ಹಾಸನ

ಜಿಲ್ಲಾ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯ

Published On :

ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಎರಡು ದಿನಗಳ ಕಾಲ ನಗರದ ಹಾಸನಾಂಬ ಕಲಾಕ್ಷೇತ್ರದ ಕೆ.ಸಣ್ಣೇಗೌಡ ವೇದಿಕೆಯಲ್ಲಿ ನಡೆದ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಪ್ರಮುಖ ಮೂರು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಟಿ ಜಿಲ್ಲೆ ಪಶ್ಚಿಮ ಘಟ್ಟದ ಸೆರಗಿನಲ್ಲಿ ಬರುವ ಅರೆ ಮಲೆನಾಡು ಜಿಲ್ಲೆ. ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಖ್ಯಾತವಾಗಿರುವಂತೆಯೇ ನಿತ್ಯಹರಿದ್ವರ್ಣದ ಮಲೆನಾಡು ಪ್ರದೇಶವನ್ನು ಹೊಂದಿದೆ. ಜಿಲ್ಲೆಯ ಸಕಲೇಶಪುರ, ಆಲೂರು, ಅರಕಲಗೂಡು ತಾಲೂಕುಗಳ ರೈತರು ಸದಾ ಕಾಲ ಆನೆಗಳ ದಾಳಿಯಿಂದ ಜೀವಹಾನಿ ಮತ್ತು ಬೆಳೆಹಾನಿ ಅನುಭವಿಸಿದರೆ, ಅರಸೀಕೆರೆ, ಹೊಳೆನರಸೀಪುರ, ಅರಕಲಗೂಡು ಭಾಗದ ಬಯಲು ಸೀಮೆಯ ಜನ ಚಿರತೆಗಳ ಹಾವಳಿಯಿಂದ ಜೀವಹಾನಿಗೆ ತುತ್ತಾಗಿದ್ದಾರೆ. ಅರಸೀಕೆರೆಯಲ್ಲಿ ಕರಡಿಗಳ ದಾಳಿ ನಡೆಯುತ್ತಿದೆ. ಬಹಳ ಮುಖ್ಯವಾಗಿ ಆನೆಗಳಿಂದ ಜನರು ತುಂಬಾ ತೊಂದರೆ ಎದುರಿಸುತ್ತಿದ್ದು, ಸರ್ಕಾರ ವಾಸ್ತವ ನೆಲೆಗಟ್ಟಿನಲ್ಲಿ ಪ್ರಾಣಿ ಮತ್ತು ಮನುಷ್ಯರಿಗೆ ರಕ್ಷಣೆ ನೀಡಬೇಕು.
ಟಿ ಈ ನಾಡಿಗೆ ಸಾಂಸ್ಕೃತಿಕವಾಗಿ ಮಹತ್ವದ ಹೆಗ್ಗುರುತುಆಗಿರುವ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಜಾಗತಿಕ ಪರಂಪರೆಗೆ ಕೊಡುಗೆ ನೀಡಿದೆ. ಈ ನಿಟ್ಟಿನಲ್ಲಿ ಆರಂಭಗೊಂಡ ಹೊಯ್ಸಳ ಉತ್ಸವ ವ್ಯವಸ್ಥೆಯ ಇಚ್ಛಾಶಕ್ತಿಯ ಕೊರತೆಯಿಂದ ಕಳೆದ ಒಂದು ದಶಕದಿಂದ ನೆನಗುದ್ದಿಗೆ ಬಿದ್ದಿದೆ.ಇದರಿಂದಾಗಿ ಜಿಲ್ಲೆಯ ಕಲಾವಿದರು ಸೊರಗುವಂತಾಗಿದೆ, ಸಾಂಸ್ಕೃತಿಕ ಕಲೆಗಳ ಜೀವಂತಿಕೆಗೆ ಜಡ್‌ಡು ಹಿಡಿದಂತಾಗಿದೆ. ಆದ್ದರಿಂದ ಸರ್ಕಾರ ಆದ್ಯತೆ ಮೇರೆಗೆ ಹೊಯ್ಸಳೋತ್ಸವಕ್ಕೆ ಮರುಚಾಲನೆ ಕೊಡಬೇಕಾಗಿದೆ. ಸಂಭ್ರಮದ ಹೊಯ್ಸಳೋತ್ಸವ ವಿಳಂಬವಿಲ್ಲದೆ ನಡೆಯಬೇಕು.
ಟಿ ಜಿಲ್ಲೆಯು ಶೈಕ್ಷಣಿಕವಾಗಿ ಅನೇಕ ಮೈಲಿಗಲ್ಲುಗಳನ್ನು ದಾಟಿದ್ದರೂ ಸಹಾ ವಿಶ್ವ ವಿದ್ಯಾನಿಲಯದ ಕೊರತೆಯನ್ನು ಎದುರಿಸುತ್ತಿದೆ. ಹಾಸನ ಜಿಲ್ಲೆಯಲ್ಲಿ 1992ರಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭವಾಗಿದೆ ಮತ್ತು ಅಗತ್ಯ ಜಾಗವೂ ಇದೆ ಅದಾಗ್ಯೂ ವಿಶ್ವಿ ವಿದ್ಯಾನಿಲಯದ ಕೊರತೆ ಇದೆ. ಇದನ್ನು ಮನಗಂಡ ಸರ್ಕಾರ ತ್ವರಿತ ಗತಿಯಲ್ಲಿ ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸಬೇಕು ಮತ್ತು ಶೈಕ್ಷಣಿಕ ಉನ್ನತಿಗೆ ನೆರವಾಗಬೇಕು ಎಂಬ ಮೂರು ವಿಷಯಗಳನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಆಗ್ರಹಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.