.
ಬಸ್ ಸಂಚಾರದಲ್ಲಿ
ಇಂದು ವ್ಯತ್ಯಯ
ಹಾಸನ: ಬೆಂಗಳೂರಿನಲ್ಲಿ ಮಾ 2. ರಂದು ನಡೆಯಲಿರುವ ಖಾಸಗಿ ಸಮಾವೇಶಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಹಾಸನ ವಿಭಾಗದಿಂದ ಸುಮಾರು 300 ವಾಹನಗಳನ್ನು ಒಪ್ಪಂದ ಆಧಾರದ ಮೇಲೆ ನೀಡುತ್ತಿರುವ ಕಾರಣ ವಾಹನಗಳ ದೈನಂದಿನ ಸಂಚಾರದಲ್ಲಿ ಕೆಲ ವ್ಯತ್ಯಯ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಹಕರಿಸಬೇಕೆಂದು ಸಾರಿಗೆ ನಿಗಮ ನಿಯಂತ್ರಣಾಧಿಕಾರಿ ಕೋರಿದ್ದಾರೆ.
4 ರಿಂದ ಆರೋಗ್ಯ ಮೇಳ
ಹಾಸನ: ಜಿಲ್ಲೆಯ ಆಯುಷ್ ಇಲಾಖೆ ವತಿಯಿಂದ ಮಾ. 4, 5 ಮತ್ತು 6 ರಂದು ನಗರದ ಸಾಲಗಾಮೆ ರಸ್ತೆಯಲ್ಲಿ ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿರುವ ಹೇಮಾವತಿ ಕಲ್ಯಾಣ ಮಂಟಪ (ಗಂಗಾತೀರ್ಥ)ದಲ್ಲಿ ಆರೋಗ್ಯ ಮೇಳ ಆಯೋಜಿಸಲಾಗಿದೆ. ಈ ಆರೋಗ್ಯ ಮೇಳದಲ್ಲಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ, ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ವೈದ್ಯ ಪದ್ಧತಿಗಳ ಔಷಧಿಗಳನ್ನು ಉಚಿತವಾಗಿ ವಿತರಣೆ, ಮನೆ ಮದ್ದು ತಯಾರಿಕಾ ಪ್ರಾತ್ಯಕ್ಷತೆ, ಔಷಧಿ ಸಸ್ಯಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷತೆ, ಯೋಗ ಮತ್ತು ಪ್ರಾಣಾಯಾಮ ತರಬೇತಿಗಳು ಹಾಗೂ ಔಷಧಿಗಳ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ ಸಾರ್ವಜನಿಕರು ಈ ಆರೋಗ್ಯ ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಆಯುಷ್ ಅಧಿಕಾರಿ ಕೋರಿದ್ದಾರೆ.
ನೇರ ಸಂದರ್ಶನ
ಹಾಸನ: ಹಾಸನ ಅಂಚೆ ವಿಭಾಗದಲ್ಲಿ ಅಂಚೆ ಜೀವ ವಿಮೆ ಮತ್ತು ಗ್ರಾಮೀಣ ಅಂಚೆ ಜೀವ ವಿಮೆ ಸೇವೆಗಾಗಿ ನೇರ ಸಂದರ್ಶನದ ಮೂಲಕ ಏಜೆಂಟರನ್ನು ನೇಮಿಸಿಕೊಳ್ಳಲಾಗುವುದು. ಆಸಕ್ತರು ತಮ್ಮ ವಯಸ್ಸಿನ ದೃಢೀಕರಣ ಮತ್ತು ವಿದ್ಯಾರ್ಹತೆಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಮಾ.5ರಂದು ಬೆಳಗ್ಗೆ 11 ಕ್ಕೆ ಹಿರಿಯ ಅಂಚೆ ಅಧೀಕ್ಷಕರ ಕಚೇರಿ, ಹಾಸನ ವಿಭಾಗ, ಹಾಸನ ಇಲ್ಲಿ ಹಾಜರಾಗುವಂತೆಹಾಗೂ ಹೆಚ್ಚಿನ ವಿವರಗಳಿಗೆ ದೂರವಾಣಿ 08172-267004 ಇವರನ್ನು ಸಂಪರ್ಕಿಸುವಂತೆ ಹಾಸನ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಚಂದ್ರಶೇಖರಾಚಾರ್ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

