ಹಾಸನ

ಮಹಿಳಾ ಸಂಘಟನೆಗಳಲ್ಲಿ ಐಕ್ಯತೆ ಅಗತ್ಯ

Published On :

ಕನ್ನಡಪ್ರಭ ವಾರ್ತೆ  ಹಾಸನ  ಮಾ 2
ಶ್ರೀಕೆಂಪು ಚೆಲುವಾಜಮ್ಮಣ್ಣಿಯವರ ಮಹಿಳಾ ಸಮಾಜದ ಅಮೃತ ಮಹೋತ್ಸವ ಹಾಗೂ ಕಟ್ಟಡದ ಶಂಕುಸ್ಥಾಪನೆಯನ್ನು ಭಾನುವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೆರವೇರಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸಂಘಟನೆಗಳಲ್ಲಿ ಐಕ್ಯತೆ ಬಹಳ ಮುಖ್ಯವಾಗಿದ್ದು, ಒಗ್ಗಟಿನಿಂದ ಕೂಡಿದಾಗ ಮಾತ್ರ ಸಂಘಟನೆಯ ಸಾಧ್ಯ. ಮಹಿಳೆಯರಿಲ್ಲದೆ ತಿಕ್ಕಾಟಗಳು, ಭಿನ್ನಾಭಿಪ್ರಾಯವಿದ್ದಾಗ ಆ ಸಮಾಜದ ಸಂಘಟನೆ ಸಾಧ್ಯವಿಲ್ಲ. ಅದನ್ನು ಅರಿತು ಮಹಿಳೆಯರು ಸಂಘಟನೆಯನ್ನು ಮಾಡಬೇಕು ಎಂದು ಹೇಳಿದರು.
1995ರಲ್ಲಿ ಮಹಿಳೆಯರಿಗೆ ರಾಜಕೀಯವಾಗಿ ಶೇ.33ರಷ್ಟು ಮೀಸಲಾತಿಯನ್ನು ನೀಡಬೇಕು ಎಂಬ ರಾಜ್ಯಾಂಗ ತಿದ್ದುಪಡಿ ವಿದೇಯಕವನ್ನು ಲೋಕಸಭೆಯಲ್ಲಿ ಮಂಡಿಸಿದ್ದಾಗ ಅಲ್ಲಿ ಹಿಂದುಳಿದವರಿಗೆ ನೀಡಬೇಕಾ ಅಲ್ಪಸಂಖ್ಯಾತರಿಗೆ ನೀಡಬೇಕಾ ಅಥವಾ ಮಹಿಳೆಯರಿಗೆ ನೀಡಬೇಕಾ ಎಂಬ ಬಗ್ಗೆ ಚರ್ಚೆಗಳು ನಡೆದವು. ಆಗ ಆ ವಿಧೇಯ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಆದ ಮತ್ತೊಂದು ನಾನು ಲೋಕಸಭಾಧ್ಯಕ್ಷರು ಹಾಗೂ ಎಲ್ಲಾ ರಾಜಕೀಯ ಪಕ್ಷದ ನಾಯಕರನ್ನು ಒಗ್ಗೂಡಿಸಿ ಮತ್ತೆ ಈ ಬಗ್ಗೆ ಚರ್ಚೆಗೆ ಕರೆ ತರಲಾಯಿತು.
ಹೆಣ್ಣುಮಕ್ಕಳ ಕ್ಷೇಮಾಭಿವೃದ್ಧಿಗೆ ಶ್ರೀಕೆಂಪು ಚೆಲುವಾಜಮ್ಮಣಣಿಯವರ ಮಹಿಳಾ ಸಮಾಜವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕಾಗಿಯೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳೆಯರ ಕ್ಷೇಮಕ್ಕಾಗಿ ದುಡಿಯುತ್ತಿರುವುದು ಉತ್ತಮ ಬೆಳೆವಣಿಯಾಗಿದ್ದು, ಇದೇ ರೀತಿ ಈ ಸಮಾಜವು ಮಹಿಳೆಯರ ಪರವಾಗಿ ಇನ್ನು ಹಲವಾರು ಕಾರ್ಯಕ್ರಮಗಳನ್ನು ನಡೆಸಲಿ ಎಂದು ಶುಭ ಹಾರೈಸಿದರು.
ಭವಾನಿ ರೇವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಮಹಿಳೆಯರಿಗಾಗಿ ವಸತಿ ನಿಲಯಗಳನ್ನು ಸ್ಥಾಪನೆ ಮಾಡುವ ಮೂಲಕ ಹೊರ ಜಿಲ್ಲೆಗಳಿಂದ ವರ್ಗಾವಣೆಗೊಂಡು ಈ ಜಿಲ್ಲೆಗೆ ಬರುವಂತಹವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಆಗ ಮಹಿಳೆಯರಿಗೆ ತುಂಬಾ ಸಹಕಾರಿಯಾಗಲಿದೆ ಎಂದರು.
ಜತೆಗೆ ಮಹಿಳೆಯರಿಗೆ ತರಬೇತಿ ಕೇಂದ್ರಗಳನ್ನು ತೆರೆದು ಮಹಿಳೆಯರು ತಾನು ಸ್ವಾವಲಂಬಿಯಾಗಿ ಬದುಕಲು ಅವಕಾಶವನ್ನು ಕಲ್ಪಿಸಿಕೊಡಬೇಕು. ಆರ್ಥಿಕವಾಗಿ ದುರ್ಬಲವಾಗಿರುವಂತಹ ಮಹಿಳೆಯರು ವೃತ್ತಿಪರ ಕೌಶಲ್ಯ ತರಬೇತಿ ಪಡೆದುಕೊಂದು ಕುಟುಂಬ ನಿರ್ವಹಣೆ ಸಲುಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.  ತಮ್ಮ ದುಡಿಮೆಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಇತ್ತೀಚೆಗೆ ವೃತ್ತಪರ ಕ್ಷೇತ್ರಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಿಗಿಂತ ಉತ್ತಮವಾಗಿ ಸಾಧನೆ ಮಾಡುವ ಮೂಲಕ ಪುರುಷರಿಗಿಂತ ನಾವು ಯಾವುದರಲ್ಲಿ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಡುವ ಮೂಲಕ ಜೀವನದಲ್ಲಿ ಮುನ್ನಡೆಯುತ್ತಿದ್ದಾರೆ. ಅದು ಉತ್ತಮ ಬೆಳೆವಣಿಗಿದೆ ಎಂದ ಅವರು, ಈ ಶ್ರೀಕೆಂಪು ಚೆಲುವಾಜಮ್ಮಣ್ಣಿಯವರ ಮಹಿಳಾ ಸಮಾಜವು ಇನ್ನು ಉತ್ತಮವಾಗಿ ಕೆಲಸವನ್ನು ನಿರ್ವಹಿಸುವ ಮೂಲಕ ರಾಜ್ಯದಲ್ಲಿ ಉತ್ತಮ ಮಹಿಳಾ ಸಮಾಜ ಎಂಬ ಕೀರ್ತಿಗೆ ಪಾತ್ರರಾಗಲಿ. ಅದಕ್ಕೆ ನಮ್ಮೆಲ್ಲರ ಸಹಕಾರ ಇದೆ ಎಂದು ಹೇಳಿದರು.
 ವೇದಿಕೆಯಲ್ಲಿ ಚನ್ನಮ್ಮ ದೇವೇಗೌಡ, ಶಾಸಕರಾದ ಎಚ್.ಡಿ.ರೇವಣ್ಣ, ಎಚ್.ಎಸ್.ಪ್ರಕಾಶ್, ಪಟೇಲ್ ಶಿವರಾಂ, ಜಿಪಂಅಧ್ಯಕ್ಷೆ ಅಂಬಿಕಾ ರಾಮಣ್ಣ, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಆನಂದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಚಿದಾನಂದ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೀತಾ, ಶ್ರೀಕೆಂಪು ಚೆಲುವಾಜಮ್ಮಣ್ಣಿಯವರ ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಆರ್.ಜಯಲಕ್ಷ್ಮೀ ಮುನಿವೆಂಕಟೇಗೌಡ ಹಾಗೂ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.