ವಿಜೃಂಭಣೆಯಿಂದ ನಡೆದ ಅಮೃತೇಶ್ವರಸ್ವಾಮಿ ರಥೋತ್ಸವ
ಅರಕಲಗೂಡು: ಇಲ್ಲಿನ ಪುರಾಣ ಪ್ರಸಿದ್ಧ ಅಮೃತೇಶ್ವರ ಸ್ವಾಮಿ ಅವರ ಮಹಾ ರಥೋತ್ಸವ ಶಿವರಾತ್ರಿ ಮರುದಿನವಾದ ಶುಕ್ರವಾರ ಬೆವಗ್ಗೆ ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ ಪಟ್ಟಣದ ರಥ ಬೀದಿಗಳಲ್ಲಿ ಕೃಷ್ಣಗಂಧೋತ್ಸವ ನಡೆದು, ನಂತರ ದೇವರ ವಿಗ್ರಹವನ್ನು ರಥಕ್ಕೆ ಏರಿಸಲಾಯಿತು. ತಹಸೀಲ್ದಾರ್ ಚಿದಾನಂದ ಸೇರಿದಂತೆ ಸಾವಿರಾರು ಭಕ್ತಾಧಿಗಳು ರಥೋತ್ಸವಕ್ಕೆ ಸಾಕ್ಷಿಯಾದರು. ಚಿದಾನಂದ ಅವರು ರಥಕ್ಕೆ ಪೂಜೆ ಸಲ್ಲಿಸಿದ ನಂತರ ವಿವಿಧ ಧಾರ್ಮಿಕ ವಿಧಿ ವಿಧಾನಗಳ ನಂತರ ರಥ ಎಳೆಯಲಾಯಿತು. ಪಟ್ಟಣದ ರಥ ಬೀದಿಗಳಲ್ಲಿ ಹರ್ಷೋದ್ಘಾರದಿಂದ ಭಕ್ತರು ರಥ ಎಳೆದರು. ಈ ವೇಳೆ ಉದ್ದೂರ್ ಸುರೇಶ್ ಮತ್ತು ತಂಡದವರ ವೀರಗಾಸೆಯಂತಹ ಜನಪದ ಕಾರ್ಯಕ್ರಮಗಳು ನಡೆದುವು.ಶಿವರಾತ್ರಿ ಮಹೋತ್ಸವ: ಶಿವರಾತ್ರಿ ಉತ್ಸವದ ಅಂಗವಾಗಿ ರುದ್ರಾಭಿಷೇಕ ಕಾರ್ಯಕ್ರಮ ಅಮೃತೇಶ್ವರ ಸ್ವಾಮಿ ದೇವಾಲಯದಲ್ಲಿ ಜರುಗಿತು.
ಮನಸೂರೆಗೊಂಡ ಸುಬ್ರಹ್ಮಣ್ಯ ಗೀತಗಾಯನ
ಹೊಳೆನರಸೀಪುರ: ಪಟ್ಟಣದ ಕೋಟೆಯಲ್ಲಿನ ಕಾಳಿಕಾಂಬ ಕಮಠೇಶ್ವರಿ ದೇವಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವು ಯುವ ಗಾಯಕ ಸುಬ್ರಹ್ಮಣ್ಯ ಅವರ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿ ನೆರೆದಿದ್ದ ಸಂಗೀತ ಪ್ರೇಮಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ತಾಲೂಕಿನ ಯುವ ಗಾಯನ ಪ್ರತಿಭೆಯಾದ ಸುಬ್ರಹ್ಮಣ್ಯ ಅವರಿಗೆ ಕನ್ನಡ ಮತ್ತು ಸಂಸ್ಕತಿ ಇಲಾಖೆಯು ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಡಿಯಲ್ಲಿ ಉತ್ತಮ ಅವಕಾಶವನ್ನು ಒದಗಿಸಿಕೊಟ್ಟಿತ್ತು. ಇದನ್ನು ಸದುಪಯೋಗಪಡಿಸಿಕೊಂಡ ಯುವ ಗಾಯಕ ಸುಬ್ರಹ್ಮಣ್ಯ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಯುವ ಗಾಯಕ ಸುಬ್ರಹ್ಮಣ್ಯ ಹಾಡಿದ ವಿಜಯ ವಿನಾಯಕನೇ.. ಗಣೇಶನ ಸ್ತುತಿ, ಮಾಮವತು ಸರಸ್ವತಿ, ಕಡಲಿಗೆ ಹಂಬಲಿಸಿದೆ ಮನ ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

