ಹಾಸನ

ಹೇಮಾವತಿ ಅರಸೀಕೆರೆ ತಾಪಂ ಅಧ್ಯಕ್ಷೆ

Published On :

ಅರಸೀಕೆರೆ: ತಾಲೂಕು ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಮರಟಗೆರೆ ಭೋವಿ ಕಾಲೋನಿಯ ಹೇಮಾವತಿ ಜಯಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶರತ್ ಘೋಷಿಸಿದರು.
ಎಚ್.ಟಿ.ಶಿವಮೂರ್ತಿ ರಾಜಿನಾಮೆಯಿಂದ ತೆರವಾಗಿದ್ದ ತಾಪಂ ಅಧ್ಯಕ್ಷ ಸ್ಥಾನ ಪ.ಜಾತಿಗೆ ಮೀಸಲಿದ್ದು ಇನ್ನುಳಿದ ನಾಲ್ಕು ತಿಂಗಳ ಅವಧಿಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ನರಸೀಪುರ ತಾಪಂ ಕ್ಷೇತ್ರದ ಹೇಮಾವತಿ ಜಯಣ್ಣ ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು.
ಆಯ್ಕೆ ನಂತರ ಮಾತನಾಡಿದ ನೂತನ ಅಧ್ಯಕ್ಷರು ತಮ್ಮ ಆಯ್ಕೆಗೆ ಸಹಕಾರ ನೀಡಿದ ಎಲ್ಲಾ ಸದಸ್ಯರಿಗೆ ಹಾಗೂ ಶಾಸಕರಿಗೆ ಹಾಗೂ ಪಕ್ಷದ ಮುಖಂಡರಿಗೆ ಅಭಿನಂದಿಸಿದ ಅವರು ತಮ್ಮ ಕಡಿಮೆ ಅವಧಿಯಲ್ಲಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಸದಸ್ಯರ ಸಹಕಾರ ಹಾಗೂ ಶಾಸಕರ ಮಾರ್ಗದರ್ಶನದಂತೆ ನಡೆಸಲಾಗುವುದು ಎಂದರು.  
ಶಾಸಕ ಕೆ.ಎಂ.ಶಿವಲಿಂಗೇಗೌಡ, ಜಿ.ಪಂ.ಉಪಾಧ್ಯಕ್ಷ ಬಿಳಿಚೌಡಯ್ಯ, ತಾಪಂ ನಿಕಟಪೂರ್ವ ಅಧ್ಯಕ್ಷ ಹೆಚ್.ಟಿ.ಶಿವಮೂರ್ತಿ ಮಾತನಾಡಿದರು. ಸಭೆಯಲ್ಲಿ ಇಓ  ಟಿ.ಎನ್.ಮೂರ್ತಿ, ಉಪಾಧ್ಯಕ್ಷೆ ವಸಂತ ಹೊನ್ನಪ್ಪ ಇದ್ದರು.
ಬದಲಾಗದ ಉಪಾಧ್ಯಕ್ಷ ಸ್ಥಾನ: ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ದಂಡೇ ಇದ್ದರೂ ಅದನ್ನು ಬದಲಾಯಿಸುವ ಕಾರ್ಯಕ್ಕೆ ಜೆಡಿಎಸ್ ಮುಂದಾಗಲಿಲ್ಲ.
 ತಾಲೂಕು ಪಂಚಾಯ್ತಿ 2ನೇ ಅವಧಿಯ 20 ತಿಂಗಳ ಅಧಿಕಾರ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.
ಹಾಲಿ ಉಪಾಧ್ಯಕ್ಷೆ ವಸಂತಾ ಹೊನ್ನಪ್ಪ ಅಧಿಕಾರದಲ್ಲಿ ಮುಂದುವರೆದಿದ್ದು, ಜೆಡಿಎಸ್ನ ಆಂತರಿಕ ಒಪ್ಪಂದದಂತೆ ಚುನಾವಣೆ ನಡೆದ ದಿನದಿಂದಲೂ ಮೂವರು ಅಧ್ಯಕ್ಷರು ಬದಲಾದರೂ ಉಪಾಧ್ಯಕ್ಷ ಸ್ಥಾನದಲ್ಲಿ ಯಾವುದೇ ಬದಲಾವಣೆ ನಡೆಯಲಿಲ್ಲ ಎಂಬುದು ರಾಜಕೀಯ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.


ನೀರೆಯರದ್ದೇ ಕಾರುಬಾರು
ತಾಪಂನಲ್ಲಿ 26 ಸದಸ್ಯ ಬಲವಿದ್ದು ಆ ಪೈಕಿ 15 ಮಂದಿ ಮಹಿಳೆಯರು ಉಳಿದ 11 ಮಂದಿ ಪುರುಷರು ಸದಸ್ಯರಾಗಿದ್ದಾರೆ. ಹಾಲಿ ಉಪಾಧ್ಯಕ್ಷೆ ವಸಂತ ಹೊನ್ನಪ್ಪ ಮುಂದುವರಿದರೆ ನೂತನ ಅಧ್ಯಕ್ಷರಾಗಿ ಹೇಮಾವತಿ ಜಯಣ್ಣ ಆಯ್ಕೆಯಾಗುವ ಮೂಲಕ ತಾಪಂ ಆಡಳಿತದ ಹಿಡಿತ ಸಂಪೂರ್ಣ ಮಹಿಳೆಯರ ವಶಕ್ಕೆ ಬಂದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.