ಹಾಸನ

ಭಾಷೆ ಬೆಳವಣಿಗೆಗೆ ಹೋರಾಟ ಅಗತ್ಯ

Published On :

ಕನ್ನಡಪ್ರಭ ವಾರ್ತೆ  ಹಾಸನ  ಮಾ 2
ಭಾಷೆಯ ಉಳಿವಿಗೆ ಹಾಗೂ ಬೆಳವಣಿಗೆಗೆ ಪ್ರಸ್ತುತ ಹೋರಾಟದ ಕನ್ನಡದ ಮನಸ್ಸುಗಳು ಮಾಯವಾಗಿವೆ ಎಂದು ವಿಮರ್ಶಕ ಗಿರಡ್ಡಿ ಗೋವಿಂದರಾಜು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದ ಕೆ.ಸಣ್ಣೇಗೌಡ ವೇದಿಕೆಯಲ್ಲಿ ಶನಿವಾರ ನಡೆದ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಭಾಷಣ ಮಾಡಿದ ಅವರು, ಹಿಂದೆ ಕನ್ನಡ ಭಾಷೆ ಉಳಿವೆಗೆ ಹಾಗೂ ಬೆಳಣಿಗೆಗೆ ಗೋಕಾಕ್ ನಂತರ ಚಳವಳಿಗಳನ್ನು ನಡೆಸಬೇಕಾಗಿತ್ತು. ವಿಪರ್ಯಾಸ ಅಂದ್ರ ಪ್ರಸ್ತುತ ಕನ್ನಡಕ್ಕಾಗಿ ಹೋರಾಟ ಮಾಡುವಂತ ಮನಸ್ಸುಗಳೇ ಮಾಯವಾದಂತಾಗಿವೆ ಎಂದು ಹೇಳಿದರು.
ಆಂಗ್ಲ ಭಾಷೆ ಮೋಕ್ಷ ನೀಡಲ್ಲ:  ಆಂಗ್ಲಭಾಷೆಯ ವ್ಯಾಮೋಹ ಜಾಗತಿಕ ಜಗತ್ತಿನಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಆ ಭಾಷೆಯನ್ನು ಕಲಿಯುವಂತೆ ಒತ್ತಡ ಹಾಕಲಾಗುತ್ತದೆ. ಆರ್ಥಿಕವಾಗಿ ಆಂಗ್ಲ ಭಾಷೆ ಮೋಕ್ಷ ನೀಡುತ್ತದೆ. ಅದಕ್ಕೆ ಆಂಗ್ಲ ಭಾಷೆ ಕಲಿಯುವುದಕ್ಕೆ ಯಾರ ಅಡ್ಡಿಯೂ ಇಲ್ಲ. ಆದ್ರೆ ಕಲೆ ಮತ್ತು ಸಂಸ್ಕಣತಿಯನ್ನು ಅಳಿವಿನ ಅಂಚಿಗೆ ತಳ್ಳಿ ಬೇರೆ ಭಾಷೆಯನ್ನು ಬೆಳೆಸುವುದು ಸರಿಯಲ್ಲ ಎಂದ ಅವರು, ಇತರೆ ರಾಜ್ಯದವರಂತೆ ಕನ್ನಡಿಗರು ಕನ್ನಡ ಭಾಷೆ ಪ್ರೀತಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಬಳಸುವಂತೆ ಮಾಡುವಲ್ಲಿ ನಮ್ಮ ಸರ್ಕಾರಗಳು ವಿಫಲಗೊಂಡಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿಯೇ ಒಂದನೆ ತರಗತಿಯಿಂದ ಇಂಗ್ಲಿಷ್ ಭಾಷೆ ಕಡ್ಡಾಯಗೊಳಿಸಿರುವುದು ದುರಾದುಷ್ಟಕರ ಸಂಗತಿಯಾಗಿದೆ ಎಂದ ಅವರು, ಇದರಿಂದಾಗುವ ದುಷ್ಪರಿಣಾಮ ವನ್ನು ಎಲ್ಲರೂ ಎದುರಿಸಬೇಕಾಗಿದೆ ಎಂದು ಎಚ್ಚರಿಸಿದ್ದರು.
ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ಸಾಹಿತ್ಯ ಸಮ್ಮೇಳನಗಳಿಗೆ ರಾಜಕಾರಣಿಗಳನ್ನು ಆಹ್ವಾನಿಸಬಾರದು ಎಂಬ ತಪ್ಪು ಕಲ್ಪನೆ ಎಲ್ಲರ ಮೇಲಿದೆ. ರಾಜಕೀಯ ನಾಯಕರಿಗೆ ಸಾಹಿತ್ಯದ ಬಗ್ಗೆ ಜ್ಞಾನ ಕಡಿಮೆ ಇರಬಹುದು. ಆದರೆ ನಮ್ಮ ಸಾಹಿತ್ಯ ಪರಂಪರೆ ಪ್ರೀತಿಸುವ ಗುಣ ಅವರಲ್ಲೂ ಹೆಚ್ಚಾಗಿಯೇ ಇದೆ. ಸಾಹಿತ್ಯಿಕವಾಗಿ ನಡೆಯುವ ಎಲ್ಲ ವಿಚಾರಗಳಿಗೆ ಕಾರ್ಯಕ್ರಮಗಳಿಗೆ ಯಾವುದೇ ಬೆಂಬಲವನ್ನು ನೀಡಲು ರಾಜಕಾರಣಿಗಳು ಬದ್ಧರಿರುತ್ತಾರೆ.
 ನಮ್ಮ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ ಉಳಿಸಿ, ಬೆಳಸಬೇಕಾದ ಜವಬ್ದಾರಿ ಎಲ್ಲರ ಮೇಲಿದ್ದು ರಾಜಕೀಯ ನಾಯಕರು ಇದರಿಂದ ಹೊರತಾಗಿಲ್ಲ ನಾವುಗಳು ಇದರಲ್ಲಿ ಪಾಲುದಾರರು ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್, ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ, ಕಸಾಪ ಗೌರವ ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪ, ನಗರಸಭಾ ಸದಸ್ಯೆ ಅಂಬಿಕಾ ರವಿಶಂಕರ್, ಪೊಟಾಟೋ ಕ್ಲಬ್ ಅಧ್ಯಕ್ಷ ಯೋಗಾರವುಶ್, ಹೊಯ್ಸಳ ಸಿರಿ ಗೌರವ ಸಂಪಾದಕ ಡಾ. ಎಚ್.ಎಲ್. ಮಲ್ಲೇಶ್‌ಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಜೆ.ಎಂ. ರಾಮಚಂದ್ರ, ಕಲಾವಿದ ಬೆಂಗಳೂರು ನಾಗೇಶ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್.ಜನಾರ್ದನ್, ಗೌರವ ಕಾರ್ಯದರ್ಶಿ ಸಿ.ಕೆ.ಹರೀಶ್   ಮತ್ತಿತರರು ಉಪಸ್ಥಿತರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.