ಹಾಸನ

ಶ್ರೀನಗರ ನಿವಾಸಿಗಳಿಂದ ನಗರಸಭೆ ಮುತ್ತಿಗೆ

Published On :

ಹಾಸನ: ನಗರಸಭೆ ಹಿಂಭಾಗದಲ್ಲೇ ಇರುವ ಶ್ರೀನಗರ ಬಡಾವಣೆಯು ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು, ಶೌಚಾಲವಿಲ್ಲದೆ ಬಯಲಿನಲ್ಲಿ ಬಹಿರ್ದೆಸೆಗೆ ಹೋದಂತಹ ಮಹಿಳೆಯರ ಮೇಲೆ ಅತ್ಯಾಚಾರ ಎಸಗುವಂತಹ ಪ್ರಕರಣಗಳು ನಡೆಯುತ್ತಿವೆ ಎಂದು ಆರೋಪಿಸಿ ಇಲ್ಲಿನ ಶ್ರೀನಗರ ನಿವಾಸಿಗಳು ಶನಿವಾರ ನಗರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.   ಮೂಲ ಸೌಕರ್ಯದಿಂದ ವಂಚಿತವಾಗಿರುವ ಇಲ್ಲಿನ ನಿವಾಸಿಗಳು ಶೌಚಾಲಯವಿಲ್ಲದ ಕಾರಣ ಬಯಲಿನಲ್ಲಿ ಬಹಿರ್ದೆಸೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಸದ ರಾಶಿ ಶಿಖರದಂತೆ ಇಲ್ಲಿ ನಿರ್ಮಾಣವಾಗಿರುವುದರಿಂದ ಕಸದ ರಾಶಿಯ ಹಿಂಭಾಗ ಕೆಲ ಮಾದಕ ವ್ಯಸತಿ ಯುವಕರು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಮಾದಕ ವ್ಯಸನಿಗಳು ಯುವಕರು ಇಲ್ಲಿನ ಮಹಿಳೆಯರಿಗೆ ತೊಂದರೆಯನ್ನು ನೀಡುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.  
ಅನೈತಿಕ ಚಟುವಟಿಕೆ: ಕಳೆದು ಎರಡು ದಿನಗಳ ಹಿಂದೆ ಮಹಿಳೆಯೊಬ್ಬರು ಬಹಿರ್ದೆಸೆಗೆ ಹೋದಂತಹ ಸಂದರ್ಭದಲ್ಲಿ ಕೆಲವ ಮಾದಕ ವ್ಯಸನಿ ಯುವಕರು ಆ ಮಹಿಳೆಯ ಬಾಯಿಯನ್ನು ಮುಚ್ಚಿಕೊಂಡು ಅತ್ಯಾಚಾರ ಎಸಗಲು ಎಳೆದುಕೊಂಡು ಹೋಗುತ್ತಿದ್ದರು. ಇದರಿಂದ ಇಲ್ಲಿನ ನಿವಾಸಿಗಳಿಗೆ ಇದರಿಂದ ತೊಂದರೆ ಉಂಟಾಗುತ್ತಿದೆ. ಮಾದಕ ವ್ಯಸನಿ ಯುವಕರು ಕಸದ ರಾಶಿಯ ಹಿಂದೆ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.


ವಿದ್ಯುತ್ ಶಾಕ್: ವ್ಯಕ್ತಿ ಸಾವು
ಹಾಸನ: ವಿದ್ಯುತ್ ಶಾಕ್ನಿಂದಾಗಿ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಬೊಮ್ಮನಾಯಕನಹಳ್ಳಿ ನಿವಾಸಿ ತಮ್ಮಣ್ಣಗೌಡರ ಪುತ್ರ ಕೆ.ಟಿ. ನಟರಾಜ್ (35) ಸಾವನ್ನಪ್ಪಿದ ದುರ್ದೈವಿ. ನಗರದ ಹೊಸ ಬಸ್ನಿಲ್ದಾಣ ಬಳಿ ಕೆಇಬಿ ಗುತ್ತಿಗೆದಾರರ ಮೂಲಕ ವೈರಿಂಗ್ ಕೆಲಸ ಮಾಡಲು ನಟರಾಜ್ ಬಂದಿದ್ದರು. ವೈರಿಂಗ್ ಕೆಲಸ ಮಾಡುವಾಗ ವಿದ್ಯುತ್ ಬಂದ್ ಮಾಡದ ಕಾರಣ ಈ ದುರ್ಘಟನೆ ಸಂಭವಿಸಿದೆ. ಈ ಕೂಡಲೇ ಸಾವಿನ ಬಗ್ಗೆ ತನಿಖೆ ಆಗಬೇಕು ಎಂದು ಸಂಬಂಧಿಕರು ಆಗ್ರಹಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ತೋಟಕ್ಕೆ ಬೆಂಕಿ: ಲಕ್ಷಾಂತರ ರು. ನಷ್ಟ
ಅರಸೀಕೆರೆ: ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರು. ಮೌಲ್ಯ ಬೆಳೆ ನಷ್ಟ ಆಗಿರುವ ತಾಲೂಕಿನ ಬಾಗೇಶಪುರ ಗ್ರಾಮದಲ್ಲಿ  ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ತಾಲೂಕಿನ ಬಾಗೇಶಪುರ ಗ್ರಾಮದ ನಾಗಭೂಷಣ, ಶ್ರೀನಿವಾಸಮೂರ್ತಿ ಎಂಬುವರ ತೋಟದಲ್ಲಿದ್ದ 350 ತೆಂಗಿನ ಸಸಿ, 80 ಮಾವಿನಗಿಡ, 10 ಸಪೋಟಾ ಸಸಿ ಸೇರಿದಂತೆ ಸುಮಾರು 28 ಎಕರೆ ಪ್ರದೇಶದಲ್ಲಿದ್ದ ಅಪಾರ ಪ್ರಮಾಣದ ಜಾನುವಾರು ಮೇವು ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿದೆ. ದುರ್ಘಟನೆಗೆ ಕಾರಣ ತಿಳಿದುಬಂದಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಹಾಸನ: ಆಲೂರು ತಾಲೂಕು ಮಲ್ಲೇಶ್ವರ ಗ್ರಾಮದ ಸ್ವಾಮಿಗೌಡ ಎಂಬವರ ಪುತ್ರಿ  ವೇದಾವತಿ (ರೇಷ್ಮಾ) (18) ಇತ್ತೀಚೆಗೆ ಮನೆಯಿಂದ ಹಾಸನದ ರಾಜೀವ್  ನರ್ಸಿಂಗ್ ಕಾಲೇಜಿಗೆ ವ್ಯಾಸಂಗ ಮಾಡಲು ಹೋಗಿದ್ದು ಸಂಜೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಎಣ್ಣೆಗೆಂಪು ಸಾಧಾರಣ ಮೈಕಟ್ಟು, ಸುಮಾರು 4.6 ಅಡಿ ಎತ್ತರವಿದ್ದು, ಕನ್ನಡ ಮಾತನಾಡುತ್ತಾರೆ. ಮನೆ ಬಿಟ್ಟಾಗ ಕಾಫಿ ಬಣ್ಣದ ಹೂವಿನ ಡಿಸೈನ್ ಇರುವ ಚೂಡಿದಾರ ಧರಿಸಿದ್ದರು. ಈಕೆಯ ಬಗ್ಗೆ ಮಾಹಿತಿ ದೊರೆತಲ್ಲಿ ಆಲೂರು ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ತಿಳಿಸುವಂತೆ ಕೋರಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.